ಭಾರತ್ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಪಿ ಜಿ ಆರ್ ಎಸ್ ಎಸ್ ನಿಂದ ಪರಿಸರ ದಿನಾಚರಣೆ

Spread the love

ಮೈಸೂರು: ಪಂಚಾಯತ್ ಗ್ರಾಮ ಅಭಿವೃದ್ಧಿ ಮತ್ತು ರೈತರ ಸೇವಾ ಸಮಿತಿ ಹಾಗೂ ಭಾರತ್ ಕ್ಯಾನ್ಸರ್ ಹಾಸ್ಪಿಟಲ್ ಸಹಯೋಗದೊಂದಿಗೆ ವಿಶ್ವ ಪರಿಸರ ದಿನಾಚರಣೆ ಹಮ್ಮಿಕೊಳ್ಳಲಾಯಿತು.

ಭಾರತ್ ಕ್ಯಾನ್ಸರ್ ಆಸ್ಪತ್ರೆಯ ಆವರಣದಲ್ಲಿ ಸಸಿ ನೆಡುವುದರ ಮೂಲಕ ವಿಶ್ವ ಪರಿಸರ ದಿನಾಚರಣೆಯನ್ನು ಪಿ ಜಿ ಆರ್ ಎಸ್ ಎಸ್
ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಯಾದವ ಹರೀಶ್ ಹೆಚ್.ಎ., ಕಾರ್ಯದರ್ಶಿ ರವೀಂದ್ರ ವಿ, ಸಹಕಾರದರ್ಶಿ ಮಂಜುಳಾ ಎಸ್, ಸಂಸ್ಥೆಯ ಸಂಚಾಲಕ ರಕ್ತದಾನಿ ಮಂಜು, ಭಾರತ್ ಕ್ಯಾನ್ಸರ್ ಆಸ್ಪತ್ರೆಯ ಶಿವ ಪ್ರಸಾದ್, ಜನರಲ್ ಮ್ಯಾನೇಜರ್, ಬಿ.ಹೆಚ್. ಐ.ಒ ಮೈಸೂರು ಆನಂದ್, ಮಾರ್ಕೆಟಿಂಗ್ ಮ್ಯಾನೇಜರ್, ಬಿ.ಹೆಚ್.ಐ.ಒ, ಮೈಸೂರು, ರಾಹುಲ್ ದಾಸ್, ತೋಟಗಾರಿಕಾ ಮತ್ತು ಬೇಸಾಯ ತಜ್ಞರು, ಗಾರ್ಡನರ್ ಗಳಾದ ಚೆಲುವರಾಜು, ಧರ್ಮ ನಾಯಕ, ಮಹದೇವ ಅವರುಗಳ ಸಮ್ಮುಖದಲ್ಲಿ ಗಿಡ ನೆಟ್ಟು ನೀರು ಹಾಕಿ ಪರಿಸರ‌ ದಿನಾಚರಣೆ ನೆರವೇರಿಸಲಾಯಿತು.