ಆರ್‌ಸಿಬಿ ಫೈನಲ್ ಗೆ: ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದ ಅಭಿಮಾನಿಗಳು

Spread the love

ಮೈಸೂರು: 2025ರ ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫೈನಲ್ ಗೆ ಲಗ್ಗೆ ಇಟ್ಟ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಕ್ರಿಕೆಟ್ ಪ್ರೇಮಿಗಳು ಸಂಭ್ರಮಾಚರಣೆ ಮಾಡಿದರು.

ಚಾಮರಾಜ ಜೋಡಿ ರಸ್ತೆಯಲ್ಲಿ ಕ್ರಿಕೆಟ್ ಪ್ರೇಮಿಗಳು ಪಟಾಕಿ ಸಿಡಿಸಿ
ಸಿಹಿ ಅಂಚಿ ಈ ಸಲಿ ಕಪ್ ನಮ್ದೇ ಎಂಬ ಘೋಷಣೆ ಕೂಗಿ ಸಂಭ್ರಮಿಸಿದರು.

ಈ ಸಂಭ್ರಮಾಚರಣೆಯಲ್ಲಿ ಮಕ್ಕಳು ಭಾಗವಹಿಸಿ ಒಬ್ಬರಿಗೊಬ್ಬರು ಸಿಹಿ ತಿನ್ನಿಸಿ ಖುಷಿ ಪಟ್ಟರು.

ಈ ವೇಳೆ ಕ್ರಿಕೆಟ್ ಪ್ರೇಮಿ ಜಿ ರಾಘವೇಂದ್ರ ಮಾತನಾಡಿ ಈ ಬಾರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಕಪ್ ಗೆಲ್ಲುವ ನಿರೀಕ್ಷೆ ನಮ್ಮಲ್ಲಿದೆ,ಈ ಬಾರಿ ಎಲ್ಲಾ ಪಂದ್ಯದಲ್ಲೂ ಆರ್‌ಸಿಬಿ ಉತ್ತಮ ಪ್ರದರ್ಶನ ನೀಡಿದ್ದು ಆರ್ ಸಿ ಬಿ ಗೆ ಈ ಬಾರಿ ಗೆಲುವು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಿಶೋರ್ ಕುಮಾರ್,ಜಿ ರಾಘವೇಂದ್ರ,ಕಿರಣ್, ಹರೀಶ್ ನಾಯ್ಡು, ಮಾಯ, ಚಕ್ರಪಾಣಿ, ಸುಬ್ಬಣ್ಣ, ಹರೀಶ್ ನಾಯ್ಡು, ಮಹಾನ್ ಶ್ರೇಯಸ್,ಮಹೇಶ್ ಕುಮಾರ್, ಮಂಜುನಾಥ್, ಮುಶೀರ, ಲಕ್ಷ್ಮಣ್ ಮತ್ತಿತರರು ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡಿದ್ದರು.