ಹುಕ್ಕೇರಿ ಬಂದ್ ಪೂರ್ಣ ಯಶಸ್ವಿ

Spread the love

ಹುಕ್ಕೇರಿ: ಕಬ್ಬಿಗೆ ಸೂಕ್ತ ಬೆಲೆ ನೀಡುವಂತೆ ಆಗ್ರಹಿಸಿ ಕರೆ ನೀಡಿದ್ದ ಹುಕ್ಕೇರಿ ಬಂದ್ ಯಶಸ್ವಿಯಾಗಿದೆ.

ಬೆಳಗಿನಿಂದಲೇ ಅಂಗಡಿ ಮುಂಗಟ್ಟುಗಳು ಬಂದ್ ಆಗಿದ್ದವು,ವಾಹನ ಸಂಚಾರ ಬೆರಳೆಣಿಕೆಯಷ್ಟಿತ್ತು.

ರೈತರ ಪ್ರತಿಭಟನೆ ನಡೆದು ಹತ್ತಾರು ದಿನವಾದರೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಸ್ಪಂದಿಸದ ಕಾರಣ ಕಬ್ಬುಬೆಳೆಗಾರರು ತೀವ್ರ ಆಕ್ರೋಶಗೊಂಡಿದ್ದಾರೆ.

ಜಿಲ್ಲಾಡಳಿತ ತನ್ನ ವ್ಯಾಪ್ತಿಯಲ್ಲಿ ಬೆಲೆ ಕೊಡಿಡಲು ಸಾಕಷ್ಟು ಪ್ರಯತ್ನಿಸಿ ಕೈ ಚೆಲ್ಲಿದೆ. ಕಬ್ಬಿಗೆ ಬೆಲೆ ಕೊಡಿಸಲು ಕಾರ್ಖಾನೆಗಳು ಮುಂದಾಗಲಿಲ್ಲ.

ಇದರಿಂದ ಕೆರಳಿದ ರೈತರು ಇಂದು ಹುಕ್ಕೇರಿ ಪಟ್ಟಣ ಬಂದ್ ಕರೆ ಕೊಟ್ಟಿದ್ದರು.ಹಾಗಾಗಿ ಪಟ್ಟಣ ಸಂಪೂರ್ಣ ಸ್ಥಭ್ದವಾಯಿತು.ಬಂದ್ ಪೂರ್ಣ ಯಶಸ್ವಿಯಾಯಿತು.