ಒಕ್ಕಲಿಗರ ಕ್ಷೇಮಾಭಿವೃದ್ಧಿ ಸಂಘದಿಂದರಕ್ತದಾನಿ ಮಂಜು ಅವರಿಗೆ ಗೌರವ ಸನ್ಮಾನ

Spread the love

ಮೈಸೂರು: ರಕ್ತದಾನಿ ಮಂಜು ಅವರು ಮಾಡುತ್ತಿರುವ ಸಮಾಜ ಸೇವೆ ಯನ್ನು ಗುರುತಿಸಿ ಕೆ ಎಚ್ ಬಿ ಬಡಾವಣೆ, ಹೂಟಗಳ್ಳಿ
ಒಕ್ಕಲಿಗರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಸನ್ಮಾನಿಸಿ,ಗೌರವಿಸಲಾಯಿತು.

ಒಕ್ಕಲಿಗರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಕೆ ನಾಗೇಶ್ ಅವರ ಅಧ್ಯಕ್ಷತೆಯಲ್ಲಿ ನಡೆದ 2024 – 25 ನೇ ಸಾಲಿನ ಪ್ರತಿಭಾ ಪುರಸ್ಕಾರ ಮತ್ತು ಸನ್ಮಾನ ಸಮಾರಂಭದಲ್ಲಿ ರಕ್ತದಾನಿ ಮಂಜು ಅವರನ್ನು ಗೌರವಿಸಲಾಯಿತು.

ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಸೋಮೇಶ್ವರನಾಥ ಸ್ವಾಮೀಜಿ ವಹಿಸಿದ್ದರು. ಉದ್ಘಾಟನೆಯನ್ನು ಶಾಸಕ ಜಿ ಟಿ ದೇವೇಗೌಡ ಅವರು ನೆರವೇರಿಸಿದರು.

ವಿಶೇಷ ಆಹ್ವಾನಿತರಾಗಿ ಡಾ. ಎಸ್ ಪಿ ಯೋಗಣ್ಣ ಅಧ್ಯಕ್ಷರು ಸುಯೋಗ ಆಸ್ಪತ್ರೆ, ಶಿವಮೂರ್ತಿ ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಪಿ ಮಹದೇವ್ ಮಾಜಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರು ಹೂಟಗಳ್ಳಿ, ರವಿಕುಮಾರ್ ಅಧ್ಯಕ್ಷರು ನೇಗಿಲಯೋಗಿ ಸೇವಾ ಟ್ರಸ್ಟ್ ಮೈಸೂರು,ಲಲಿತಾ ನಾಗೇಶ್ ಗ್ರಾಮ ಪಂಚಾಯಿತಿ ಮಾಜಿ ಸದಸ್ಯರು ಕೆ ಎಚ್ ಬಿ ಹೊಟಗಳ್ಳಿ, ಟಿ ಜೆ ರಘು ವಕೀಲರು, ಎನ್ ಟಿ ದಾಸೇಗೌಡ ಅಧ್ಯಕ್ಷರು, ಕೆ ನಾಗೇಶ್ ಕಾರ್ಯಧ್ಯಕ್ಷರು, ಸಿ.ಬಿ ದೇವರಾಜು, ಶಂಕರ್ ಲಿಂಗಯ್ಯ ಉಪಾಧ್ಯಕ್ಷರು, ಬಿ ಕೃಷ್ಣಕುಮಾರ್, ನವ್ಯ ಪ್ರಕಾಶ್ ಪ್ರಧಾನ ಕಾರ್ಯದರ್ಶಿ, ಸುರೇಶ್ ಬಿ ಕೆ, ಖಜಾಂಚಿ ಐ ಎಂ ಮೋಹನ್, ಕಾರ್ಯದರ್ಶಿ ಎನ್ ಸಿ ನಾಗೇಶ್, ಸಹ ಕಾರ್ಯದರ್ಶಿ ಎಚ್ ಆರ್ ಮಂಜೇಗೌಡ, ಬಿ ಎಲ್ ಗಿರೀಶ್, ಎಂ ಮಲ್ಲೇಶ್, ಎಂ.ಬಿ ಮಂಜುನಾಥ್ ಸಂಚಾಲಕರು, ಪ್ರಸನ್ನ ಕುಮಾರ್ ಡಿ, ನಿರ್ದೇಶಕರುಗಳಾದ ದೇವೇಗೌಡ, ಧನಂಜಯ, ಪ್ರಕಾಶ್, ರಾಮೇಗೌಡ, ಅಶೋಕ್ ಚಂದ್ರ, ಸುಶೀಲ, ಸುಮಾ ಮತ್ತಿತರರು ಹಾಜರಿದ್ದರು.