ಮೈಸೂರು: ಭಾರತವು ಪ್ರತಿ 100 ಕಿ.ಮೀ.ಗೆ ತನ್ನ ಪ್ರಕೃತಿ ಮತ್ತು ಸಂಸ್ಕಾರವನ್ನು ಬದಲಿಸುತ್ತದೆ, ಇದೇ ನಮ್ಮ ವಿಶೇಷತೆಯಾಗಿದ್ದು,ಅದನ್ನು ಉಳಿಸಿಕೊಳ್ಳಬೇಕು ಎಂದು ಶ್ರೀ ಕೃಷ್ಣ ಟ್ರಸ್ಟ್ ಉಪಾಧ್ಯಕ್ಷ ರವಿಶಾಸ್ತ್ರಿಹೇಳಿದರು.
ನಗರದ ಸರಸ್ವತಿಪುರಂನಲ್ಲಿರುವ ಶ್ರೀ ಕೃಷ್ಣ ಧಾಮದಲ್ಲಿ ಶ್ರೀ ಕೃಷ್ಣ ಟ್ರಸ್ಟ್ ಹಾಗೂ ಶ್ರೀ ಕೃಷ್ಣ ಮಿತ್ರ ಮಂಡಳಿ ವತಿಯಿಂದ 15 ದಿನದ ಉಚಿತ ಧಾರ್ಮಿಕ ಬೇಸಿಗೆ ಶಿಬಿರದ ಸಮಾರೋಪದಲ್ಲಿ ಅವರು ಮಾತನಾಡಿದರು.

ವೇದ, ಉಪನಿಷತ್ತು, ಪುರಾಣ, ಅರಣ್ಯಕಗಳೇ ಭಾರತೀಯ ಸಂಸ್ಕೃತಿಯ ತಳಹದಿ. ಈ ಅಡಿಪಾಯವನ್ನು ಇನ್ನಷ್ಟು ಗಟ್ಟಿಗೊಳಿಸುವ ಕೆಲಸ ಆಗಬೇಕಿದೆ,
‘ವೇದ, ಉಪನಿಷತ್ತು, ಪುರಾಣಗಳ ಜ್ಞಾನವೇ ಶ್ರೀರಕ್ಷೆಯಾಗಿದೆ. ಇವುಗಳನ್ನು ಅರಿತವರಲ್ಲಿ ತೇಜಸ್ಸು ವೃದ್ಧಿಯಾಗುತ್ತದೆ’ ಎಂದು ರವಿಶಾಸ್ತ್ರಿ,ಹೇಳಿದರು.
ಕಾರ್ಯಕ್ರಮದಲ್ಲಿ ಗೋಪಾಲಸ್ವಾಮಿ ಶಾಲೆಯ ಶಿಕ್ಷಕರಾದ ವಿಜಯ ಪ್ರಕಾಶ್, ಶಿಬಿರದ ಉಪನ್ಯಾಸಕರದ ಶ್ರೀಕಾಂತ್ ಆಚಾರ್ಯ, ಮುಕುಂದಾಚಾರ್ಯ, ಮನ್ಯಾ ಆಚಾರ್ಯ, ಶ್ರೀಹರಿಆಚಾರ್ಯ, ಸುರೇಶ್, ಶಿವಪ್ರಕಾಶ್, ಶುಭ ಮಂಗಳ, ರಘುರಾಮ್,ಶ್ರೀವತ್ಸ ಮತ್ತಿತರರು ಹಾಜರಿದ್ದರು.