ಕರಾಚಿ: ಇರಾನ್ ಮೇಲೆ ಇಸ್ರೇಲ್ ಅಮೇರಿಕಾ ಯುದ್ದದ ಉದ್ವಿಗ್ನತೆಯ ಬಿಸಿ ಪಾಕಿಸ್ತಾನಕ್ಕೂ ಚೆನ್ನಾಗಿಯೇ ತಟ್ಟಿದೆ.
ಪಾಕಿಸ್ತಾನದಲ್ಲಿ ಈಗ ತೀವ್ರ ಇಂಧನ ಕೊರತೆ ಎದುರಾಗಿದ್ದು, ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಶರೀಷ್ ಅವರು ತುರ್ತು ಕ್ರಮ ಕೈಗೊಂಡಿದ್ದಾರೆ.
ಶಾಲೆಗಳಿಗೆ 2 ವಾರ ರಜೆ ಘೋಷಣೆ ಮಾಡಿದ್ದು, ಸರ್ಕಾರಿ ಕಚೇರಿಗಳು ವಾರದಲ್ಲಿ ನಾಲ್ಕು ದಿನಗಳ ಕಾಲ ಕಾರ್ಯ ನಿರ್ವಹಿಸುವಂತೆ ಸೂಚನೆ ನೀಡಿದ್ದಾರಂತೆ.
ಈ ಮೂಲಕ ಇಂಧನ ಸಂರಕ್ಷಣೆ ಮತ್ತು ಇಂಧನ ಸರಬರಾಜು ನಿರ್ವಹಣೆ ತಿಳಿಗೊಳಿಸಲು ಪ್ಧಾನಿ ಇಚ್ಚಿಸಿದ್ದಾರೆ.
ಪೆಟ್ರೋಲ್, ಡೀಸೆಲ್ ಮತ್ತು ಎಲೆಕ್ಟ್ರಿಕ್ ಬಳಕೆ ಮೇಲೂ ನಿಯಂತ್ರಣ ಕ್ರಮ ಕೈಗೊಂಡಿದ್ದು, ಸಾರ್ವಜನಿಕರು ಅನಾವಶ್ಯಕವಾಗಿ ಇಂಧನ ಬಳಕೆ ಮಾಡದಂತೆ ಮನವಿ ಮಾಡಲಾಗಿದೆ.
ಇಂಧನ ಕೊರತೆ ಯಿಂದಾಗಿ ಪಾಕಿಸ್ತಾನದಲ್ಲಿ ಕಳೆದ ದಿನಗಳಲ್ಲಿ ಬೆಲೆ ಏರಿಕೆ, ವಾಹನಗಳು ಮತ್ತು ಉದ್ಯಮಗಳಿಗೆ ತೊಂದರೆ ಉಂಟಾಗಿದೆ.ಆದ್ದರಿಂದ ಶಾಲೆಗಳನ್ನು ಬಂದ್ ಮಾಡುವುದು ಮತ್ತು ಕಚೇರಿಗಳ ಕೆಲಸಗಳನ್ನು ಕಡಿಮೆ ಮಾಡುವುದು ಸಧ್ಯದ ಪರಿಹಾರ ಎಂದು ಸರ್ಕಾರ ತಿಳಿಸಿದೆ.
