ಮೈಸೂರು: ಹಿರಿಯ ವಕೀಲರಾದ ವಾಸುದೇವ್ ಅವರನ್ನು ಮೈಸೂರು ಜಿಲ್ಲಾ ವಕೀಲರ ಸಂಘ ಆತ್ಮೀಯವಾಗಿ ಗೌರವಿಸಿ ಸನ್ಮಾನಿಸಲಾಯಿತು.
ಸಂಘದ ಆವರಣದಲ್ಲಿ ಸಿಕ್ಕ ನಗದು 24,500ರೂ.ಗಳನ್ನು ವಾರಸುದಾರರಿಗೆ ಹಿಂದಿರುಗಿಸುವಂತೆ ವಾಸುದೇವ್ ಅವರು
ಸಂಘಕ್ಕೆ ನೀಡಿದ್ದರು.
ಅವರ ಈ ಪ್ರಾಮಾಣಿಕತೆ ಮೆಚ್ಚಿ ಸಂಘ ಅಭಿನಂದನೆ ಸಲ್ಲಿಸಿತು.
ಈ ವೇಳೆ ಸಂಘದ ಅಧ್ಯಕ್ಷ ಎಸ್ ಲೋಕೇಶ್, ಕಾರ್ಯದರ್ಶಿ ಜಿ ಸುಧೀರ್, ಉಪಾಧ್ಯಕ್ಷ ಚಂದ್ರಶೇಖರ್, ಖಜಾಂಚಿ ಎಚ್ ಬಿ ಭರತ್ , ಹಿರಿಯ ವಕೀಲರು, ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ ಗೌರವ ಸಂಪಾದಕ ಎಚ್ ಎನ್ ವೆಂಕಟೇಶ್, ಮಾಜಿ ಅಧ್ಯಕ್ಷ ಜಿ ವಿ ರಾಮಮೂರ್ತಿ ಹಾಜರಿದ್ದರು.