(ವರದಿ:ಸಿದ್ದರಾಜು,ಕೊಳ್ಳೇಗಾಲ)
ಕೊಳ್ಳೇಗಾಲ,ಆ.1: ವೈನ್ ಶಾಪ್ ವೊಂದರಲ್ಲಿ ನಿಯಮ ಮೀರಿ ತಹಶೀಲ್ದಾರ್ ಹಾಗೂ ಪೊಲೀಸ್ ವೃತ್ತ ನಿರೀಕ್ಷಕರ ಎದುರೇ ಗ್ರಾಹಕರು ಮದ್ಯ ಸೇವನೆ ಮಾಡುತ್ತಿದ್ದುದು ಕಂಡು ಅಬಕಾರಿ ನಿರೀಕ್ಷಕರ ಮೇಲೆ ತಹಶೀಲ್ದಾರರು ಅಸಮಾಧಾನಗೊಂಡ ಪ್ರಸಂಗ ನಡೆದಿದೆ.
ಅಬಕಾರಿ ನಿಯಮದ ಪ್ರಕಾರ ಸಿ.ಎಲ್ 7 ಪರವಾನಗಿ ಹೊಂದಿರುವ ಬಾರ್ ಗಳಲ್ಲಿ ಮಾತ್ರ ಕುಡಿಯಲು ಅವಕಾಶವಿರುವಿದೆ, ಆದರೆ ಸಿ.ಎಲ್ 2 ಪರವಾನಗಿ ಹೊಂದಿರುವ ಪಟ್ಟಣದ ದೀಪ ವೈನ್ಸ್ ನಲ್ಲಿ ನಿಯಮ ಮೀರಿ ರಾಜಾರೋಷವಾಗಿಯೇ ತಹಶೀಲ್ದಾರ್ ಹಾಗೂ ಪೊಲೀಸ್ ವೃತ್ತ ನಿರೀಕ್ಷಕರ ಎದುರೇ ಗ್ರಾಹಕರು ಮದ್ಯ ಸೇವನೆ ಮಾಡುತ್ತಿದ್ದರು.ಇದನ್ನು ಕಂಡು ಅಬಕಾರಿ ನಿರೀಕ್ಷಕರ ಮೇಲೆ ತಹಶೀಲ್ದಾರ್ ಅಸಮಾಧಾನಗೊಂಡರು.
ಗುರುವಾರ ಸಂಜೆ ತಹಶೀಲ್ದಾರ್ ಬಸವರಾಜು ಅವರು ಆರಕ್ಷಕ ವೃತ್ತ ನಿರೀಕ್ಷಕ ಶಿವಮಾದಯ್ಯ ಅವರ ಜೊತೆ ಗ್ರೊಮೊರ್ ರಸಗೊಬ್ಬರ ಕಂಪನಿಯ ಗೋದಾಮು ಪರಿಶೀಲನೆಗೆ ಹೋಗಿದ್ದಾಗ ಅವರ ವಾಹನವನ್ನು ದೀಪ ವೈನ್ಸ್ ಬಳಿ ನಿಲ್ಲಿಸಿದ್ದರು. ಈ ವೇಳೆ ಅವರ ಎದುರೇ ಗಿರಾಕಿಗಳು ರಾಜಾರೋಷವಾಗಿ ದೀಪವೈನ್ಸ್ ಶಾಪ್ ಕೌಂಟರ್ ಹಾಗೂ ಆಸುಪಾಸಿನಲ್ಲಿ ಮದ್ಯ ಸೇವನೆ ಮಾಡುತ್ತಿದ್ದುದು ಅಸಮಾಧಾನಕ್ಕೆ ಕಾರಣವಾಗಿದೆ.
ವೈನ್ಸ್ ಶಾಪ್ ಬಳಿ ಕುಡಿದು ಬಿಸಾಡಿದ್ದ ಮದ್ಯದ ಪೌಚ್ ಗಳ ರಾಶಿ ಬಿದ್ದು ಅಶುಚಿತ್ವವಾಗಿರುವುದನ್ನು ಕಂಡು ಕೂಡಲೇ ಅಬಕಾರಿ ನಿರೀಕ್ಷಕ ದಯಾನಂದ್ ಅವರಿಗೆ ಮೊಬೈಲ್ ಕರೆ ಮಾಡಿ ಸ್ಥಳಕ್ಕೆ ಬರುವಂತೆ ಸೂಚಿಸಿದ್ದಾರೆ.
ಆದರೆ ದಯಾನಂದ ಅವರು ತಹಶೀಲ್ದಾರ್ ರವರ ಕರೆಯನ್ನು ಗಣನೆಗೆ ತೆಗೆದುಕೊಂಡಂತೆ ಕಂಡಿಲ್ಲ. ಹಾಗಾಗಿ ಮತ್ತೆ ಕರೆ ಮಾಡಿದ್ದಾರೆ, ಕರೆ ಮಾಡಿದ 40 ನಿಮಿಷದ ಬಳಿಕ ಅಬಕಾರಿ ಇಲಾಖೆಯ ಮುಖ್ಯ ಪೇದೆ ಪ್ರದೀಪ್ ಎಂಬುವವರು ಸ್ಥಳಕ್ಕೆ ಬಂದಿದ್ದಾರೆ.
ಈ ವೇಳೆ ಪ್ರದೀಪ್ ನನ್ನು ಪ್ರಶ್ನಿಸಿದ ತಹಶೀಲ್ದಾರ್ ಬಸವರಾಜು ಅವರು ಈ ಅಂಗಡಿಗೆ ನೀಡಿರುವ ಲೈಸೆನ್ಸ್ ಯಾವುದು ಎಂದು ಕೇಳಿದ್ದಾರೆ. ಇದಕ್ಕೆ ಪ್ರದೀಪ್ ಅವರು ಸಿ ಎಲ್ 2 ಎಂದಿದ್ದಾರೆ.
ಹಾಗಿದ್ದರೆ ಇಲ್ಲಿ ಪಾರ್ಸೆಲ್ ಕೊಡಲು ಮಾತ್ರ ಅವಕಾಶ ಇದೆ, ನಿಯಮ ಮೀರಿ ಅಂಗಡಿಯಲ್ಲಿ ಕುಡಿಯಲು ಅವಕಾಶ ನೀಡಿದ್ದಾರೆ ನಿಮ್ಮ ಇಲಾಖೆ ನಿಯಮದ ಪ್ರಕಾರ ಇವರ ಮೇಲೆ ಏನು ಕ್ರಮ ಜರುಗಿಸ ಬಹುದು ಎಂದು ಪ್ರದೀಪ್ ನನ್ನು ಪ್ರಶ್ನಿಸಿದ್ದಾರೆ, ಅದಕ್ಕೆ ಪ್ರದೀಪ ಬಿ ಎಲ್ ಸಿ ಕಾಯ್ದೆಯಡಿ ಪ್ರಕರಣ ದಾಖಲಿಸಬಹುದು ಎಂದು ಹೇಳಿದ್ದಾರೆ ಹಾಗಾದರೆ ಏಕೆ ಕ್ರಮ ಕೈಗೊಂಡಿಲ್ಲ ಎಂದು ತರಾಟೆಗೆ ತೆಗೆದುಕೊಂಡರು.

ಇಷ್ಟೆಲ್ಲ ನಡೆಯುತ್ತಿದ್ದರು ವೃತ್ತ ನಿರೀಕ್ಷಕ ಶಿವಮಾದಯ್ಯ ಅವರು ಮಾತ್ರ ಏನು ಮಾತನಾಡದೆ ಮೌನ ವಹಿಸಿದ್ದರು
ನಂತರ ತಹಸಿಲ್ದಾರ್ ಬಸವರಾಜು ಅವರು ಮತ್ತೆ ದಯಾನಂದ್ ಅವರಿಗೆ ಕರೆ ಮಾಡಿ ಈ ಕೂಡಲೇ ಈ ವೈನ್ ಶಾಪ್ ಮೇಲೆ ಪ್ರಕರಣ ದಾಖಲಿಸಿ ಗರಿಷ್ಠ ದಂಡ ವಿಧಿಸಿ ಮತ್ತೆ ಇದೇ ರೀತಿ ಮರುಕಳಿಸಿದರೆ ಇವರ ಪರವಾಗಿ ರದ್ದತಿಗೆ ಸರ್ಕಾರಕ್ಕೆ ಶಿಫಾರಸು ಮಾಡಿ ಎಂದು ಕಾರವಾಗಿ ಸೂಚಿಸಿದರು.