ಮೈಸೂರು: ದಸರಾ ಉದ್ಘಾಟನೆಗೆ ಬೂಕರ್ ಪ್ರಶಸ್ತಿ ಪುರಸ್ಕೃತರಾದ ಬಾನು ಮುಷ್ತಾಕ್ ಆಯ್ಕೆ ಖಂಡಿಸಿ ಪರ ಹಾಗೂ ವಿರೋಧದ ಚಾಮುಂಡಿ ಬೆಟ್ಟ ಪಾದಯಾತ್ರೆಗೆ ಪೊಲೀಸ್ ಇಲಾಖೆ ಅನುಮತಿ ನಿರಾಕರಿಸಿದೆ.
ಅನುಮತಿ ನಿರಾಕರಿಸಿದರೂ ಚಾಮುಂಡಿ ಚಲೋಗೆ ಬಿಜೆಪಿ ಹಾಗೂ ಹಿಂದೂ ಜಾಗರಣ ವೇದಿಕೆ ಮುಂದಾದರು.
ನಗರದ ಕುರುಬಾರಹಳ್ಳಿ ವೃತ್ತದಿಂದ ಹಿಂದೂ ಜಾಗರಣಾ ವೇದಿಕೆಯು ಚಾಮುಂಡಿ ಬೆಟ್ಟ ಚಲೋಗೆ ಮುಂದಾಯಿತು.
ಇದರೊಂದಿಗೆ ಬಿಜೆಪಿಯವರೂ ಕೂಡಾ ಚಾಮುಂಡಿ ಬೆಟ್ಟ ಚಲೋಗೆ ಮುಂದಾದರು,ಈ ಹಿನ್ನಲೆಯಲ್ಲಿ
ಬಿಜೆಪಿ ಶಾಸಕ ಶ್ರೀವತ್ಸ, ಮಾಜಿ ಶಾಸಕ ಎಲ್.ನಾಗೇಂದ್ರ ಸೇರಿದಂತೆ ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು.
ಮೈಸೂರಿನ ಸಂಗೋಳ್ಳಿ ರಾಯಣ್ಣ ವೃತ್ತದಲ್ಲಿ ಚಲೋಗೆ ಮುಂದಾಗಿದ್ದವರನ್ನು ಪೊಲೀಸರು ತಡೆದರು.
ಕನ್ನಡ ವಿರೋಧಿ ಭಾನು ಮುಷ್ತಾಕ್. ಹೀಗಾಗಿ ದಸರಾ ಉದ್ಘಾಟನೆಗೆ ಬಿಡಲ್ಲ ಎಂದು ಕಾರ್ಯಕರ್ತರು ಘೋಷಣೆ ಕೂಗಿದರು.
ಈ ವೇಳೆ ಪೊಲೀಸರು ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಢಯಿತು ನಂತರ ಕಾರ್ಯಕರ್ತರನ್ನು
ಬಲವಂತವಾಗಿ ವಶಕ್ಕೆ ಪಡೆಯಲಾಯಿತು.
ಮುನ್ನೆಚ್ಚರಿಕೆ ಕ್ರಮವಾಗಿ ಚಾಮುಂಡಿಬೆಟ್ಟಕ್ಕೆ ಬಿಗಿ ಪೊಲೀಸ್ ಬಂದೋಬಸ್ತ್ ಹಾಕಲಾಗಿದೆ.
ಚಾಮುಂಡಿಬೆಟ್ಟಕ್ಕೆ ತೆರಳುವ ಎಲ್ಲಾ ಮಾರ್ಗಗಳಲ್ಲಿ ಸಾರ್ವಜನಿಕರ ಪ್ರವೇಶ ನಿಷೇಧಿಸಲಾಗಿದೆ.