ದಿತ್ವಾ ಚಂಡಮಾರುತಕ್ಕೆ‌ ಶ್ರೀಲಂಕಾದಲ್ಲಿ 123 ಮಂದಿ ಬಲಿ

ನವದೆಹಲಿ: ದಿತ್ವಾ ಚಂಡಮಾರುತದಿಂದಾಗಿ ಶ್ರೀಲಂಕಾದಲ್ಲು ಪ್ರವಾಹ, ಭೂಕುಸಿತ ಉಂಟಾಗಿ 123 ಯಾಗಿದ್ದಾರೆ.ನೂರಾರು ಮಂದಿ ಕಾಣೆಯಾಗಿದ್ದಾರೆ.

ಹಾಗಾಗಿ ಶ್ರೀಲಂಕಾ ಅಧ್ಯಕ್ಷ ಅನುರ ಕುಮಾರ ದಿಸಾನಾಯಕ ಅವರು ಶ್ರೀಲಂಕಾದ್ಯಂತ ತುರ್ತು ಪರಿಸ್ಥಿತಿ ಘೋಷಿಸಿದ್ದಾರೆ.

ಈ ಕುರಿತು ಶುಕ್ರವಾರ ನಡೆದ ಸರ್ವಪಕ್ಷ ಸಭೆಯ ನಂತರ ವಿರೋಧ ಪಕ್ಷದ ನಾಯಕರು ತುರ್ತು ಪರಿಸ್ಥಿತಿಯನ್ನು ಘೋಷಿಸಲು ಕರೆ ನೀಡಿದರು.

ದಿತ್ವಾ ಚಂಡಮಾರುತ ಶ್ರೀಲಂಕಾದಿಂದ ಭಾರತದ ಕರಾವಳಿಯ ಕಡೆಗೆ ಸಾಗುತ್ತಿದೆ ಎಂದು ಹವಾಮಾನ ಇಲಾಖೆಯ ಮಹಾನಿರ್ದೇಶಕ ಅತುಲಾ ಕರುಣನಾಯಕೆ ತಿಳಿಸಿದ್ದಾರೆ.

ಶ್ರೀಲಂಕಾದಲ್ಲಿ ಚಂಡಮಾರತದಿಂದಾಗಿ 130 ಜನರು ನಾಪತ್ತೆಯಾಗಿದ್ದಾರೆ, ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ನಿರೀಕ್ಷೆಯಿದೆ.

ದಿತ್ವಾ ಚಂಡಮಾರುತದ ನಂತರ, ಭಾರತವು ಶನಿವಾರ ಆಪರೇಷನ್ ಸಾಗರ್ ಬಂಧು ಅಡಿಯಲ್ಲಿ 12 ಟನ್ ಮಾನವೀಯ ನೆರವಿನೊಂದಿಗೆ C-130J ವಿಮಾನವನ್ನು ಕೊಲಂಬೊಗೆ ರವಾನಿಸಿತು. ಭಾರತದ ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ಅವರು ಟೆಂಟ್‌ಗಳು, ಟಾರ್ಪೌಲಿನ್‌ಗಳು, ಕಂಬಳಿಗಳು, ನೈರ್ಮಲ್ಯ ಕಿಟ್‌ಗಳು ಮತ್ತು ತಿನ್ನಲು ಸಿದ್ಧವಾದ ಊಟ ಮತ್ತಿತರ ವಸ್ತುಗಳನ್ನು ಸಹಾಯ ಮಾಡುವುದಾಗಿ ತಿಳಿಸಿದ್ದರು.

ಶುಕ್ರವಾರ 4.5 ಟನ್ ಒಣ ದಿನಸಿ, 2 ಟನ್ ತಾಜಾ ಆಹಾರ ಮತ್ತು ಅಗತ್ಯ ವಸ್ತುಗಳನ್ನು ತಲುಪಿಸಲಾಗಿತ್ತು.