ಜಪಾನ್: ಉತ್ತರ ಜಪಾನ್ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದು ಹಲವಾರು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ, ಹಲವು ಮನೆಗಳು ನೆಲಸಮಗೊಂಡಿವೆ. ಜನರಲ್ಲಿ ಆತಂಕ ಮನೆ ಮಾಡಿದೆ.
ಸುನಾಮಿ ಅಲೆಗಳು ಎದ್ದಿವೆ. ಅಮೋರಿ ಕರಾವಳಿಯಿಂದ ಸುಮಾರು 80 ಕಿ.ಮೀ ದೂರದಲ್ಲಿರುವ ಪೆಸಿಫಿಕ್ ಮಹಾಸಾಗರದಲ್ಲಿ ರಾತ್ರಿ 11.15 ಕ್ಕೆ ಭೂಕಂಪ ಸಂಭವಿಸಿದೆ.
ಹಚಿನೋಹೆಯ ಹೋಟೆಲ್‌ನಲ್ಲಿ ಹಲವಾರು ಜನರು ಗಾಯಗೊಂಡಿದ್ದಾರೆ. ಇವಾಟೆ ಪ್ರಿಫೆಕ್ಚರ್‌ನ ಕುಜಿ ಬಂದರಿನಲ್ಲಿ 70 ಸೆಂ.ಮೀ.ವರೆಗಿನ ಸುನಾಮಿ ಅಲೆಗಳು ಎದ್ದಿವೆ.
ದುರ್ಬಲ ಪ್ರದೇಶಗಳಲ್ಲಿರುವ ನಿವಾಸಿಗಳು ಎತ್ತರದ ಪ್ರದೇಶಗಳಿಗೆ ತೆರಳುವಂತೆ ಸೂಚನೆ ನೀಡಲಾಗಿದೆ.
ಜಪಾನ್ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ:ಕೆಲ ಮನೆಗಳು ನೆಲಸಮ