ಗೃಹಲಕ್ಷ್ಮೀ ಹಣದ ಬಗ್ಗೆ ಜಾರ್ಜ್ ಹೇಳಿಕೆ:ಅಶೋಕ್ ವ್ಯಂಗ್ಯ

Spread the love

ಬೆಂಗಳೂರು: ಗೃಹಲಕ್ಷ್ಮೀ ಹಣದ ಬಗ್ಗೆ ಇಂಧನ ಸಚಿವ ಕೆ.ಜೆ.ಜಾರ್ಜ್ ಹೇಳಿಕೆ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಮಾತನಾಡಿರುವ ರೀತಿಗೆ
ಪ್ರತಿಪಕ್ಷ ನಾಯಕ ‌ಅಶೋಕ್ ವ್ಯಂಗ್ಯವಾಡಿದ್ದಾರೆ.

ಇತ್ತೀಚೆಗಷ್ಟೇ ಕೆ.ಜೆ.ಜಾರ್ಜ್ ಸಾಹೇಬರು ಗೃಹಲಕ್ಷ್ಮೀ ಹಣವನ್ನ ತಿಂಗಳು ತಿಂಗಳು ಕರೆಕ್ಟಾಗಿ ಕೊಡೋಕೆ ಅದೇನು ಸಂಬಳಾನಾ ಅಂತ ಕರ್ನಾಟಕದ ಮಹಿಳೆಯರ ಸ್ವಾಭಿಮಾನವನ್ನೇ ಪ್ರಶ್ನೆ ಮಾಡಿ ಅವಮಾನ ಮಾಡಿದ್ದರು.

ಈಗ ಡಿಸಿಎಂ ಡಿ.ಕೆ.ಶಿವಕುಮಾರ್ ಸಾಹೇಬರು ಗೃಹಲಕ್ಷ್ಮಿ ಹಣವನ್ನ ಪ್ರತಿ ತಿಂಗಳು ಕೊಡ್ತೀವಿ ಅಂತ ಹೇಳೇ ಇಲ್ಲ ಎಂದು ಉಲ್ಟಾ ಹೊಡೆದಿದ್ದಾರೆ.

ಇದೇನಾ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ‌ ಗಾಂಧಿ ಅವರ ಖಟಾಖಟ್ ಖಟಾಖಟ್ ಮಾಡೆಲ್ ಎಂದು ‌ಟ್ವೀಟ್ ಮಾಡಿ ಗೇಲಿ ಮಾಡಿದ್ದಾರೆ ಅಶೋಕ್.

ನಾಡಿನ ತಾಯಂದಿರಿಗೆ, ಅಕ್ಕ-ತಂಗಿಯರಿಗೆ ನಂಬಿಕೆ ದ್ರೋಹ ಮಾಡಿದ ಕಾಂಗ್ರೆಸ್ ಸರ್ಕಾರಕ್ಕೆ ಮಹಿಳೆಯರ ಶಾಪ ತಟ್ಟದೇ ಇರದು ಎಂದು ಅವರು ಎಚ್ಚರಿಸಿದ್ದಾರೆ.