ಜೋಹಾನ್ಸ್ಬರ್ಗ್: ಜೋಹಾನ್ಸ್ಬರ್ಗ್ನ ಹೊರವಲಯದ ಚಿನ್ನದ ಗಣಿ ಸಮೀಪ ಇರುವ ಬೆಕ್ಕೆರ್ಸ್ಡನ್ ಟೌನ್ಶಿಪ್ ಬಳಿ ಬಂದೂಕುದಾರಿಗಳು ಸಾರ್ವಜನಿಕರ ಮೇಲೆ ದಾಳಿ ಮಾಡಿದ್ದು 9 ಮಂದಿ ಬಲಿಯಾಗಿದ್ದಾರೆ. ಹತ್ತು ಜನರು ಗಾಯಗೊಂಡಿದ್ದಾರೆ.
ಬೆಕ್ಕೆರ್ಸ್ಡಲ್ ಬಾರ್ ಮೇಲೆ ದಾಳಿಕೋರರು ನುಗ್ಗಿ ಸಿಕ್ಕಸಿಕ್ಕವರ ಮೇಲೆ ಗುಂಡಿನ ದಾಳಿ ಮಾಡಿದ್ದಾರೆ.
ಸ್ಥಳೀಯ ಕಾಲಮಾನ ರಾತ್ರಿ 1 ಗಂಟೆಯಲ್ಲಿ ಈ ಘಟನೆ ನಡೆದಿದೆ. ಭಾರತೀಯ ಕಾಲಮಾನ ಮುಂಜಾನೆ 4:30ರ ಸಮಯ.
ಈ ಗುಂಡಿನ ದಾಳಿಯಲ್ಲಿ ಬಲಿಯಾದ ಒಂಬತ್ತು ಮಂದಿಯಲ್ಲಿ ಮೂವರು ಬಾರ್ನ ಒಳಗೆಯೇ ಮೃತಪಟ್ಟರೆ ಉಳಿದವರು ಹೊರಗೆ ತಪ್ಪಿಸಿಕೊಳ್ಳಲು ಹೋಗುವಾಗ ಸಾವನ್ನಪ್ಪಿದ್ದಾರೆ.
ಬಾರ್ ಮೇಲೆ ದಾಳಿ ನಡೆಸಿದವರು ಎಷ್ಟು ಮಂದಿ ಇದ್ದರು ಎಂಬುದು ಗೊತ್ತಾಗಿಲ್ಲ. ಆದರೆ, ಹೆಚ್ಚಿನವರ ಬಳಿ ಪಿಸ್ತೂಲ್ ಗನ್ಗಳಿದ್ದವು. ಒಬ್ಬನ ಬಳಿ ಎಕೆ-47 ರೈಫಲ್ ಕೂಡ ಇತ್ತು. ಇವರು ಬಾರ್ಗೆ ನುಗ್ಗಿ, ವಿನಾಕಾರಣ ಕಂಡ ಕಂಡವರ ಮೇಲೆ ಗುಂಡಿನ ದಾಳಿ ಎಸಗಿರುವುದು ಗೊತ್ತಾಗಿದೆ.
ಈ ಆಗಂತುಕ ದಾಳಿಕೋರರು ತಮ್ಮ ಗುಂಡೇಟಿನಿಂದ ಮೃತಪಟ್ಟವರಿಂದ ಸೆಲ್ ಫೋನ್ ಇತ್ಯಾದಿ ವಸ್ತುಗಳನ್ನು ದೋಚಿ ಪರಾರಿಯಾಗಿದ್ದಾರೆ.
ಇದೇ ಡಿಸೆಂಬರ್ 6ರಂದು ಸೌತ್ ಆಫ್ರಿಕಾದ ಪ್ರಿಟೋರಿಯಾ ನಗರದ ಬಳಿಯೂ ಪಬ್ವೊಂದರ ಮೇಲೆ ಕ್ರಿಮಿನಲ್ಗಳು ದಾಳಿ ಎಸಗಿ ಹಲವರನ್ನು ಬಲಿಪಡೆದಿದ್ದರು.
ಆವತ್ತಿನ ದಾಳಿಯಲ್ಲಿ ಮೂವರು ಮಕ್ಕಳೂ ಬಲಿಯಾಗಿದ್ದರು.
ಸೌತ್ ಆಫ್ರಿಕಾದಲ್ಲಿ ಭೀಕರ ಶೂಟೌಟ್; ಒಂಬತ್ತು ಮಂದಿ ಬಲಿ