ಮೈಸೂರು: ಅಖಿಲ ಕರ್ನಾಟಕ ಹಿಂದೂ ದೇವಾಲಯಗಳ ಅರ್ಚಕರ,ಆಗಮಿಕರ ಉಪಾಧಿವಂತರ ಒಕ್ಕೂಟಕ್ಕೆ ಮೈಸೂರು ತಾಲೂಕು ಕಾರ್ಯದರ್ಶಿಯಾಗಿ ಮೈಸೂರಿನ ಕೆ.ಮಂಜುನಾಥ್ ಅವರನ್ನು ನೇಮಕ ಮಾಡಲಾಗಿದೆ.
ಕೆ.ಮಂಜುನಾಥ್ ಅವರು ಮೈಸೂರಿನ ವರಕೋಡು ಗ್ರಾಮದಲ್ಲಿರುವ 960 ವರ್ಷಗಳ ಇತಿಹಾಸವಿರುವ ಹೊಯ್ಸಳರ ಕಾಲದಲ್ಲಿ ನಿರ್ಮಾಣಗೊಂಡಿರುವ ಶ್ರೀ ವರದರಾಜ ಸ್ವಾಮಿ ದೇವಾಲಯದಲ್ಲಿ ಅರ್ಚಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಅಖಿಲ ಕರ್ನಾಟಕ ಹಿಂದೂ ದೇವಾಲಯಗಳ
ಅರ್ಚಕರ-ಆಗಮಿಕರ ಮತ್ತು ಉಪಾಧಿವಂತರ ಒಕ್ಕೂಟದ ರಾಜ್ಯಾಧ್ಯಕ್ಷರೂ ಮತ್ತು ಸಚಿವರಾದ ದಿನೇಶ್ ಗುಂಡೂರಾವ್ ಅವರು ಕೆ.ಮಂಜುನಾಥ್ ಅವರನ್ನು ಮೈಸೂರು ತಾ. ಕಾರ್ಯದರ್ಶಿಯಾಗಿ ನೇಮಿಸಿ ನೇಮಕಾತಿ ಪತ್ರ ನೀಡಿದ್ದಾರೆ.
ಮುಂದಿನ ಐದು ವರ್ಷಗಳ ಕಾಲ ಮಂಜುನಾಥ್ ಅವರು ಈ ಹುದ್ದೆಯಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ.
ಕೂಡಲೇ ಸಂಘಟನೆಯಲ್ಲಿ ಕಾರ್ಯೋನ್ಮುಖರಾಗಿ ಕೇಂದ್ರ ಸಮಿತಿಯ ಎಲ್ಲಾ ಆದೇಶಗಳನ್ನು ಪರಿಪಾಲಿಸಿಕೊಂಡು ಸಕಾಲಕ್ಕೆ ವರದಿಗಳನ್ನು ಕಳುಹಿಸಬೇಕೆಂದು ಪತ್ರದಲ್ಲಿ ಸೂಚಿಸಲಾಗಿದೆ.
