ಬೆಂಗಳೂರು: ಡೆನ್ಮಾರ್ಕನ ಕೊಪನ್ ಹೆಗನ್ ನಲ್ಲಿ ಡಬ್ಲ್ಯು ಟಿ ಸಿ ಸಂಸ್ಥೆ ಆಯೋಜಿಸಿದ್ದ ಅಂತಾರಾಷ್ಟ್ರ ಮಟ್ಟದ ಗ್ಲೋಬಲ್ ಚಾಲೆಂಜ್ ಫಿಟ್ನೆಸ್ ಸ್ಪರ್ಧೆಯಲ್ಲಿ ಐಜಿಪಿ ಸಂದೀಪ ಪಾಟೀಲ ಅವರು ಐರನ್ ಮ್ಯಾನ್’ ಆಗಿ ಹೊರಹೊಮ್ಮಿದ್ದಾರೆ.
2004ನೇ ಬ್ಯಾಚನ ರಾಜ್ಯದ ಹಿರಿಯ ಐಪಿಎಸ್ ಅಧಿಕಾರಿಯಾದ ಸಂದೀಪ್ ಪಾಟೀಲ ‘ಐರನ್ ಮ್ಯಾನ್’ ಆಗಿ ಹೊರಹೊಮ್ಮುವ ಮೂಲಕ ಭಾರತೀಯ ಪೊಲೀಸ್ ಹಾಗೂ ರಾಜ್ಯ ಪೊಲೀಸ್ ಇಲಾಖೆಗೆ ಹೆಮ್ಮೆ ತಂದಿದ್ದಾರೆ.
ಟ್ರೈಯಥ್ಲಾನ್ ಸ್ಪರ್ಧೆಯು ಸಮುದ್ರದಲ್ಲಿ 3.8ಕಿಮೀ ಈಜು, ಅದೇ ಕ್ಷಣ 180ಕಿಮೀ ಸೈಕ್ಲಿಂಗ್ ಹಾಗೂ ಮರುಕ್ಷಣವೇ 45ಕಿಮೀ ರನ್ನಿಂಗ್ ಬಿಟ್ಟುಬಿಡದೇ 14.45 ಗಂಟೆಯಲ್ಲಿ ಮುಗಿಸುವ ಮೂಲಕ ಜಾಗತಿಕ ದಾಖಲೆ ನಿರ್ಮಿಸುವ ಚಾಲೆಂಜ್ ಆಗಿದ್ದು, ಇದರ ಸಾಧಕರನ್ನು ಐರನ್ ಮ್ಯಾನ್ ಎಂದು ಕರೆಯಲಾಗುತ್ತದೆ.
ಈ ಸ್ಪರ್ಧೆಗೆ ಕನಿಷ್ಠ ಒಂದು ವರ್ಷ ಮುಂಚೆಯಿಂದಲೇ ತಯ್ಯಾರಿ ಮಾಡಲಾಗುತ್ತದೆ, ಆಹಾರದಲ್ಲಿ ಮಾರ್ಪಾಡು ಮಡಿಕೊಂಡು ಮಾನಸಿಕವಾಗಿ ಸಿದ್ಧವಾಗಬೇಕಾಗುತ್ತದೆ.
ಮಾನವನ ದೇಹದ ಪಿಟ್ನೆಸ್ ಕಾಯ್ದುಕೊಳ್ಳುವ ಗರಿಷ್ಠ ಕಸರತ್ತು ಇದಾಗಿದೆ.
ಸಂದೀಪ ಪಾಟೀಲ ಅವರ ಸಾಧನೆಗೆ ಭಾರತ ಸರಕಾರ, ಕ್ರೀಡಾ ಪ್ರಾಧಿಕಾರ, ಕರ್ನಾಟಕ ಸರಕಾರ, ಐಪಿಎಸ್ ಅಸೋಸಿಯೇಷನ್ ಹಾಗೂ ರಾಜ್ಯ ಪೊಲೀಸ್ ಇಲಾಖೆ ಅಭಿನಂದನೆ ಸಲ್ಲಿಸಿದೆ.
2011ರಲ್ಲಿ ಸಂದೀಪ ಪಾಟೀಲ ಬೆಳಗಾವಿ ಎಸ್ಪಿಯಾಗಿ ಕಾರ್ಯನಿರ್ವಹಿಸಿದ್ದರು.