ಮೈಸೂರು: ಗಿಡಗಳನ್ನು ನೆಟ್ಟು ಪೋಷಿಸುವ ಮೂಲಕ ಹೆಚ್.ವಿ. ರಾಜೀವ್ ಸ್ನೇಹ ಬಳಗ ಹಾಗೂ ಇನ್ನರ್ ವ್ಹೀಲ್ ಕ್ಲಬ್ ಆಫ್ ಮೈಸೂರ್ ಮಿಟ್ಟೋನ್ ಪರಿಸರ ದಿನವನ್ನು ಅರ್ಥಪೂರ್ಣವಾಗಿ ಆಚರಿಸಿದರು.
ಪರಿಸರ ಉಳಿಸಿ, ಪರಿಸರ ಬೆಳೆಸಿ ಎಂಬ ಮಹತ್ವದ ಸಂದೇಶವನ್ನು ಸಾರುತ್ತಾ ಹೆಚ್.ವಿ. ರಾಜೀವ್ ಸ್ನೇಹ ಬಳಗ ಹಾಗೂ ಇನ್ನರ್ ವ್ಹೀಲ್ ಕ್ಲಬ್ ಆಫ್ ಮೈಸೂರ್ ಮಿಟ್ಟೋನ್ ಸಂಯುಕ್ತ ಆಶ್ರಯದಲ್ಲಿ ಇಂದು ಅಶೋಕಪುರಂ ರೈಲ್ವೆ ಸ್ಟೇಷನ್ ಮುಖ್ಯ ರಸ್ತೆ ಮುಂಭಾಗದಲ್ಲಿರುವ ಉದ್ಯಾನವನದಲ್ಲಿ 30 ಗಿಡಗಳನ್ನು ನೆಡುವ ಕಾರ್ಯಕ್ರಮವನ್ನು ಯಶಸ್ವಿಯಾಗಿ ನೆರವೇರಿಸಲಾಯಿತು.
ಕಾರ್ಯಕ್ರಮದ ವೇಳೆ ಲಕ್ಷ್ಮಿ ರಾಜೀವ್ ಅವರು ಮಾತನಾಡಿ,ಪರಿಸರವು ನಮ್ಮ ಬದುಕಿನ ಮೂಲಾಧಾರ, ಶುದ್ಧ ನೀರು, ಗಾಳಿ, ಬೆಳಕು ಹಾಗೂ ಹಸಿರು ಪರಿಸರ ಇಲ್ಲದೆ ಮಾನವ ಜೀವನ ಅಸಾಧ್ಯ ಎಂದು ತಿಳಿಸಿದರು.
ನಾವು ಇಂದು ಇಲ್ಲಿ ಗಿಡ ನೆಡುವ ಮೂಲಕ ಮುಂದಿನ ಪೀಳಿಗೆಗೆ ಹಸಿರು ಹಾದಿಯನ್ನು ನೀಡುತ್ತಿದ್ದೇವೆ. ಪ್ರತಿಯೊಬ್ಬರೂ ಪರಿಸರ ಉಳಿಸುವ ಜವಾಬ್ದಾರಿ ಹೊಂದಿದ್ದೇವೆ. ಗಿಡಗಳು ನಮಗೆ ಆಮ್ಲಜನಕ, ನೆರಳು, ಹಣ್ಣು, ಹೂವುಗಳನ್ನು ನೀಡುತ್ತವೆ. ಹಕ್ಕಿಗಳು, ಪ್ರಾಣಿಗಳು ಹಾಗೂ ಮಾನವರಿಗೆ ಗಿಡಗಳು ಆಶ್ರಯವಾಗಿವೆ ಎಂದು ನುಡಿದರು.
ಇತ್ತೀಚಿನ ದಿನಗಳಲ್ಲಿ ಪರಿಸರ ಮಾಲಿನ್ಯ, ಜಲದ ಅಭಾವ, ಗಾಳಿಯ ಮಾಲಿನ್ಯ ಹೆಚ್ಚುತ್ತಿದೆ. ಇದಕ್ಕೆ ಕಾರಣ ನಾವು ಪ್ರಕೃತಿಯನ್ನು ನಿರ್ಲಕ್ಷ್ಯ ಮಾಡುತ್ತಿರುವುದು. ಗಿಡ ನೆಡುವುದು, ನೀರನ್ನು ಸಂರಕ್ಷಿಸುವುದು, ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡುವುದು ನಮ್ಮ ಕರ್ತವ್ಯವಾಗಿದೆ ಎಂದು ಹೇಳಿದರು.
ನಾವು ಇಂದು ನೆಡುವ ಈ ಗಿಡಗಳು ನಮ್ಮ ಮಕ್ಕಳು, ಮಕ್ಕಳ ಮಕ್ಕಳಿಗೆ ಹಸಿರು ವಾತಾವರಣವನ್ನು ನೀಡಲಿ. ಪ್ರತಿಯೊಬ್ಬರೂ ವರ್ಷಕ್ಕೆ ಕನಿಷ್ಠ ಒಂದು ಗಿಡವನ್ನು ನೆಟ್ಟು, ಅದನ್ನು ಬೆಳೆಸೋಣ. ನಮ್ಮ ಸುತ್ತಲೂ ಸ್ವಚ್ಛತೆ, ಹಸಿರು ಮತ್ತು ಆರೋಗ್ಯಕರ ಪರಿಸರ ನಿರ್ಮಿಸೋಣ ಎಂದು ಲಕ್ಷ್ಮೀ ರಾಜೀವ್ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಎಲ್ಲರೂ ಗಿಡಗಳಿಗೆ ನೀರು ಹಾಕಿ, ಪ್ರತಿಯೊಂದು ಗಿಡಕ್ಕೂ ಪ್ರೀತಿ ಮತ್ತು ಕಾಳಜಿ ತೋರಿಸಿದರು.
ಕಾರ್ಯಕ್ರಮದಲ್ಲಿ ಹೆಚ್.ವಿ. ರಾಜೀವ್ ಸ್ನೇಹ ಬಳಗದ ಸದಸ್ಯರಾದ ಆರ್. ಕುಮಾರ್, ರಘು, ಕಾರ್ತಿಕ್, ಗೌತಮ್, ವಿವೇಕ್ ಹಾಗೂ ಇನ್ನರ್ ವ್ಹೀಲ್ ಕ್ಲಬ್‌ನ ಸದಸ್ಯರಾದ ಲಕ್ಷ್ಮಿ ರಾಜೀವ್, ಸಂಧ್ಯಾ ಎಸ್., ಲಾವಣ್ಯ, ಸಂಧ್ಯಾ ಯು., ಲಕ್ಷ್ಮಿ, ಸವಿತಾ, ಸಮಿತ, ವಿಜಯ ಸೇರಿದಂತೆ ಪರಿಸರ ಪ್ರೇಮಿಗಳು ಭಾಗವಹಿಸಿದ್ದರು.