ಮೈಸೂರು: ಭ್ರೂಣ ಹತ್ಯೆ ನಡೆಸುತ್ತಿದ್ದ ಪಾಪಿಗಳಿಗೆ ಪೊಲೀಸರು ಮತ್ತು ಅಧಿಕಾರಿಗಳು ಚಳಿ ಬಿಡಿಸಿದ್ದಾರೆ.
ಮೈಸೂರು ತಾಲೂಕು ಹನುಗನಹಳ್ಳಿಯಲ್ಲಿ
ಈ ಸಂಬಂಧ ಕೆಲವರನ್ನು ಬಂಧಿಸಿ ಬಿಸಿ ಮುಟ್ಟಿಸಿದ್ದಾರೆ. ಪೊಲೀಸರು ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿದರು.
ಆರೋಗ್ಯ ಇಲಾಖೆ ಡಿಡಿ ವಿವೇಕ್, ಮಂಡ್ಯ ಡಿಎಚ್ ಒ ಮೋಹನ್, ಮೈಸೂರು ಡಿಎಚ್ಒ ಪಿ.ಸಿ.ಕುಮಾರಸ್ವಾಮಿ ಅವರುಗಳ ನೇತೃತ್ವದಲ್ಲಿ ಖಚಿತ ಮಾಹಿತಿ ಮೇರೆಗೆ
ಕಾರ್ಯಾಚರಣೆ ನಡೆಯಿತು.
ದುಷ್ಕರ್ಮಿಗಳು ಐಷಾರಾಮಿ ಮನೆಯಲ್ಲಿ ಭ್ರೂಣ ಹತ್ಯೆಯಂತಹ ಹೀನ ಕೃತ್ಯ ಎಸಗುತ್ತಿದ್ದರು.
ಗ್ರಾಮೀಣ ಭಾಗದ ಮುಗ್ದ ಮಹಿಳೆಯರನ್ನ ಟಾರ್ಗೆಟ್ ಮಾಡಿ ಅವರ ತಲೆ ಕೆಡಿಸಿ, ಲಕ್ಷ ಲಕ್ಷ ಹಣ ಪಡೆದು ಸ್ಕ್ಯಾನಿಂಗ್ ಮಾಡಿಸುತ್ತಿದ್ದರು.
ಸ್ಕ್ಯಾನಿಂಗ್ ಮಾಡಿಸಿ,
ಹೊಟ್ಟೆಯಲ್ಲಿರುವ ಮಗು ಗಂಡೋ, ಹೆಣ್ಣೋ ಎಂದು ತಿಳಿದುಕೊಂಡು ಹೆಣ್ಣು ಮಗುವಾದರೆ ಗರ್ಭಪಾತ ಮಾಡಿಸುತ್ತಿದ್ದರು.
ಇದನ್ನೇ ದಂದೆ ಮಾಡಿಕೊಂಡು ಕೋಟಿ,ಕೋಟಿ ಹಣ ಸಂಪಾದನೆ ಮಾಡುತ್ತಿದ್ದರು ಪಾಪಿಗಳು.ಇನ್ನಾದರೂ ಈ ಹೀನ ಕೃತ್ಯಕ್ಕೆ ಕಡಿವಾಣ ಬೀಳುವುದೆ ಕಾದು ನೋಡಬೇಕಿದೆ.