ಮೈಸೂರು: ಮೈಸೂರಿನ ಅಗ್ರಹಾರ,
ಡಾ ಅಣ್ಣಾಜಪ್ಪನವರ ನವಗ್ರಹ ಶ್ರೀ ಮೃತ್ಯುಂಜಯಸ್ವಾಮಿ ದೇವಸ್ಥಾನದ ಆವರಣದಲ್ಲಿ ಶ್ರೀ ಪಾರ್ವತಿದೇವಿಯ 10ನೇ ವರ್ಷದ ವಾರ್ಷಿಕೋತ್ಸವ ಸಮಾರಂಭ ಹಮ್ಮಿಕೊಳ್ಳಲಾಗಿದೆ
ಅಕ್ಟೋಬರ್ 24 ರಂದು ಶುಕ್ರವಾರ ಶ್ರೀ ಪಾರ್ವತಿದೇವಿಯ 10ನೇ ವರ್ಷದ ವಾರ್ಷಿಕೋತ್ಸವ ಸಮಾರಂಭ ಪ್ರಯುಕ್ತ, ಪ್ರಾತಃಕಾಲ 6.30 ಕ್ಕೆ ಉದಯ ಲಗ್ನದಲ್ಲಿ ರುದ್ರಾಭಿಷೇಕ, ಪಂಚಾಮೃತ ಅಭಿಷೇಕ ನೆರವೇರಿಸಲಾಗುವುದು.
ಬೆಳಿಗ್ಗೆ 8-30 ಕ್ಕೆ ಗಣಪತಿ ಹೋಮ, ನವಗ್ರಹ ಹೋಮ, ಮೃತ್ಯುಂಜಯ ಹೋಮ, ಪಾರ್ವತಿದೇವಿ ದುರ್ಗಾ ಹೋಮ, ಬೆಳಿಗ್ಗೆ 10-30 ಗಂಟೆಗೆ ಪೂರ್ಣಾಹುತಿ, ಕುಂಭಾಭಿಷೇಕ ಹಾಗೂ ಮಧ್ಯಾಹ್ನ 12-30 ಕ್ಕೆ ಮಹಾಮಂಗಳಾರತಿ ನಂತರ ಪ್ರಸಾದ ವಿನಿಯೋಗ ಇರಲಿದೆ.
ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಭಗವಂತನ ಕೃಪೆಗೆ ಪಾತ್ರರಾಗಬೇಕೆಂದು ಶಿವಾರ್ಚಕರಾದ ಎಸ್.ಯೋಗಾನಂದ ಅವರು ಮನವಿ ಮಾಡಿದ್ದಾರೆ.