ಮಾಸ್ಕೋಲಿ ಭಾರತದ ಸಂಸದರಿದ್ದ‌‌ ವಿಮಾನದ ಮೇಲೆ ಡ್ರೋಣ್ ದಾಳಿ

Spread the love

ಮಾಸ್ಕೋ: ಭಾರತದ ಸಂಸದರ ನಿಯೋಗ ಮಾಸ್ಕೊ ಏರ್​ಪೋರ್ಟ್​ನಲ್ಲಿ ಇಳಿಯುವ ವೇಳೆ ಡ್ರೋನ್ ದಾಳಿಯಾಗಿದ್ದು,ಕೆಲಕಾಲ ಆತಂಕ ಮನೆಮಾಡಿತ್ತು.

ಕನ್ನಿಮೋಳಿಯೊಳಗೊಂಡ ಭಾರತದ ಸಂಸದರ ನಿಯೋಗ ಏರ್​ಪೋರ್ಟ್​ನಲ್ಲಿ ಇಳಿಯುವಾಗ ಡ್ರೋನ್ ದಾಳಿ ಆಗಿದೆ,ಆದರೆ ಕೂದಲೆಳೆ ಅಂತರದಲ್ಲಿ ಎಲ್ಲರೂ ಬಚಾವಾಗಿದ್ದಾರೆ.

ಆಪರೇಷನ್ ಸಿಂಧೂರ್‌ನಲ್ಲಿ ರಷ್ಯಾಕ್ಕೆ ತೆರಳಿದ್ದ ಭಾರತೀಯ ಸಂಸದರ ನಿಯೋಗವು ಮಾಸ್ಕೋ ವಿಮಾನ ನಿಲ್ದಾಣದಲ್ಲಿ ಇಳಿಯುವಾಗಲೇ ಡ್ರೋನ್ ದಾಳಿ ನಡೆದಿದೆ.

ಆಪರೇಷನ್ ಸಿಂಧೂರ್‌ ಬಗ್ಗೆ ಇಡೀ ಜಗತ್ತಿಗೆ ಮಾಹಿತಿ ನೀಡಲು ಹಾಗೂ ಪಾಕ್​ ಬಣ್ಣ ಬಯಲು ಮಾಡಲು ಡಿಎಂಕೆ ಸಂಸದೆ ಕನಿಮೋಳಿ ಸೇರಿದಂತೆ ಸಂಸದರ ನಿಯೋಗ ಹೊರಟಿದೆ. ಅದರಲ್ಲಿ ಈ ನಿಯೋಗ ರಷ್ಯಾಗೆ ತೆರಳುತ್ತಿತ್ತು.

ಹಲವಾರು ಗಂಟೆಗಳ ವಿಳಂಬ ಮತ್ತು ಭದ್ರತಾ ಪರಿಸ್ಥಿತಿಗಳ ಮೌಲ್ಯಮಾಪನದ ನಂತರ, ವಿಮಾನವು ಮಾಸ್ಕೋ ವಿಮಾನ ನಿಲ್ದಾಣದಲ್ಲಿ ಇಳಿಯಿತು.

ಆಪರೇಷನ್ ಸಿಂಧೂರ್ ಬಗ್ಗೆ ಭಾರತದ ನಿಲುವನ್ನು ತಿಳಿಸಲು ಭಾರತದಿಂದ ಆರು ನಿಯೋಗಗಳು ವಿವಿಧ ದೇಶಗಳಿಗೆ ಹೋಗಿವೆ. ಭಾರತದಿಂದ ರಷ್ಯಾಕ್ಕೆ ತೆರಳಿರುವ ನಿಯೋಗದಲ್ಲಿ ಡಿಎಂಕೆ ಸಂಸದೆ ಕನ್ನಿಮೋಳಿ, ಸಮಾಜವಾದಿ ಪಕ್ಷದ ಸಂಸದ ರಾಜೀವ್ ರೈ, ಆರ್‌ಜೆಡಿ ಸಂಸದ ಪ್ರೇಮಚಂದ್ ಗುಪ್ತಾ, ಕ್ಯಾಪ್ಟನ್ ಬ್ರಿಜೇಶ್, ಅಶೋಕ್ ಕುಮಾರ್ ಮಿತ್ತಲ್ ಮತ್ತು ರಾಯಭಾರಿ ಮಂಜೀವ್ ಸಿಂಗ್ ಪುರಿ ಸೇರಿದ್ದಾರೆ.

ರಷ್ಯಾದ ಮಾಸ್ಕೋ ವಿಮಾನ ನಿಲ್ದಾಣದ ಮೇಲೆ ಉಕ್ರೇನ್ ಡ್ರೋನ್ ದಾಳಿ ನಡೆಸಿದೆ ಎಂದು ಆರೋಪಿಸಲಾಗಿದೆ.

ಇದಾದ ನಂತರ ಮಾಸ್ಕೋ ವಿಮಾನ ನಿಲ್ದಾಣದಲ್ಲಿ ಅವ್ಯವಸ್ಥೆ ಉಂಟಾಯಿತು. ಮತ್ತು ಇಳಿಯಲು ಕಾಯುತ್ತಿದ್ದ ವಿಮಾನಗಳನ್ನು ತಾತ್ಕಾಲಿಕವಾಗಿ ವಿಮಾನ ನಿಲ್ದಾಣದಲ್ಲಿ ಇಳಿಯಲು ಅನುಮತಿ ನೀಡಿರಲಿಲ್ಲ.

ಮಾಸ್ಕೋ ವಿಮಾನ ನಿಲ್ದಾಣವು ದೇಶೀಯ ಮತ್ತು ಅಂತಾರಾಷ್ಟ್ರೀಯ ವಿಮಾನಗಳ ಹಾರಾಟವನ್ನು ಹಲವಾರು ಗಂಟೆಗಳ ಕಾಲ ಸ್ಥಗಿತಗೊಳಿಸಿತು. ಇದರಿಂದಾಗಿ ಸಂಸದರು ಪ್ರಯಾಣಿಸುತ್ತಿದ್ದ ವಿಮಾನ ಇಳಿಯಲು ಸಾಧ್ಯವಾಗದೆ ಗಾಳಿಯಲ್ಲಿ ಸುತ್ತುತ್ತಲೇ ಇತ್ತು. ಹಕವು ಗಂಟೆಗಳ ವಿಳಂಬದ ನಂತರ, ವಿಮಾನ ಸುರಕ್ಷಿತವಾಗಿ ಇಳಿಯಿತು.

ಇದಾದ ನಂತರ, ರಷ್ಯಾದಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಅಧಿಕಾರಿಗಳು ಸರ್ವಪಕ್ಷ ಸಂಸದರ ನಿಯೋಗವನ್ನು ಸ್ವಾಗತಿಸಿ ಸುರಕ್ಷಿತವಾಗಿ ಅವರ ಹೋಟೆಲ್‌ಗೆ ಕರೆದೊಯ್ದರು.

ರಷ್ಯಾ ಭೇಟಿಯನ್ನು ಪೂರ್ಣಗೊಳಿಸಿದ ನಂತರ, ನಿಯೋಗವು ಸ್ಲೊವೇನಿಯಾ, ಗ್ರೀಸ್, ಲಾಟ್ವಿಯಾ ಮತ್ತು ಸ್ಪೇನ್‌ಗೆ ಪ್ರಯಾಣಿಸಲಿದೆ.