ಹುಣಸೂರು: ಮಾಜಿ ಮುಖ್ಯಮಂತ್ರಿ ಡಿ ದೇವರಾಜ ಅರಸು ಅವರು ಸ್ಥಾಪಿಸಿದ ಹುಣಸೂರು ತಾಲೂಕಿನ ಹೊನ್ನಿ ಕೊಪ್ಪಲು ಕಾಲೋನಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕರ್ನಾಟಕ ಪ್ರಜಾ ಪಾರ್ಟಿ ರೈತ ಪರ್ವ ವತಿಯಿಂದ ಅರಸು ಪುಣ್ಯತಿಥಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

ಶಾಲೆಯ ಮಕ್ಕಳಿಗೆ ಉಪಹಾರ ಮತ್ತು ಪುಸ್ತಕಗಳನ್ನು ನೀಡುವ ಮೂಲಕ ಡಿ ದೇವರಾಜ ಅರಸು ಅವರ ಪುಣ್ಯತಿಥಿಯನ್ನು ಕೆಪಿಪಿ ರಾಜ್ಯಾಧ್ಯಕ್ಷ ಶಿವಣ್ಣ ಮತ್ತು ತಾಲೂಕು ಅಧ್ಯಕ್ಷ ಚೆಲುವರಾಜು ಅವರ ನೇತೃತ್ವದಲ್ಲಿ ಆಚರಿಸಲಾಯಿತು.

ಈ ವೇಳೆ ಮಾತನಾಡಿದ ಶಿವಣ್ಣ ಮತ್ತು ಚೆಲುವರಾಜು ಅವರು ದೇವರಾಜ ಅರಸು ಅವರು ಹುಣಸೂರಿಗೆ ನೀಡಿರುವ ಕೊಡುಗೆಯನ್ನು ಯಾರು ಮರೆಯಲಾಗದು ಎಂದು ಹೇಳಿದರು.

ಇಂದಿನಿಂದ ಒಂದನೇ ತಾರೀಖಿನವರೆಗೂ ಹುಣಸೂರು ತಾಲೂಕಿನ ಸರ್ಕಾರಿ ಶಾಲೆಯ ಒಂದು ಸಾವಿರ ಮಕ್ಕಳಿಗೆ ಸ್ಕೂಲ್ ಬ್ಯಾಗ್ ಮತ್ತು ಪುಸ್ತಕಗಳನ್ನು ವಿತರಿಸುವ ಯೋಜನೆಯನ್ನು ಹಮ್ಮಿಕೊಂಡಿದ್ದೇವೆ ಎಂದು ಚೆಲುವರಾಜು ಈ ವೇಳೆ ತಿಳಿಸಿದರು.

ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯೋಪಾಧ್ಯಾಯರಾದ ರಮೇಶ್ ಎನ್.ಕೆ.,ಶಿಕ್ಷಕರುಗಳಾದ ಗಿರೀಶ್ ಕುಮಾರ್ ಕೆ.ಎಸ್, ರೇಖಾ ಎಚ್.ಪಿ ಮತ್ತು ಎಸ್ ಡಿ ಎಂ ಸಿ ಅಧ್ಯಕ್ಷ ಸಿದ್ದರಾಜು ಹಾಗೂ ಗ್ರಾಮದ ಯಜಮಾನರುಗಳಾದ ಸೋಮಣ್ಣ ವೆಂಕಟಬೋವಿ, ಮಹದೇವ್ ಮತ್ತಿತರರು ಉಪಸ್ಥಿತರಿದ್ದರು.
