ಲಂಡನ್: ಎಸ್‌ಬಿಐ ಸೇರಿ ಭಾರತೀಯ
ಬ್ಯಾಂಕ್‌ಗಳಿಗೆ ವಂಚಿಸಿ ಪರಾರಿಯಾಗಿದ ಉದ್ಯಮಿ ವಿಜಯ ಮಲ್ಯಗೆ ಲಂಡನ್ ಹೈಕೋರ್ಟ್‌ನಲ್ಲಿ ಭಾರೀ ಹಿನ್ನಡೆಯಾಗಿದೆ.
ಬ್ಯಾಂಕ್‌ಗಳ ಒಕ್ಕೂಟ ತಮ್ಮನ್ನು ದಿವಾಳಿ ಎಂದು ಪರಿಗಣಿಸಿದ್ದನ್ನು ಪ್ರಶ್ನಿಸಿ ಮಲ್ಯ ಪ್ರಶ್ನಿಸಿದ್ದ ಅರ್ಜಿಯನ್ನು ಲಂಡನ್ ಹೈಕೋರ್ಟ್ ತಿರಸ್ಕರಿಸಿದೆ. ಕಿಂಗ್‌ಫಿಶರ್ ಏರ್‌ಲೈನ್ಸ್ ಪತನಗೊಂಡ ಬಳಿಕ ಮಲ್ಯ ಲಂಡನ್‌ಗೆ ಪರಾರಿಯಾಗಿ ನೆಲೆಸಿದ್ದರೆಂದು ಆರೋಪಿಸಲಾಗಿದೆ.
ಬ್ಯಾಂಕ್‌ಗಳ ಒಕ್ಕೂಟಕ್ಕೆ 11,000 ಕೋಟಿ ರೂ. ಸಾಲ ಬಾಕಿ ಉಳಿಸಿದ್ದಾರೆಂಬ ಆರೋಪ ಮಲ್ಯ ಮೇಲಿದೆ. ಹೀಗಾಗಿ, ಮಲ್ಯ ಅವರನ್ನು ದಿವಾಳಿ ಎಂದು ಘೋಷಿಸಿ ಆಸ್ತಿ ವಶಪಡಿಸಿಕೊಳ್ಳಬೇಕು ಎಂದು ಬ್ಯಾಂಕ್‌ಗಳು ತೀರ್ಮಾನಿಸಿದ್ದವು.
ಅಲ್ಲದೆ ಬ್ರಿಟನ್‌ನಲ್ಲಿಯೂ ಕೂಡ ಬ್ಯಾಂಕ್‌ಗಳ ಒಕ್ಕೂಟ ಕಾನೂನು ಹೋರಾಟ ನಡೆಸಿದ್ದವು. 2021ರಲ್ಲಿ ಮಲ್ಯರನ್ನು ಬ್ರಿಟನ್ ಕೋರ್ಟ್ ದಿವಾಳಿ ಎಂದು ಘೋಷಿಸಿತ್ತು. ಅದನ್ನು ಪ್ರಶ್ನಿಸಿ ಮಲ್ಯ ಮೇಲ್ಮನವಿ ಸಲ್ಲಿಸಿದ್ದರು.
ಬ್ಯಾಂಕ್‌ಗಳು ಈಗಾಗಲೇ ಸಾಲದ ಮೊತ್ತಕ್ಕೆ ಸರಿದೂಗುವಷ್ಟು ಮಲ್ಯ ಅವರ ಆಸ್ತಿಯನ್ನು ವಶಪಡಿಸಿಕೊಂಡಿವೆ.