ಮೈಸೂರು: ಮೈಸೂರಿನ ಶ್ರೀರಾಂಪುರದ ಮೂಕಾಂಬಿಕಾ ಸಮೃದ್ದಿ ಬಡಾವಣೆಯಲ್ಲಿ ವಿಶ್ವ ಹಿಂದೂ ಪರಿಷತ್ ಮೈಸೂರು ಧರ್ಮ ಪ್ರಸಾರ ವಿಭಾಗದಿಂದ ಉತ್ಥಾನ ದ್ವಾದಶಿ ಪ್ರಯುಕ್ತ ಸಾಮೂಹಿಕ ತುಳಸಿ ಪೂಜೆ ನೆರವೇರಿಸಲಾಯಿತು.
ಮೂಕಾಂಬಿಕಾ ಸತ್ಸಂಗದವರು ತುಳಸಿ ದಾಮೋದರ ಸ್ತೋತ್ರ ಹಾಗೂ ಕಾರ್ತಿಕ ಸೋಮವಾರದ ಪ್ರಯುಕ್ತ ಶಿವ ಪಂಚಾಕ್ಷರಿ ಸ್ತೋತ್ರ, ಕಲ್ಯಾಣ ವೃಷ್ಟಿ ಸ್ತವದ ಪಾರಾಯಣ ಮಾಡಿದರು.
ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ ಕ್ಷೇತ್ರೀಯ ಸತ್ಸಂಗ ಪ್ರಮುಖರಾದ ಮಹಾಬಲೇಶ್ವರ ಹೆಗಡೆ ಅವರು ಕಾರ್ತಿಕ ಮಾಸದ ವಿಶೇಷಗಳು ಆ ಮಾಸದಲ್ಲಿ ಬರುವ ಹಬ್ಬಗಳ ಬಗ್ಗೆ ವಿವರಣೆ ನೀಡಿದರು.
ಮೂಕಾಂಬಿಕಾ ಸತ್ಸಂಗ ಬಳಗದ ವತಿಯಿಂದ
ತುಳಸಿ ಪೂಜೆಯನ್ನು ಸಾಮೂಹಿಕವಾಗಿ ಮಹಿಳೆಯರು ವಿವಿಧ ಭಜನೆ ಹಾಡುಗಳು ಹಾಗೂ ಸ್ತೋತ್ರಗಳನ್ನು ಪಾರಾಯಣ ಮಾಡಿ ಆಚರಿಸಿ ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ವಿಶ್ವ ಹಿಂದೂ ಪರಿಷತ್ ಮೈಸೂರು ಧರ್ಮ ಪ್ರಸಾರ ಪ್ರಮುಖ್ ಪುನೀತ್ ಜಿ ಅವರು, ನರಕಾಸುರ, ಬಲಿ ಚಕ್ರವರ್ತಿಗಳ ಪೌರಾಣಿಕ ಹಿನ್ನೆಲೆಯನ್ನು ತಿಳಿಸಿಕೊಟ್ಟರು.
ಮೂಕಾಂಬಿಕಾ ಸತ್ಸಂಗದ ಅಧ್ಯಕ್ಷರಾದ ಶುಭಾ ಅರುಣ್ ಮಾತನಾಡಿ ತುಳಸಿ ಪೂಜೆ ಮಹಿಳೆಯರಿಗೆ ವಿಶೇಷವಾದ ನಂಬಿಕೆ ಮತ್ತು ಭಕ್ತಿ.ತುಳಿಸೀ ವಿವಾಹವಾದ ದಿನವನ್ನು ಉತ್ಥಾನ ದ್ವಾದಶಿ ಎಂದು ಕರೆಯುತ್ತಾರೆ ಎಂದು ತಿಳಿಸಿದರು.
ಹಿಂದೆ ತುಳಸಿ ಹಬ್ಬವಾದ ನಂತರ ನಮ್ಮೆಲ್ಲರ ಮನೆಗಳಲ್ಲಿ ಶುಭ ಕಾರ್ಯಗಳಾದ ಗೃಹ ಪ್ರವೇಶ, ವಿವಾಹ ಮುಂತಾದ ಕಾರ್ಯಕ್ರಮಗಳು ನೆಡೆಯುತ್ತಿದ್ದವು. ಲೋಕಕಲ್ಯಾಣಕ್ಕಾಗಿ ನಮ್ಮ ಸತ್ಸಂಗದಿಂದ ಈ ಸಾಮೂಹಿಕ ತುಳಸಿ ಪೂಜೆಯನ್ನು ನೆರವೇರಿಸಿದ್ದೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮೂಕಾಂಬಿಕಾ ಸಮೃದ್ದಿ ಬಡಾವಣೆ ನಿವಾಸಿಗಳ ಹಿತರಕ್ಷಣಾ ಸಮಿತಿ ಅಧ್ಯಕ್ಷ ಕೆ. ಆರ್. ಗಣೇಶ್, ವಿಶ್ವ ಹಿಂದೂ ಪರಿಷತ್ ಉಪಾಧ್ಯಕ್ಷ ಜಗದೀಶ್ ಹೆಬ್ಬಾರ್, ಸತ್ಸಂಗ ಪ್ರಮುಖರಾದ ರಾಧಾ ಲಕ್ಷ್ಮಣರಾಜು, ಜಯಶ್ರೀ, ಸುಮತಿ ಸುಬ್ರಹ್ಮಣ್ಯ, ವಿಜಯೇಂದ್ರ, ಮಹೇಶ್, ಶುಭಾ ಅರುಣ್ ಸೇರಿದಂತೆ ಬಡಾವಣೆಯ ನಿವಾಸಿಗಳು ಹಾಗೂ ಮೂಕಾಂಬಿಕಾ ಸತ್ಸಂಗ ಬಳಗದ ಸದಸ್ಯರು ಉಪಸ್ಥಿತರಿದ್ದರು.

