ರಷ್ಯಾದಲ್ಲಿ ವಿಮಾನ ಪತನ 49 ಮಂದಿ ದುರ್ಮ*ರಣ

Spread the love

ಮಾಸ್ಕೋ: ವಿಶ್ವಾದ್ಯಂತ ಇತ್ತೀಚಿನ ದಿನಗಳಲ್ಲಿ ವಿಮಾನ ದುರಂತಗಳು ಹೆಚ್ಚಾಗುತ್ತಲೇ ಇದ್ದು,ಜನರು ವಿಮಾನ ಪ್ರಯಾಣ ಅಂದರೆ ಭಯಪಡು ವಂತಾಗುತ್ತಿದೆ.ಇಂದು ರಷ್ಯಾದಲ್ಲಿ ದುರ್ಘಟನೆ ನಡೆದಿದೆ.

ತಾಂತ್ರಿಕ ದೋಷದಿಂದ ರಷ್ಯಾದ ವಿಮಾನ ಪೂರ್ವ ಅಮುರ್ ಪ್ರದೇಶದಲ್ಲಿ ಪತನಗೊಂಡಿದ್ದು 49 ಮಂದಿ ಮೃತಪಟ್ಟಿದ್ದಾರೆ.

ಸೈಬೀರಿಯಾ ಮೂಲದ ಅಂಗಾರ ವಿಮಾನಯಾನ ಸಂಸ್ಥೆಯಿಂದ ನಿರ್ವಹಿಸಲ್ಪಡುತ್ತಿದ್ದ AN-24 ಸಂಖ್ಯೆಯ ವಿಮಾನ ಚೀನಾದ ಗಡಿಯಲ್ಲಿರುವ ಅಮುರ್ ಪ್ರದೇಶದ ಟಿಂಡಾ ಪಟ್ಟಣದ ಬಳಿ ರಾಡಾರ್‌ನಿಂದ ಸಂಪರ್ಕ ಕಳೆದುಕೊಂಡಿದ್ದು, ನಂತರ ಕೆಲವೇ ಕ್ಷಣಗಳಲ್ಲಿ ಪತನಗೊಂಡಿದೆ.

ಈ ನತದೃಷ್ಟ ವಿಮಾನದಲ್ಲಿ 6 ಮಕ್ಕಳು ಮತ್ತು ಆರು ಸಿಬ್ಬಂದಿ ಸೇರಿ 50 ಮಂದಿ ಪ್ರಯಾಣಿಸುತ್ತಿದ್ದರು.

ವಿಮಾನದಲ್ಲಿದ್ದ ಎಲ್ಲಾ 50 ಮಂದಿ ಸಾವನ್ನಪ್ಪಿರುವುದಾಗಿ ವರದಿಯಾಗಿದೆ.