ಕೆ ಆರ್.ಪೇಟೆ: ಕೆ ಆರ್ ಪೇಟೆಯಲ್ಲಿ ಥಿಯೇಟರ್ ಗಳು ಗಬ್ಬೆದ್ದು ನಾರುತ್ತಿರುವ ಅವುಗಳ ವಿರುದ್ಧ ಕ್ರಮ ಕೈಗೊಳ್ಳದೆ ಜಾಲಿವುಡ್ ಗೆ ಬೀಗ ಹಾಕಿದ್ದನ್ನು ಕೆ ಆರ್ ಪೇಟೆಯ ಜನ ಖಂಡಿಸಿದ್ದಾರೆ.
ಥಿಯೆಟರ್ ಗಳಲ್ಲಿನ ಟಾಯ್ಲೆಟ್ ಗಳ ವಿಡಿಯೋ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೊಳೆತು ನಾರುತ್ತಿರುವ ಥಿಯೇಟರ್ ಗೆ ಬೀಗ ಹಾಕೋದನ್ನ ಬಿಟ್ಟು ಜಾಲಿವುಡ್ ಗೆ ಬೀಗ ಹಾಕಿದ್ದಾರೆಂದು ವ್ಯಂಗ್ಯವಾಗಿ ಟೀಕಿಸಿ ಛೀಮಾರಿ ಹಾಕಿದ್ದಾರೆ.
ಕೆ.ಆರ್.ಪೇಟೆಯ ಹೆಸರಾಂತ ಎರಡು ಥಿಯೇಟರ್ ಗಳಲ್ಲಿ ಥಿಯೇಟರ್ ಗಳಲ್ಲಿ ವಿಡಿಯೋ ಮಾಡಿದ್ದಾರೆ.
ಪ್ರತಿದಿನ ಸಾವಿರಾರು ಜನ ಥಿಯೇಟರ್ ಗೆ ಬರುತ್ತಾರೆ,ಆದರೆ ಇವು ರೋಗರುಜಿನ ಹರಡುವ ತಾಣವಾಗಿವೆ,ಶುಚಿ ಮಾಡಿ ಯಾವ ಕಾಲವಾಗಿದೆಯೊ ಇದನ್ನೆಲ್ಲ ಕೇಳುವವರೇ ಇಲ್ಲದಂತಾಗಿದೆ.
ಇಂತಹ ಮಲಿನ ಸಿನೆಮಾ ಮಂದಿರಗಳ ಮೇಲೆ ಕ್ರಮ ವಹಿಸಬೇಕು, ಅಧಿಕಾರಿಗಳು ಕೂಡಲೇ ಇತ್ತ ಗಮನ ಹರಿಸಿ.ಯಾವುದೋ ವಿಷಯ ಇಟ್ಟುಕೊಂಡು ಜಾಲಿವುಡ್ ಗೆ ಬೀಗ ಹಾಕಿದ್ದೀರಲ್ಲಾ ಮಲಿನವಾಗಿರುವ ಎಲ್ಲದರ ಬಗ್ಗೆ ಕ್ರಮ ತೆಗೆದುಕೊಳ್ಳಿ ಎಂದು ಕೆ ಆರ್ ಪೇಟೆ ಜನ ಆಗ್ರಹಿಸಿದ್ದಾರೆ.