ಹುಣಸೂರು ಮುಸ್ಲಿಮ್ ಬ್ಲಾಕ್ ರಸ್ತೆಗಳು ಜಲ್ಲಿಮಯ: ಜನ ಸಂಚರಿಸುವುದು ಹೇಗೆ?

Spread the love

ಹುಣಸೂರು: ಅಪ್ಪ ಅಮ್ಮನ ಜಗಳದಲ್ಲಿ ಕೂಸು ಬಡವಾಯಿತು ಎಂಬ ಗಾದೆ ಮಾತು ಹುಣಸೂರಿಗೆ ಪಕ್ಕಾ ಅನ್ವಯಿಸುತ್ತದೆ.

ಯಾಕಂತೀರಾ, ಇಲ್ಲಿನ ರಸ್ತೆಗಳು ಕಾಂಕ್ರೀಟ್ ಕಂಡಿದ್ದವು, ಚೆನ್ನಾಗಿಯೇ ಇದ್ದವು, ಆದರು ಈಗ ರಿಪೇರಿ ಹೆಸರಿನಲ್ಲಿ ಚೆನ್ನಾಗಿದ್ದ ರಸ್ತೆಗಳನ್ನು ಕಿತ್ತು ಜಲ್ಲಿ ತುಂಬಿ ರಾಡಿ ಮಾಡಿಟ್ಟಿದ್ದಾರೆ.

ಇಡೀ ರಸ್ತೆ ಬರಿ ಜಲ್ಲಿ ಮಯವಾಗಿ ಬಿಟ್ಟಿದೆ, ರಸ್ತೆಯಲ್ಲಿ ವಯಸ್ಸಾದವರು ಮಕ್ಕಳು ಮಹಿಳೆಯರು ಸಂಚರಿಸಲು ಸಾಧ್ಯವೇ ಇಲ್ಲದಂತ ಪರಿಸ್ಥಿತಿ ನಿರ್ಮಾಣವಾಗಿದೆ.

ದ್ವಿಚಕ್ರ ವಾಹನದಲ್ಲಿ ಓಡಾಡಲೂ ಸಾಧ್ಯವಿಲ್ಲ,ದ್ವಿಚಕ್ರ ವಾಹನ ಚಲಿಸುವಾಗ ಜಲ್ಲಿಗಳು ಸಿಡಿದು ಅಕ್ಕ ಪಕ್ಕ ಓಡಾಡುವ ಜನರಿಗೆ ಹಾರಿದ ಉದಾಹರಣೆಗಳೂ ಇವೆ.ಇದರಿಂದ ಜಗಳವಾಗುತ್ತದೆಯೇ ವಿನಹ ಸಮಸ್ಯೆ ಬಗೆಹರಿಯುವುದಿಲ್ಲ.

ಇಲ್ಲಿ ನಾಲ್ಕು ಚಕ್ರದ‌‌ ವಾಹನಗಳು ಸಂಚರಿಸುವುದು ಕಷ್ಟ.ಶಾಲೆಗೆ ಹೋಗುವಾಗ ಸೈಕಲ್ ನಿಂದ ಬಿದ್ದು ವಿದ್ಯಾರ್ಥಿಗಳು ಗಾಯಗೊಂಡ ಉದಾಹರಣೆ ಕೂಡಾ ಇದೆ.

ಇದು ಹುಣಸೂರಿನ ಮುಸ್ಲಿಂ ಬ್ಲಾಕ್.ಇಲ್ಲಿನ ರಸ್ತೆಗಳದು ಇದೇ ಕಥೆ.ಇಲ್ಲಿನ ಮೂರು ರಸ್ತೆಗಳು ಸುಮಾರು ಒಂದುವರೆ ಕಿಲೋಮೀಟರ್ ನಷ್ಟು ಇದೇ ರೀತಿ ಆಗಿದೆ.ಈ‌ ಬಗ್ಗೆ ಕೇಳಿದರೆ ಯಾರು ಸರಿಯಾಗಿ ಉತ್ತರಿಸುವುದಿಲ್ಲ.

ನಗರಸಭೆ ಅಧ್ಯಕ್ಷರನ್ನು ಕೇಳಿದರೆ ವಾರ್ಡ್ ಸದಸ್ಯರನ್ನು ಕೇಳಿ ಅನ್ನುತ್ತಾರೆ, ನಗರ ಸಭೆಯ ಅಧಿಕಾರಿಗಳನ್ನು ಕೇಳಿದರೆ ವಾರ್ಡ್ ಸದಸ್ಯರನ್ನು ಕೇಳಿ ಎನ್ನುತ್ತಾರೆ‌ ಅಧಿಕಾರಿಗಳನ್ನು ಕೇಳಿದರೆ ಶಾಸಕರನ್ನು ಕೇಳಿ ಎನ್ನುತ್ತಾರೆ. ಹಾಗಾಗಿ ಇವರುಗಳ ಜಗಳದ ನಡುವೆ ಜನ ಹೈರಾಣಾಗುತ್ತಿದ್ದಾರೆ ಅಷ್ಟೇ.

ಮುಸ್ಲಿಂ ಬ್ಲಾಕ್ ವಾರ್ಡ್ ನ ಸದಸ್ಯರು ಕೂಡ ಮುಸಲ್ಮಾನರೆ ಆಗಿದ್ದಾರೆ. ಅವರದೇ ಬ್ಲಾಕ್ ನಲ್ಲಿ ಈ ರೀತಿ ರಸ್ತೆಗಳು ಗಬ್ಬೆದ್ದು ಹೋಗಿದ್ದರೂ ಅವರು ಗಮನಿಸದೇ ಇರುವುದು ನಿಜಕ್ಕೂ ದುರ್ದೈವದ ಸಂಗತಿ. ವಾರ್ಡ್ ಸದಸ್ಯರು ಈ ರಸ್ತೆಯಲ್ಲಿ ಸಂಚರಿಸಬೇಕು ಆಗ ಜನರ ಜಷ್ಟ ಅರಿವಾಗುತ್ತದೆ.

ಚೆನ್ನಾಗಿದ್ದ ರಸ್ತೆಗಳನ್ನು ಕೀಳುವ ಅಗತ್ಯ ಏನಿತ್ತು? ನಮಗೆ ಗೊತ್ತಿರುವ ಪ್ರಕಾರ ರಸ್ತೆ ಅಭಿವೃದ್ಧಿಗೆ ಬಿಲ್ ಆಗಿದೆ. ಈ ಬಗ್ಗೆ ಕೇಳಿದರೆ ಇಲ್ಲದ ಸಬೂಬು ಹೇಳುತ್ತಾರೆ. ಒಟ್ಟಾರೆ ಇದರಲ್ಲಿ ಯಾರು ಶಾಮಿಲಾಗಿದ್ದಾರೋ ಗೊತ್ತಿಲ್ಲ ತಕ್ಷಣ ರಸ್ತೆ ರಿಪೇರಿ ಆಗಬೇಕು ಎಂದು ಕರ್ನಾಟಕ ಪ್ರಜಾ ಪಾರ್ಟಿ ರೈತ ಪರ್ವ ಹುಣಸೂರು ತಾಲೂಕು ಅಧ್ಯಕ್ಷ ಚೆಲುವರಾಜು ಆಗ್ರಹಿಸಿದ್ದಾರೆ.

ರಸ್ತೆ ರಿಪೇರಿಗೆ ಬಿಲ್ ಆಗಿದ್ದರು ಇನ್ನೂ ರಸ್ತೆ ಸರಿ ಮಾಡದಿರುವುದು ಅನುಮಾನ ಹುಟ್ಟು ಹಾಕಿದೆ, ಸುಮಾರು ಮೂರು ತಿಂಗಳಿಂದ ಇದೇ ಕಥೆಯಾಗಿದೆ, ಇದರಲ್ಲಿ ಯಾರು ಶಾಮೀಲಾಗಿದ್ದಾರೊ,ಒಟ್ಟಾರೆ ಮುಸ್ಲಿಮ್ ಬ್ಲಾಕ್ ರಸ್ತೆಗಳು ಕೂಡಲೇ ರಿಪೇರಿ ಆಗಬೇಕು,ಜಲ್ಲಿಕಲ್ಲುಗಳಿಂದ ಜನರಿಗೆ ಮುಕ್ತಿ ಸಿಗಬೇಕು, ಒಟ್ಟಾರೆ ತಪ್ಪಿತಸ್ಥರು ಯಾರೇ ಆಗಿದ್ದರೂ ಕ್ರಮ ಕೈಗೊಳ್ಳಬೇಕು ಎಂದು ಚಲುವರಾಜು ಆಗ್ರಹಿಸಿದ್ದಾರೆ.