ಉಡುಪಿ: ಉಡುಪಿ ಜಿಲ್ಲೆಯ ಶಂಕರಪುರದ ಸೈಂಟ್ ಜಾನ್ ವಿದ್ಯಾಸಂಸ್ಥೆಗಳ ಮಕ್ಕಳಿಗೆ ಒಂದು ದಿನದ ಕೃಷಿ ದರ್ಶನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಸಂಸ್ಥೆಯ ಮೂರನೇ ತರಗತಿಯಿಂದ 8ನೇ ತರಗತಿವರೆಗಿನ 150ಕ್ಕೂ ಅಧಿಕ ವಿದ್ಯಾರ್ಥಿಗಳು ಹಾಗೂ ಶಾಲೆಯ ಎಲ್ಲಾ ಅಧ್ಯಾಪಕ ವೃಂದದವರು ಒಂದು ದಿನದ ಕೃಷಿ ದರ್ಶನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ವಿಷ ಮುಕ್ತ ಅನ್ನದ ಬಟ್ಟಲು ಎಂಬ ಶಿರೋನಾಮೆಯಡಿ ಕೃಷಿ ದರ್ಶನವನ್ನು ರಾಜ್ಯ ಹಾಗೂ ರಾಷ್ಟ್ರ ಕೃಷಿ ಪ್ರಶಸ್ತಿ ವಿಜೇತ ಜೋಸೆಫ್ ಲೋಬೊ ಶಂಕರಪುರ ಅವರಿಂದ ಕೃಷಿ ಮಾಹಿತಿಯನ್ನು ಹಮ್ಮಿಕೊಳ್ಳಲಾಗಿತ್ತು.

ವಿವಿಧ ಬಗೆಯ ತರಕಾರಿ ಹಣ್ಣು ಹಂಪಲು ಹಾಗೂ ಆಯುರ್ವೇದಿಯ ಸಸ್ಯಗಳ ಪರಿಚಯ ಮತ್ತು ಉಪಯೋಗದ ಬಗ್ಗೆ ಮಾಹಿತಿಯನ್ನು ನೀಡಲಾಯಿತು.
ವಿಶೇಷವಾಗಿ 2.74 ಲಕ್ಷ ಬೆಲೆಬಾಳುವ ಜಪಾನಿನ ಮಿಯಾಜಾಕಿ ಎಂಬ ತಳಿಯ ಮಾವಿನ ಹಣ್ಣನ್ನು ವೀಕ್ಷಣೆ ಮಾಡಿ ಎಲ್ಲಾ ವಿದ್ಯಾರ್ಥಿ ಹಾಗೂ ಅಧ್ಯಾಪಕರು ಕಣ್ತುಂಬಿ ಕೊಂಡರು.
ಈ ವೇಳೆ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರಕೃತಿ ಹಾಗೂ ಪರಿಸರದ ಬಗ್ಗೆ ಅರಿವು ಮೂಡಿಸಲಾಯಿತು.