ಮೈಸೂರು: ಜಿಲ್ಲೆಯ ಹುಣಸೂರಿನ ಮೂಕನಹಳ್ಳಿ ಗ್ರಾಮದ ಮನೆಯಲ್ಲಿ ಕಳ್ಳರು
ಲಾಕರ್ನಲ್ಲಿಟ್ಟಿದ್ದ 200ಗ್ರಾಂ ಚಿನ್ನಾಭರಣ 1 ಲಕ್ಷ ನಗದು ಕಳ್ಳತನ ಮಾಡಿದ್ದಾರೆ.
ಸ್ವಾಮಿಗೌಡ ಎಂಬುವವರ ಮನೆಯಲ್ಲಿ ಈ ಕಳ್ಳತನ ನಡೆದಿದ್ದು,ಮನೆಯಲ್ಲಿ ಯಾರೂ ಇರಲಿಲ್ಲ,ಹೊರಗಡೆ ಹೋಗಿದ್ದರು.
ಒಂದು ಚೈನ್, 4 ಉಂಗುರ, 2 ಜೊತೆ ಓಲೆ, ಕಡಗ, ಬ್ರಾಸ್ ಲೈಟ್
ಒಂದು ಲಕ್ಷರೂ ನಗದು ಕಳುವಾಗಿದೆ.
ಹುಣಸೂರು ಪಟ್ಟಣ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಪೊಲೀಸರು ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮನೆಯವರಿಂದ ಮಾಹಿತಿ ಪಡೆದರು.
