ಹುಣಸೂರು: ಸಾಹಸಸಿಂಹ ಡಾ.ವಿಷ್ಣುವರ್ಧನ್ ಅವರ 75 ನೆ ಹುಟ್ಟುಹಬ್ಬವನ್ನು ಹುಣಸೂರಿನ ಕಲಾ ಸ್ಟುಡಿಯೋ ಮುಂಭಾಗ ವಿಷ್ಣುವರ್ಧನ್ ಅಭಿಮಾನಿಗಳ ಸಂಘ ಮತ್ತು ಕರ್ನಾಟಕ ಪ್ರಜಾ ಪಾರ್ಟಿ ರೈತ ಪರ್ವ ತಾಲೂಕು ವತಿಯಿಂದ ವಿಶೇಷವಾಗಿ ಆಚರಿಸಲಾಯಿತು.
ಬೆಳಗ್ಗೆ ವಿಷ್ಣುವರ್ಧನ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಎಚ್ ಪಿ ಮಂಜುನಾಥ್, ಕೆಪಿಸಿಸಿ ಜನರಲ್ ಸೆಕ್ರೆಟರಿ ಹುಣಸೂರು ತಾಲೂಕು ಸಿದ್ದನ ಕೊಪ್ಪಲು ಪ್ರೊ ಸುವರ್ಣ ರಾಮದಾಸ್, ನಗರಸಭೆ ಕಮಿಷನರ್ ಮಾನಸ,ತಹಸೀಲ್ದಾರ್ ಮಂಜುನಾಥ್ ಸೇರಿದಂತೆ ಹುಣಸೂರು ಡಿ ವೈ ಎಸ್ ಪಿ, ಸರ್ಕಲ್ ಇನ್ಸ್ಪೆಕ್ಟರ್, ಗ್ರಾಮಾಂತರ ಪೊಲೀಸ್ ಠಾಣೆ ಸಬ್ ಇನ್ಸ್ಪೆಕ್ಟರ್ ಮತ್ತಿತರ ಗಣ್ಯ ವ್ಯಕ್ತಿಗಳು ಪಾಲ್ಗೊಂಡು ವಿಷ್ಣುವರ್ಧನ್ ಭಾವಚಿತ್ರಕ್ಕೆ ನಮನ ಸಲ್ಲಿಸಿದರು.
ಪೂಜೆಯ ನಂತರ ಸಾರ್ವಜನಿಕರಿಗೆ ಕರ್ನಾಟಕ ಪ್ರಜಾ ಪಾರ್ಟಿ ರೈತ ಪರ್ವ ವತಿಯಿಂದ ತಾಲೂಕು ಅಧ್ಯಕ್ಷ ಚೆಲುವರಾಜು ಅವರ ನೇತೃತ್ವದಲ್ಲಿ ಲಾಡು ಊಟ ಏರ್ಪಡಿಸಲಾಗಿತ್ತು.ಇದಕ್ಕೆ ವಿಷ್ಣುವರ್ಧನ್ ಅಭಿಮಾನಿಗಳ ಸಂಘದವರು ಸಾಥ್ ನೀಡಿದರು.
ಈ ಎಲ್ಲಾ ಕಾರ್ಯಕ್ರಮದಲ್ಲಿ,ವಿಷ್ಣುವರ್ಧನ್ ಅಭಿಮಾನಿಗಳ ಸಂಘದ ಅಧ್ಯಕ್ಷ ನಾರಾಯಾಣ,ಉಪಾಧ್ಯಕ್ಷ ಮಂಜುನಾಥ್,ಖಜಾಂಚಿ ಸಿ.ಎಸ್ ರವಿ,ಸದಸ್ಯರು ಗಳಾದ ಬಸವರಾಜು,ವೆಂಕಟೇಶ್
ಚಲುವರಾಜು,ಯತಿರಾಜು,ಸುನಿಲ್,ಪ್ರತಿಬ್,ಮಹದೇವ್,ಲಕ್ಷ್ಮಣ್,ಹೊನ್ನಯ್ಯ,ಬನ್ನೇರಿ,ಚಿಕ್ಕ,ಜೋಗಿ ಮುರುಗೇಶ್,ಸಾದಿಕ್,ಜಿಯಾ ಮತ್ತಿತರರು ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.

ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಬಿಗಿ ಭದ್ರತೆ ಮಾಡಿದ್ದರು.