ಬೆಂಗಳೂರು: ಕನ್ನಡದ ಕೆಡಿ ಚಿತ್ರದ ‘ಸರಸೆ ಸರಿಸೆ ನಿನ್ನ ಸೆರಗಾ’ ಹಾಡು ದೇಶಾದ್ಯಂತ ಕಿಡಿ ಹೊತ್ತಿಸಿಬಿಟ್ಟಿದೆ.
ಅಷ್ಟೇ ಅಲ್ಲಾ ಬಹಳಷ್ಡು ಮಂದಿಯನ್ನು ಕೆರಳಿಸಿದೆ.ಈ ಹಾಡು ಯೂಟ್ಯೂಬ್ ಸೇರಿ ಎಲ್ಲಾ ಡಿಜಿಟಲ್ ಮೀಡಿಯಾಗಳಲ್ಲಿ ಡಿಲೀಟ್ ಆಗಿದೆ.ಆದರೂ ಕೂಡ ಆಕ್ರೋಶದ ಅಲೆ ಬುಗಿಲೇಳುತ್ತಲೇ ಇದೆ.
ಆ ಹಾಡಿಗೆ ನೃತ್ಯ ಮಾಡಲು ಲಕ್ಷಾಂತರ ರೂಪಾಯಿ ಪಡೆದ ನೋರಾ ಫತೇಹಿ ಈಗ ನಿರ್ದೇಶಕ ಪ್ರೇಮ್ ವಿರುದ್ಧವೇ ತಿರುಗಿ ಬಿದ್ದಿದ್ದಾರೆ.
ನನಗೆ ಕನ್ನಡ ಗೊತ್ತಿಲ್ಲ, ಸಾಹಿತ್ಯ ಅರ್ಥ ಆಗಲಿಲ್ಲ, ಅಂತೆಲ್ಲ ಹೇಳಿ ಡ್ಯಾಮೇಜ್ ಆದ ತಮ್ಮ ಇಮೇಜ್ ಸರಿ ಮಾಡಿಕೊಳ್ಳಲು ಪ್ರಯತ್ನ ಮಾಡಿಕೊಳ್ತಾ ಇದಾರೆ.
ಕೇವಲ ನೋರಾ ಮಾತ್ರವಲ್ಲ ಹಿಂದಿಯಲ್ಲಿ ಹಾಡು ಬರೆದ ರಕೀಬ್ ಆಲಂ ಕೂಡ ತಪ್ಪು ಪ್ರೇಮ್ ಅವರದ್ದೇ ಎಂದು ಹೇಳಿದ್ದಾರಂತೆ.
ಹಿಂದಿಯಲ್ಲಿ ಹಾಡಿಗೆ ಸಾಹಿತ್ಯ ಬರೆದ ರಕೀಬ್ ಅಲಂ ಹಾಗೂ ಹಾಡಿನಲ್ಲಿ ಹೆಜ್ಜೆ ಹಾಕಿದ್ದ ನೋರಾ ಫತೇಹಿ ಯಾಕೆ ಆ ರೀತಿ ಮಾತನಾಡಿದ್ರೋ ಗೊತ್ತಿಲ್ಲ,ನಾನು ಈ ಹಾಡಿಗೆ ಹೊಸದಾಗಿ ಸಾಹಿತ್ಯ ಬರೆದು ಸಾಂಗ್ ರೆಕಾರ್ಡ್ ಮಾಡಿ ರಿಲೀಸ್ ಮಾಡ್ತೀನಿ ಅಂತಾ ನಿರ್ದೇಶಕ ಪ್ರೇಮ್ ಹೇಳಿದ್ದಾರೆ.
ಇದೀಗ ನೋರಾ ಫತೇಹಿಗೆ ಫಜೀತಿ ಆಗಿದೆ.
ಅಲಿಗಢದ ಮುಸ್ಲಿಂ ಪರ್ಸನಲ್ ದಾರುಲ್ ಇಫ್ತಾ ಎಂಬ ಧಾರ್ಮಿಕ ಸಂಸ್ಥೆ, ಕನ್ನಡದ ”ಕೆಡಿ” ವಿರುದ್ಧ ಕಿಡಿ ಕಾರಿದೆ. ಇಷ್ಟೇ ಅಲ್ಲ ‘ಕೆಡಿ’ ಚಿತ್ರದಲ್ಲಿ ಸರಿಸೆ ಸೆರಗಾ ಹಾಡಿಗೆ ಕುಣಿದ ತಪ್ಪಿಗೆ ನೋರಾ ಫತೇಹಿ ವಿರುದ್ಧ ಫತ್ವಾ ಹೊರಡಿಸಿದೆ.
ಹಾಡಿನಲ್ಲಿ ಇಸ್ಲಾಮಿಕ್ ಬೋಧನೆಗಳಿಗೆ ವಿರುದ್ಧವಾದ ಮತ್ತು ಆಕ್ಷೇಪಾರ್ಹ ವಿಷಯಗಳಿವೆ ಎಂದು ಧಾರ್ಮಿಕ ಸಂಸ್ಥೆ ಹೇಳಿದೆ.ಇದು ಅಶ್ಲೀಲತೆಯನ್ನು ಉತ್ತೇಜಿಸುವ ಹಾಡು ಎಂದು ಆಕ್ರೋಶವನ್ನು ವ್ಯಕ್ತಪಡಿಸಿದೆ.
ಅಂತೂ ಸೆರಗು ಹಾಡು ದೇಶಾದ್ಯಂತ ದೊಡ್ಡ ಚರ್ಚೆ ಹುಟ್ಟುಹಾಕಿದೆ.
ಲೋಕಸಭೆಯಲ್ಲಿ ಕೂಡ ಈ ಹಾಡಿನ ಕುರಿತು ಚರ್ಚೆಯಾಗಿರೋದು ಕೂಡಾ ವಿಶೇಷ.
ಏಪ್ರಿಲ್ 30ರಂದು ಈ ಚಿತ್ರ ಬಿಡುಗಡೆಯಾಗಲಿದೆ ಎಂದು ಘೋಷಿಸಲಾಗಿದೆ. ಆದರೆ ಈಗ ಈ ಹಾಡಿನ ವಿವಾದಿಂದಾಗಿ ಅದೇನೇನಾಗುತ್ತೊ ಕಾದು ನೋಡಬೇಕಿದೆ.
