ಕೊಳ್ಳೇಗಾಲ: ಕೊಳ್ಳೇಗಾಲ ನಗರಸಭೆಯ 2025-26 ನೇ ಸಾಲಿನ 1,32,41,667 ರೂ.ಗಳ ಉಳಿತಾಯ ಬಜೆಟ್ ಆನ್ನು ನಗರಸಭಾಧ್ಯಕ್ಷೆ ರೇಖಾ ರಮೇಶ್ ಮಂಡಿಸಿದರು.
ನಗರಸಭೆ ಕೌನ್ಸಿಲ್ ಸಭಾಂಗಣದಲ್ಲಿ ನಡೆದ 2025-26 ನೇ ಸಾಲಿನ ಆಯ-ವ್ಯಯ ಮಂಡನಾ ಸಭೆಯಲ್ಲಿ ಬಜೆಟ್ ಪ್ರತಿ ಓದಿದ ರೇಖಾ ರಮೇಶ್ ಅವರು, ಪ್ರಾರಂಭಿಕ ಶಿಲ್ಕು 14,66,33,667 ರೂ. ಹಾಗೂ ಜಮೆ 36, 89,65,000 ರೂ. ಒಳಗೊಂಡಂತೆ 51,55, 98, 667 ರೂಗಳ ಆಯ-ವ್ಯಯವನ್ನು ಮಂಡಿಸಿದರು.

ಸ್ವಂತ ಮೂಲಗಳಿಂದ 11.55, 03,000 ರೂ. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳಿಂದ 25,34,62,000 ರೂ.ಸೇರಿದಂತೆ ಒಟ್ಟು 36,89,65,000 ರೂ ಆದಾಯ ನಿರೀಕ್ಷಿಸಲಾಗಿದ್ದು. ಇದರಲ್ಲಿ 50,23, 57,000 ರೂ. ವೆಚ್ಚ ಮಾಡಲಾಗಿದೆ.
2025-26 ನೇ ಸಾಲಿಗೆ ಸ್ವಲ್ಪ ಮೂಲಗಳಿಂದ ಕ್ರೂಢೀಕರಿಸಲು ಉದ್ದೇಶಿಸಿರುವ ಪ್ರಮುಖ ಆದಾಯಗಳು:
ಆಸ್ತಿ ತೆರಿಗೆಯಿಂದ 3 ಕೋಟಿ, ಕರಗಳಿಂದ 1 ಕೋಟಿ, ಅಭಿವೃದ್ಧಿ ಶುಲ್ಕದಿಂದ 50 ಲಕ್ಷ, ಕಟ್ಟಡ ಪರವಾನಿಗೆಯಿಂದ 15 ಲಕ್ಷ, ಉದ್ದಿಮೆ ಪರವಾನಿಗೆಯಿಂದ 25 ಲಕ್ಷ, ನೆಲ ಬಾಡಿಗೆಯಿಂದ 15 ಲಕ್ಷ, ಶುದ್ಧ ಕುಡಿಯುವ ನೀರಿನ ಘಟಕಗಳ ಶುಲ್ಕಗಳಿಂದ 25 ಲಕ್ಷ, ನೀರು ಸರಬರಾಜು ಶುಲ್ಕಗಳಿಂದ 90 ಲಕ್ಷ, ಬ್ಯಾಂಕ್ ಬಡ್ಡಿ 45 ಲಕ್ಷ, ವಾಣಿಜ್ಯ ಮಳಿಗೆ ಬಾಡಿಗೆಯಿಂದ 25 ಲಕ್ಷ, ಕೆ ಎಸ್ ಆರ್ ಟಿ ಸಿ ಮಳಿಗೆ ಬಾಡಿಗೆ 30 ಲಕ್ಷ, ಸುಧಾರಣೆ ಶುಲ್ಕಗಳು 10 ಲಕ್ಷ, ಸ್ಟಾಂಪ್ ಶುಲ್ಕ 10 ಲಕ್ಷ, ಘನ ತ್ಯಾಜ್ಯ ನಿರ್ವಹನ ಶುಲ್ಕ 30 ಲಕ್ಷ, ಆಸ್ತಿ ತೆರಿಗೆ ಮೇಲಿನ ದಂಡಗಳು 1 ಕೋಟಿ, ಠೇವಣಿ ಕಡಿತಗಳು ಮತ್ತು ಇತರೆ 2 ಕೋಟಿ 25 ಲಕ್ಷ 60, ಸಾವಿರ, ಕಡಿತಗಳು ಮತ್ತು ಇತರೆ ಆದಾಯ 59.43 ಲಕ್ಷ ಸೇರಿದಂತೆ ಒಟ್ಟು 11.55.03 000 ರೂ.ಗಳು
2024-25 ನೇ ಸಾಲಿಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳಿಂದ ನಿರೀಕ್ಷಿಸಲಾಗಿರುವ ಅನುದಾನಗಳು:
ಎಸ್ ಎಫ್ ಸಿ ವೇತನ ಅನುದಾನ 6 ಕೋಟಿ 75 ಲಕ್ಷ, ಎಸ್ ಎಫ್ ಸಿ ಮುಕ್ತ ನಿಧಿ ಅನುದಾನ 1, 40 ಕೋಟಿ 62,ಸಾವಿರ, ಎಸ್ ಎಫ್ ಸಿ ವಿದ್ಯುತ್ ಅನುದಾನ 5,79 ಕೋಟಿ, ಕುಡಿಯುವ ನೀರಿನ ಅನುದಾನ 10 ಲಕ್ಷ , ಸ್ವಚ್ಛ ಭಾರತ್ ಮಿಷನ್ ಅನುದಾನ 80 ಲಕ್ಷ, 15ನೇ ಹಣಕಾಸು ಅನುದಾನ 3,95 ಕೋಟಿ, ನರ್ಮ್ ಅನುದಾನ 20 ಲಕ್ಷ ಎಸ್ ಎಫ್ ಸಿ ವಿಶೇಷ ಅನುದಾನ 6 ಕೋಟಿ ಗೃಹಭಾಗ್ಯ ಯೋಜನೆಯ ಅನುದಾನ 15 ಲಕ್ಷ ಎನ್ ಪಿ ಎಸ್ ಅನುದಾನ ಸೇರಿದಂತೆ ಒಟ್ಟು 25,34,66,000,ರೂ.ಗಳ ಆದಾಯವನ್ನು ನಿರೀಕ್ಷಿಸಲಾಗಿದೆ.
2024-25 ನೇ ಸಾಲಿಗೆ ಪ್ರಮುಖ ವೆಚ್ಚಗಳು:
ರಸ್ತೆಗಳು ಮತ್ತು ಪಾದಯಾತ್ರೆ ಮಾರ್ಗಗಳಿಗೆ 3,50 ಕೋಟಿ, ರಸ್ತೆ ಬದಿ ಚರಂಡಿಗಳಿಗೆ 1,65 ಕೋಟಿ, ಘನ ತ್ಯಾಜ್ಯ ವಸ್ತು ನಿರ್ವಹಣೆಗೆ ಸಂಬಂಧಿಸಿದಂತೆ ಯಂತ್ರೋಪಕರಣಗಳು ಮತ್ತು ವಾಹನ ಖರೀದಿಗಾಗಿ 3,60 ಕೋಟಿ, ಕ್ರೀಡಾಂಗಣ ನಿರ್ಮಾಣ 3,50 ಕೋಟಿ, ನೀರು ಸರಬರಾಜು ಕಾಮಗಾರಿ ಮತ್ತು ಯಂತ್ರೋಪಕರಣಗಳ ಖರೀದಿಗೆ 3,95 ಕೋಟಿ, ಯುಜಿಡಿ ಕಾಮಗಾರಿಗೆ 1,45 ಕೋಟಿ, ನೌಕರರ ವೇತನ 7.13 ಕೋಟಿ, ಬೀದಿ ದೀಪಗಳು ಮತ್ತು ನೀರು ಸರಬರಾಜು ವಿದ್ಯುತ್ ಬಿಲ್ 5.79 ಕೋಟಿ, ಬೀದಿ ದೀಪಗಳ ದುರಸ್ತಿ ಮತ್ತು ನಿರ್ವಹಣೆ 91 ಲಕ್ಷ, ನೀರು ಸರಬರಾಜು ದುರಸ್ತಿ ಮತ್ತು ನಿರ್ವಹಣೆ 2, 58 ಕೋಟಿ, ಯುಜಿಡಿ ದುರಸ್ತಿ ಮತ್ತು ನಿರ್ವಹಣೆ 1.5 ಕೋಟಿ, ಸಾರ್ವಜನಿಕ ಶೌಚಾಲಯ ನಿರ್ಮಾಣ ಮತ್ತು ದುರಸ್ತಿ 80 ಲಕ್ಷ, ವಿದ್ಯುತ್ ಠೇವಣಿ ಕಡಿತಗಳ ಪಾವತಿ ಹಾಗೂ ಠೇವಣಿಗಳ ಮರುಪಾವತಿ 3.11 ಕೋಟಿ 60 ಸಾವಿರ, ಇತರೆ ವೆಚ್ಚಗಳು ಹಾಗೂ ಸಮೂಹ ಅಭಿವೃದ್ಧಿಗಾಗಿ 2, 96. ಕೋಟಿ 95 ಸಾವಿರ ರೂಪಾಯಿ ಗಳ ಪ್ರಮುಖ ವೆಚ್ಚವನ್ನು ಪ್ರಸಕ್ತ ಬಜೆಟ್ ನಲ್ಲಿ ತೋರಿಸಲಾಗಿದೆ
2025-26 ನೇ ಸಾಲಿನ ಆಯ-ವ್ಯಯದಲ್ಲಿ ಕೈಗೊಳ್ಳಲು ಉದ್ದೇಶಿಸಿರುವ ಕಾರ್ಯಕ್ರಮಗಳು:
ಎಸ್.ಎಫ್.ಸಿ ಅನುದಾನದಲ್ಲಿ ಶ್ರೀ ಮಹದೇಶ್ವರ ಸರ್ಕಾರಿ ಕಾಲೇಜಿನಲ್ಲಿ ಒಳಾಂಗಣ ಕ್ರೀಡಾಂಗಣ ನಿರ್ಮಾಣ, ಕ್ರೀಡಾಂಗಣಕ್ಕೆ ಹೊಂದಿಕೊಂಡಿರುವ ಪ್ರದೇಶದಲ್ಲಿ ಉದ್ಯಾನವನ ಅಭಿವೃದ್ಧಿ, 40 ಲಕ್ಷ ರೂ.ವೆಚ್ಚದಲ್ಲಿ ನಗರದ ಉದ್ಯಾನವನಗಳನ್ನು ಅಭಿವೃದ್ಧಿಗೊಳಿಸಿ ಅಲಂಕಾರಿಕ ದೀಪಗಳನ್ನು, ಜಿಮ್ ಮತ್ತು ವ್ಯಾಯಾಮ ಪರಿಕರಗಳನ್ನು ಅಳವಡಿಸುವುದು, ಘನತ್ಯಾಜ್ಯ ವಿಲೇವಾರಿ ಘಟಕ ಜಮೀನು ಅಭಿವೃದ್ಧಿ, ಜಮೀನಿನಲ್ಲಿ ಪಾರಂಪರಿಕ ತ್ಯಾಜ್ಯ ನಿರ್ವಹಣೆಗೆ ಕಸ ವಿಲೇವಾರಿ ಶೆಡ್, ಸರ್ವಿಸ್ ಸ್ಟೇಷನ್ ವಾಹನ ಹಾಗೂ ಯಂತ್ರೋಪಕರಣಗಳ ಖರೀದಿಗಾಗಿ 448.00 ಲಕ್ಷ ರೂ.ಗಳನ್ನು ಮೀಸಲಿರಿಸಲಾಗಿದೆ.
ಶೇ 24.10 ರ ಪರಿಶಿಷ್ಟಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಕಾರ್ಯಕ್ರಮಗಳಿಗೆ 2024 25 ಸಾಲಿನ ಆರ್ಥಿಕ ವರ್ಷದಲ್ಲಿ ನಗರಸಭೆ ನಿಧಿಯಿಂದ ಹಾಗೂ ಎಸ್.ಎಫ್. ಸಿ ಮುಕ್ತ ನಿಧಿಯಿಂದ 61.02 ಲಕ್ಷ ರೂ.ಗಳನ್ನು, ಶೇ 7.25 ರ ಇತರೆ ಬಡ ಜನರ ಕಲ್ಯಾಣ ಕಾರ್ಯಕ್ರಮಗಳಿಗೆ20.00 ಲಕ್ಷ ರೂ.ಗಳನ್ನು , ಶೇ 5 ರ ವಿಶೇಷ ಚೇತನರ ಕಲ್ಯಾಣ ಕಾರ್ಯಕ್ರಮಗಳಿಗೆ 20.00 ಲಕ್ಷ ರೂ.ಗಳನ್ನು ನಿಗದಿಪಡಿಸಲು ಉದ್ದೇಶಿಸಲಾಗಿದೆ. ಎಸ್.ಎಫ್.ಸಿ ವಿಶೇಷ ಅನುದಾನದಲ್ಲಿ
ಸುಸಜ್ಜಿತ ವಿದ್ಯುತ್ ಚಿತಗಾರ ನಿರ್ಮಿಸಲು 50.00 ಲಕ್ಷ ರೂ., ನಗರದ ಎಲ್ಲಾ ವಾರ್ಡ್ ಗಳ ಮೂಲಭೂತ ಸೌಲಭ್ಯಗಳ ಅಭಿವೃದ್ಧಿಗೆ 2 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ.
ನಗರಸಭೆ ವ್ಯಾಪ್ತಿಯ ಕೆರೆಗಳನ್ನು ಬಾಹ್ಯ ನೆರವಿನಿಂದ ಅಭಿವೃದ್ಧಿ ಪಡಿಸಲು ಯೋಜಿಸ ಲಾಗಿದೆ ಎಂದು ಆಯ-ವ್ಯಯದಲ್ಲಿ ರೇಖಾ ತಿಳಿಸಿದರು.

ಬಜೆಟ್ ಅನ್ನು ಉಪಾಧ್ಯಕ್ಷರು, ಸ್ತಾಯಿ ಸಮಿತಿ ಅಧ್ಯಕ್ಷರು,ಪೌರಾಯುಕ್ತರು ಸೇರಿದಂತೆ ನಗರಸಭೆಯ ಎಲ್ಲಾ ಸದಸ್ಯರು ಒಕ್ಕೊರಲಿನಿಂದ ಅನುಮೋದಿಸಿದರು.
ಈ ವೇಳೆ ನಗರಸಭೆ ಉಪಾಧ್ಯಕ್ಷ ಎ.ಪಿ.ಶಂಕರ್,ಸ್ತಾಯಿ ಸಮಿತಿ ಅಧ್ಯಕ್ಷ ಸುರೇಶ್ ಹಾಗೂ ನಗರಸಭೆ ಸದಸ್ಯರು, ಪೌರಾ ಯುಕ್ತ ಎ.ರಮೇಶ್ ಎ.ಇ. ಸುರೇಶ್, ಜೆ ಇ ನಾಗೇಂದ್ರ ಸಮೂದಾಯ ಘಟಕಾಧಿಕಾರಿ ಪರಶಿವಮೂರ್ತಿ, ಕಂದಾಯ ಅಧಿಕಾರಿ ನಂಜುಂಡಸ್ವಾಮಿ, ರಾಘವೇಂದ್ರ, ಆರೋಗ್ಯ ನಿರೀಕ್ಷಕ ಚೇತನ್, ಲಕ್ಷ್ಮೀ ಮತ್ತುತರರು ಹಾಜರಿದ್ದರು.