ಚಂದ್ರ ಗ್ರಹಣ: ಪಂಚಮುಖಿ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ

Spread the love

ಮೈಸೂರು: ಮೈಸೂರಿನ ಇರ್ವಿನ್ ರಸ್ತೆಯಲ್ಲಿರುವ ಪಂಚಮುಖಿ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಚಂದ್ರ ಗ್ರಹಣ ಪ್ರಯುಕ್ತ ದೇವರಿಗೆ ವಿಶೇಷ ಅಲಂಕಾರ ಹಾಗೂ ಪೂಜೆ ನೆರವೇರಿಸಲಾಯಿತು.

ದೇವಸ್ಥಾನದ ಪ್ರಧಾನ ಅರ್ಚಕರಾದ ವಿದ್ವಾನ್ ಕೃಷ್ಣಮೂರ್ತಿ ಅವರ ನೇತೃತ್ವದಲ್ಲಿ ಪೂಜೆ ನೆರವೇರಿಸಿ ಆನಂತರ ದೇವಸ್ಥಾನವನ್ನು ಮುಚ್ಚಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ವಿದ್ವಾನ್ ಕೃಷ್ಣಮೂರ್ತಿ ನಾಳೆ ಸೋಮವಾರ
ಬೆಳಗ್ಗೆ 9 ಗಂಟೆಗೆ ಲೋಕಕಲ್ಯಾಣಕ್ಕಾಗಿ ಹಾಗೂ ಭಕ್ತಾದಿಗಳ ಶ್ರೇಯಾಭಿವೃದ್ಧಿಗಾಗಿ
ರಾಹುಗ್ರಸ್ತ ಚಂದ್ರಗ್ರಹಣ ಶಾಂತಿಯನ್ನು ನೆರವೇರಿಸಲಾಗುವುದು ಎಂದು ತಿಳಿಸಿದರು.

ಗ್ರಹಣ ದೋಷ ಇರುವ ರಾಶಿಯವರು ಸಂಕಲ್ಪ ಮಾಡಿಕೊಳ್ಳಬಹುದು.
ಗ್ರಹಣ ದೋಷ ಇರುವವರು ಅಶುಭ ಫಲ, ಕುಂಭ ರಾಶಿ, ಮೀನ ರಾಶಿ, ಕರ್ಕಾಟಕ, ವೃಶ್ಚಿಕ ರಾಶಿ.

ಮಿಶ್ರಫಲ ಮಕರ ರಾಶಿ ಹಾಗೂ ತುಲಾ ರಾಶಿ ಸಿಂಹ ರಾಶಿ. ಶುಭಫಲ ರಾಶಿಗಳು ಧನಸ್ಸು, ಕನ್ಯಾ, ವೃಷಭ, ಮೇಷ. ಆದುದರಿಂದ ಗ್ರಹಣ ಸಮಯದಲ್ಲಿ ದೇವರ ಜಪ ಪ್ರಾರ್ಥನೆ ಮಾಡಿಕೊಳ್ಳುವುದು ಒಳ್ಳೆಯದು ಎಂದು ಸಲಹೆ ನೀಡಿದರು.

ಗ್ರಹಣ ಶಾಂತಿ ಪೂಜೆಯಲ್ಲಿ ಭಾಗವಹಿಸುವ ಭಕ್ತಾದಿಗಳು ಸೋಮವಾರ ಬೆಳಗ್ಗೆ 8 ರಿಂದ 10 ಗಂಟೆವರೆಗೂ ಸಂಕಲ್ಪ ಮಾಡಿಸಬಹುದು ಎಂದು ವಿದ್ವಾನ್ ಎಸ್ ಕೃಷ್ಣಮೂರ್ತಿ ತಿಳಿಸಿದರು.

12 ಗಂಟೆಗೆ ಪೂರ್ಣಾವತಿ, ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ಇರುತ್ತದೆ ಹೆಚ್ಚಿನ ಮಾಹಿತಿಗೆ ವಿದ್ವಾನ್ ಎಸ್ ಕೃಷ್ಣಮೂರ್ತಿ ಅರ್ಚಕರು ಪಂಚಮುಖಿ ಆಂಜನೇಯ ಸ್ವಾಮಿ ದೇವಸ್ಥಾನ ಮೊಬೈಲ್ ಸಂಖ್ಯೆ 93 42112477 ಸಂಖ್ಯೆಗೆ ಕರೆ ಮಾಡಬಹುದು
ಎಂದು ಅವರು ಮನವಿ ಮಾಡಿದ್ದಾರೆ.