ಮೈಸೂರು: ಆದಿಕವಿ, ಮಹರ್ಷಿ ವಾಲ್ಮೀಕಿ ರಚಿಸಿರುವ ರಾಮಯಣ ಗ್ರಂಥದಲ್ಲಿ ಅಡಕವಾಗಿರುವ ಪಿತೃವಾಕ್ಯ ಪರಿಪಾಲನೆ, ಸೋದರ ಬಾಂಧವ್ಯ ಸಂಬಂಧಗಳ ಅಂಶಗಳನ್ನು ಜನತೆ ಅಳವಡಿಸಿಕೊಳ್ಳಬೇಕು ಎಂದು ಕೆಪಿಸಿಸಿ ಸದಸ್ಯ ನಜರ್ಬಾದ್ ನಟರಾಜ್ ಕರೆ ನೀಡಿದರು.
ನಗರದ ನ್ಯಾಯಾಲಯದ ಮುಂಭಾಗದಲ್ಲಿರುವ ಉದ್ಯಾನವನದಲ್ಲಿ
ಚಾಮುಂಡೇಶ್ವರಿ ಯುವ ಬಳಗದ ವತಿಯಿಂದ ಹಮ್ಮಿಕೊಂಡಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ವಿವಿಧ ಜಾತಿಯ ಗಿಡಗಳನ್ನು ನೆಡುವ ಮೂಲಕ ಆಚರಿಸಿದ ಸಂದರ್ಭದಲ್ಲಿ ಅವರು ಮಾತನಾಡಿದರು.
ಆದಿಕವಿ ಮಹರ್ಷಿ ವಾಲ್ಮೀಕಿ ಅವರ ಜೀವನ ಸಂದೇಶಗಳು ಬದುಕಿಗೆ ಪ್ರೇರಣಾತ್ಮಕ ಮತ್ತು ಪ್ರಭಾವಶಾಲಿಯಾಗಿದ್ದು,ಅವುಗಳನ್ನು ಸಣ್ಣ ಕೈಪಿಡಿಗಳ ರೂಪದಲ್ಲಿ ಪ್ರಕಟಿಸಿ ಜನಾಸಾಮಾನ್ಯರಿಗೆ ತಲುಪಿಸುವ ಕಾರ್ಯವಾಗಬೇಕು ಎಂದು ಹೇಳಿದರು
ಕಾರ್ಯಕ್ರಮದಲ್ಲಿ ಡಿ.ಕೆ ಶಿವಕುಮಾರ್ ಅಭಿಮಾನಿ ಬಳಗದ ಜಿ ರಾಘವೇಂದ್ರ, ಪಾಂಡವಪುರ ದಿನೇಶ್, ಹಿಂದುಳಿದ ವರ್ಗದ ಉಪಾಧ್ಯಕ್ಷ ರಮೇಶ್, ಲೋಕೇಶ್, ಸೇವಾದಳ ಮೋಹನ್ ಕುಮಾರ್, ದಿನೇಶ್, ಪರಿಸರ ಬಳಗದ ಕೃಷ್ಣಪ್ಪ (ಗಂಟಯ್ಯ), ಎಸ್.ಎನ್ ರಾಜೇಶ್,ರವಿಚಂದ್ರ, ನಿತೀಶ್, ಕೆ ಜಿ ಕೊಪ್ಪಲ್ ಗುಂಡಪ್ಪ ಮತ್ತಿತರರು ಹಾಜರಿದ್ದರು.