ಮಂಡ್ಯ,ನ.2: ಪಾತ್ರೆ ತೊಳೆಯಲು ಹೋದ ಮೂವರು ವಿಧ್ಯಾರ್ಥಿಗಳು ನೀರಿನಲ್ಲಿ ಮುಳುಗಿ ಮೃತಪಟ್ಟ ಹೃದಯ ವಿದ್ರಾವಕ ಘಟನೆ ಮಂಡ್ಯ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕು ಮಹದೇವಪುರ ಸಮೀಪದ ಬೋರೆ ಗ್ರಾಮದ ಬಳಿ ಶನಿವಾರ ಸಂಜೆ ಈ ಘಟನೆ ನಡೆದಿದೆ.
ಅನಿ 9ನೇ ತರಗತಿ, ತರ್ಬೀನ್ 7ನೇ ತರಗತಿ, ಆಫ್ರಿನ್ 7ನೇ ತರಗತಿ ಓದುತ್ತಿದ್ದರು,
ಈ ವಿದ್ಯಾರ್ಥಿಗಳು ಮಹದೇವಪುರ ಸಮೀಪದ ರಾಮಸ್ವಾಮಿ ನಾಲೆಯಲ್ಲಿ ಕೊಚ್ಚಿ ಹೋಗಿದ್ದಾರೆ.
ಮೈಸೂರಿನ ಉದಯಗಿರಿಯ ಹಜಿರ ನಿಶ್ವಾನ್ ಅರೇಬಿಕ್ ಶಾಲೆ ವಿದ್ಯಾರ್ಥಿಗಳು. ಬಟ್ಟೆ, ಪಾತ್ರೆ ತೊಳೆಯುವ ಸಲುವಾಗಿ 15 ವಿದ್ಯಾರ್ಥಿಗಳನ್ನ ನಾಲ್ವರು ಸಿಬ್ಬಂದಿ ಕರೆತಂದಿದ್ದರು.
ಈ ವೇಳೆ ಓರ್ವ ವಿದ್ಯಾರ್ಥಿ ನೀರಿನಲ್ಲಿ ಮುಳುಗಿದ್ದ. ಆತನ ರಕ್ಷಣೆಗೆ ಹೋದವರು ಐವರು ಮುಳುಗಡೆಯಾಗಿದ್ದಾರೆ.
ಈ ವೇಳೆ ಮೂವರನ್ನ ಸ್ಥಳೀಯರು ರಕ್ಷಿಸಿದ್ದಾರೆ.ಉಳಿದ ಮೂವರು ನೀರು ಪಾಲಾಗಿದ್ದಾರೆ.
ಅರಕೆರೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

