ಹನಿಟ್ರ್ಯಾಪ್ ದೂರು ದಾಖಲಿಸಲಿಲ್ಲವೇಕೆ ಸಿಎಂ ಕುರ್ಚಿ ಭದ್ರಪಡಿಸುವ ತಂತ್ರವೇ:ಶ್ರೀವತ್ಸ

Spread the love

ಮೈಸೂರು: ರಾಜ್ಯದಲ್ಲಿ ಹನಿಟ್ರ್ಯಾಪ್‌ ವಿಚಾರ ಕುರಿತು ಪ್ರತಿಕ್ರಿಯಿಸಿರುವ ಬಿಜೆಪಿ ಶಾಸಕ ಶ್ರೀವತ್ಸ ಅವರು, ಹನಿಟ್ರ್ಯಾಪ್ ಸಂಬಂಧ ರಾಜಣ್ಣ ಏಕೆ ದೂರು ನೀಡಿರಲಿಲ್ಲ ಹೇಳಲಿ ಎಂದು ಆಗ್ರಹಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು,
ಹನಿಟ್ರ್ಯಾಪ್ ಸಂಬಂಧ ಈವರಗೆ ಯಾಕೆ ದೂರು ದಾಖಲಿಸಲಿಲ್ಲ ಇದು‌ ಸಿಎಂ ಕುರ್ಚಿ ಭದ್ರಪಡಿಸುವ ತಂತ್ರವೇ ಎಂದು ಪ್ರಶ್ನಿಸಿದರು.

ರಾಜಣ್ಣ ಹಾಗೂ ರಾಜಣ್ಣ ಪುತ್ರ ಸದನದಲ್ಲೇ 48 ಮಂದಿ ಕೇಂದ್ರ ನಾಯಕರು ಇದರಲ್ಲಿ ಇದ್ದಾರೆ ಎಂದಿದ್ದಾರೆ. ಅದರಲ್ಲಿ ಇರುವ ನಾಯಕರು ಯಾರು, ಇದರ‌ ಹಿಂದೆ ಯಾರಿದ್ದಾರೆ ಎಂಬುದರ ಸಮಗ್ರ ತನಿಖೆ ನಡೆಯಬೇಕು ಎಂದು ಒತ್ತಾಯಿಸಿದರು.

ಸಿಡಿ ಫ್ಯಾಕ್ಟರಿಯ ಮಾಲೀಕ ಯಾರು ಪತ್ತೆ ಆಗಬೇಕು, ಹರೀಶ್ ಗೌಡ ಅವರ ವಿರುದ್ಧವೂ ಹನಿಟ್ರ್ಯಾಪ್ ಆಗಿತ್ತು, ಈ ಹಿಂದೆ ಕಬ್ಬನ್ ಪೇಟೆ ಠಾಣೆಯಲ್ಲಿ ದೂರು ನೀಡಿದ್ದರು ಎಂದು ನೆನಪಿಸಿದರು.

ವಿಧಾನಸಭೆ, ವಿಧಾನಪರಿಷತ್ ನಲ್ಲಿ ಈ‌ ಹಿಂದೆಯೂ ಹಲವು ಘಟನೆ ನಡೆದಿವೆ. ಈ ಹಿಂದೆ ಕೂಡ ಹಲವರನ್ನ ಸಸ್ಪೆಂಡ್ ಮಾಡಿದ್ದಾರೆ, ಕಾಂಗ್ರೆಸ್ ಪಕ್ಷವನ್ನ ಬೆಳೆಸುವ ಹುನ್ನಾರ ಇದು, ಬಿಜೆಪಿ ಬಗ್ಗು ಬಡಿಯುವ ಪ್ಲಾನ್ ಇದು ಎಂದು ಹೇಳಿದರು.

ಹನಿಟ್ರ್ಯಾಪ್ ನಿಜಕ್ಕೂ ಮಾಡಿದ್ದಾರಾ,ಎಲ್ಲಿದೆ ಸಿಡಿ, ತಪ್ಪು ಮಾಡಿದವರನ್ನ ಹೊರ ತನ್ನಿ ಜನಬಯಸುವ ಜನಪ್ರತಿನಿಧಿ ಯಾರೂ ಇಲ್ಲ, ಶುದ್ಧ ರಾಜಕಾರಣಿಗಳು ಯಾರು ಗೊತ್ತಾಗಲಿ ಮುಂದಿನ ಚುನಾವಣೆಯಲ್ಲಿ ತಕ್ಕ ಪಾಠ ಆಗಲಿ ಎಂದು ಶಾಸಕ ಶ್ರೀವತ್ಸ ಕಡಕ್ ಆಗಿ ತಿಳಿಸಿದರು.