ಮೈಸೂರು: ಅಖಿಲ ಕರ್ನಾಟಕ ರಕ್ಷಣಾ ವೇದಿಕೆ ಹಸಿರು ಸೇನೆ ವತಿಯಿಂದ ಮೇ 22 ರಂದು ಬೆಳಗ್ಗೆ 11 ಗಂಟೆಗೆ ನಜರ್ಬಾದ್ ನಲ್ಲಿರುವ ವಿಕೆ ಕನ್ವೆನ್ಷನ್ ಹಾಲ್ನಲ್ಲಿ ಗುರು ವಂದನ ಕಾರ್ಯಕ್ರಮ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಗುರುವಾರ ಬೆಳಿಗ್ಗೆ 10:30 ಕ್ಕೆ ಪ್ರಿನ್ಸ್ ತಂಡದಿಂದ ಕರೋಕೆ ಕಾರ್ಯಕ್ರಮ. ನಂತರ ಕಾರ್ಯಕ್ರಮವನ್ನು ಪ್ರಮೀಳಾ ಭರತ್ ಮತ್ತು ಯಶೋಧ ರವಿಕುಮಾರ್ ಉದ್ಘಾಟಿಸಲಿದ್ದಾರೆ.
ವೇದಿಕೆಯ ರಾಜ್ಯ ಉಪಾಧ್ಯಕ್ಷರಾದ ರಾಜೇಶ್ವರಿ ಪ್ರಾಥಮಿಕ ನುಡಿ. ಮುಖ್ಯ ಅತಿಥಿಗಳಾಗಿ ಸಮಾಜ ಸೇವಕರಾದ ದಿನೇಶ್ ಅವರು ಮಾತನಾಡಲಿದ್ದಾರೆ.
ಬ್ರಾಹ್ಮಣ ಸಮುದಾಯದ ಮುಖಂಡರು ಹಾಗೂ ಹಿರಿಯ ಸಮಾಜ ಸೇವಕರು ಸಹಕಾರಿಗಳು ಆದ ರಘುರಾಮ್ ವಾಜಪೇಯಿ ಅವರಿಗೆ ಸನ್ಮಾನ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚಾಮರಾಜ ವಿಧಾನಸಭಾ ಕ್ಷೇತ್ರದ ಶಾಸಕ ಹರೀಶ್ ಗೌಡ ವಹಿಸುವರು. ಸಮಾಜ ಸೇವಕರು ಹಾಗೂ ಉದ್ಯಮಿಗಳಾದ ಸುಜಿತ್ ಕುಮಾರ್ ಅವರು ಸಾಧಕರಿಗೆ ಸನ್ಮಾನ ಮಾಡಲಿದ್ದಾರೆ.
ರೈತ ಮುಖಂಡರಾದ ಸಿಂಧುವಳ್ಳಿ ಶಿವಕುಮಾರ್, ಗೋಪಾಲಗೌಡ ಆಸ್ಪತ್ರೆಯ ವೈದ್ಯರಾದ ಸುಶೃತ್ ಗೌಡ, ಸಮಾಜ ಸೇವಕರಾದ ರವಿಗೌಡ, ಶಶಿಕಲಾ ಸುರೇಂದ್ರ ಸೇರಿದಂತೆ ಹಲವಾರು ಗಣ್ಯರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಅಖಿಲ ಕರ್ನಾಟಕ ರಕ್ಷಣಾ ವೇದಿಕೆ, ಹಸಿರು ಸೇನೆ ರಾಜ್ಯಾಧ್ಯಕ್ಷ ಆರ್ ಶ್ರೀನಿವಾಸ್ ತಿಳಿಸಿದ್ದಾರೆ.