ಮೈಸೂರು,ಸೆ.2: ನಮ್ಮ ದೇಶದಲ್ಲಿ ಹೆಣ್ಣು ಮಕ್ಕಳ ಮೇಲೆ ಆಗುತ್ತಿರುವ ಪರಿಣಾಮಗಳನ್ನು ನೋಡಿದರೆ ಪ್ರತಿಯೊಬ್ಬರೂ ಕರಾಟೆ ಕಲಿಯುವುದು ಒಳಿತು ಎಂದು ಒಂದು ಹೆಜ್ಜೆ ರಕ್ತದಾನಿ ಬಳಗದ ಅಧ್ಯಕ್ಷ ರಕ್ತದಾನಿ ಮಂಜು ಅಭಿಪ್ರಾಯ ಪಟ್ಟಿದ್ದಾರೆ.
ಮೈಸೂರು ಜಿಲ್ಲೆ ಇಲವಾಲ ಗ್ರಾಮ ಪಂಚಾಯಿತಿ ಸಮುದಾಯದಲ್ಲಿ ಶೊಟೋಕನ್ ರಾಜ್ಯಮಟ್ಟದ ಕರಾಟೆ ಪಂದ್ಯಾವಳಿ 2025 ಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಕರಾಟೆ ಹೆಣ್ಣು ಮಕ್ಕಳ ಆತ್ಮ ರಕ್ಷಣೆ ಆಗಿರಬೇಕು, ಪ್ರತಿಯೊಬ್ಬರೂ ಕರಾಟೆ ಕಲಿತು ಅವರ ರಕ್ಷಣೆಯನ್ನ ಅವರೇ ಮಾಡಿಕೊಳ್ಳುವಂತಹ ಧೈರ್ಯ ಬರಬೇಕು ಎಂದು ಹೇಳಿದರು.
ಒಂದು ವೇಳೆ ಸೌಜನ್ಯ ಕರಾಟೆ ಕಲಿತಿದ್ದಿದ್ದರೆ ಬಹುಷ್ಯ ಅವರಿಗೆ ಈ ಪರಿಸ್ಥಿತಿ ಬರುತ್ತಿರಲಿಲ್ಲ ಎಂದು ಹೇಳಿದ ಮಂಜು, ಸಂಸ್ಥೆಯ ಸಂಸ್ಥಾಪಕರಾದ ದಿಲಿತ್ ಉತ್ತಪ್ಪ ಅವರು ಮೈಸೂರಿನಿಂದ ಕೊಡಗಿನವರೆಗೂ ಕರಾಟೆ ಕ್ಲಾಸ್ ತೆಗೆದುಕೊಳ್ಳುತ್ತಿದ್ದಾರೆ ಅವರ ಶ್ರಮಕ್ಕೆ ಎಷ್ಟೋ ಮಕ್ಕಳು ಸಾಧನೆ ಮಾಡಿದ್ದಾರೆ ಅವರ ರಕ್ಷಣೆಯನ್ನು ಮಾಡಿಕೊಂಡಿದ್ದಾರೆ ಪ್ರತಿಯೊಬ್ಬ ವಿದ್ಯಾರ್ಥಿನಿಯರು ಕೂಡ ಶ್ರದ್ಧೆಯಿಂದ ಕಲಿತು ನಿಮ್ಮ ತಂದೆ ತಾಯಿಗೆ ಗೌರವ ತರಬೇಕೆಂದು ಸಲಹೆ ನೀಡಿದರು.
ಓಕಿನವ ಡ್ರ್ಯಾಗನ್ ಮಿಕ್ಸ್ ಮರ್ತಿಯಲ್ ಆರ್ಟ್ಸ್ ಶೊಟೋಕನ್ ಸಿಟಿ (ರಿ ) ಸಂಸ್ಥೆಯ ಸಂಸ್ಥಾಪಕರಾದ ಡಾ ದೀಲಿತ್ ಉತಪ್ಪ(ಬ್ಲಾಕ್ ಬೆಲ್ಟ್ 7th Dan ) ಭರತ್ ಕುಮಾರ್ ಎಚ್ ಎಂ (ಬ್ಲಾಕ್ ಬೆರ್ಟ್ 4th Dan)ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಮುಖ್ಯ ಅತಿಥಿಗಳಾಗಿ ಪರಿವರ್ತನಾ ಸ್ಕೂಲ್ ಶ್ರೀರಂಗಪಟ್ಟಣ ಮ್ಯಾನೇಜಿಂಗ್ ಡೈರೆಕ್ಟರ್ ಮಂಜು ರಾಮ, ಗಾಯತ್ರಿ ವಿದ್ಯಾಲಯ ಕೆ ಆರ್ ಸಾಗರ ಫೌಂಡರ್ ಮತ್ತು ಚೇರ್ಮನ್ ಪ್ರವೀಣ್ ಕುಮಾರ್, ಕಲಾಭಾರತಿ ವಿದ್ಯಾ ಸಂಸ್ಥೆ ಇಲವಾಲ ಫೌಂಡರ್ ಲಕ್ಕೇಗೌಡ, ಫೋಟೋ ಜನರಲಿಸ್ಟ್ ಡೈರೆಕ್ಟರ್ ನಾಣಿ ಹೆಬ್ಬಾಳ್, ಮಾಜಿ ಸೈನಿಕರಾದ ಉತ್ತಪ್ಪ, ಪರಿವರ್ತನ ಸ್ಕೂಲ್ ಪ್ರಿನ್ಸಿಪಾಲ್ ಜೇರ್ಲಿನ್, ಚಾಮುಂಡೇಶ್ವರಿ ಸ್ಕೂಲ್ ಕೆ ಆರ್ ಪೇಟೆ ಹೆಡ್ ಮಾಸ್ಟರ್ ಅಶೋಕ್ , ಪರಿವರ್ತನಾ ಸ್ಕೂಲ್ ಟೀಚರ್ ಪ್ರವೀಣ್ ಹಾಗೂ 500ಕ್ಕೂ ಹೆಚ್ಚು ಕರಾಟೆ ಸ್ಪರ್ಧಿಗಳು ಭಾಗವಹಿಸಿದ್ದರು
ಕಾರ್ಯಕ್ರಮದಲ್ಲಿ 30ಕ್ಕೂ ಹೆಚ್ಚು ವಿದ್ಯಾರ್ಥಿನಿಯರಿಗೆ ಬ್ಲಾಕ್ ಬೆಲ್ಟ್ ವಿತರಣೆ ಮಾಡಲಾಯುತು. ಗೆದ್ದ ಮಕ್ಕಳಿಗೆ ಟ್ರೋಪಿ ಮತ್ತು ಪ್ರಮಾಣ ಪತ್ರವನ್ನು ನೀಡಿ ಗೌರವಿಸಲಾಯಿತು.