ಭಾರತದ ಗೆಲುವಿಗೆ ಯುವ ಭಾರತ್ ಸಂಘಟನೆ ಸಂಭ್ರಮಾಚರಣೆ

Spread the love

ಮೈಸೂರು, ಮಾ.9: ಐಸಿಸಿ ಚಾಂಪಿಯನ್ ಟ್ರೋಪಿ 2025ರ ಫೈನಲ್ ನಲ್ಲಿ ನ್ಯೂಜಿಲೆಂಡ್ ವಿರುದ್ಧ ಇತಿಹಾಸ ದಾಖಲೆ ಮಾಡಿದ ಭಾರತ ಕ್ರಿಕೆಟ್ ತಂಡ ವಿಜಯ ಗಳಿಸಿದ ಹಿನ್ನೆಲೆಯಲ್ಲಿ ಯುವ ಭಾರತ್ ಸಂಘಟನೆ ಮೈಸೂರಿನಲ್ಲಿ ಸಂಭ್ರಮಾಚರಣೆ ಮಾಡಿದರು.

ಯುವ ಭಾರತ್ ಸಂಘಟನೆ
ವತಿಯಿಂದ ಮೈಸೂರಿನ ಅಗ್ರಹಾರದ ವೃತದಲ್ಲಿ ಭಾರತದ ಧ್ವಜ ಹಿಡಿದು ಭಾರತ ಮಾತೆಗೆ ಜೈಕಾರ ಕೂಗುತ್ತಾ ಸಂಭ್ರಮಿಸಿದರು.

ಈ ಸಂದರ್ಭದಲ್ಲಿ ಅಂತರಾಷ್ಟ್ರೀಯ ವಿಶೇಷ ಚೇತನ ಕ್ರೀಡಾಪಟು ಅಲೋಕ್ ಜೈನ್, ಜೋಗಿ ಮಂಜು, ವಿಕ್ರಂ ಅಯ್ಯಂಗಾರ್, ಅಜಯ್ ಶಾಸ್ತ್ರಿ, ಕೆ ಎಂ ನಿಶಾಂತ್, ಮಹಾನ್ ಶ್ರೇಯಸ್, ಸುಚೇಂದ್ರ, ಅಮಿತ್ ಕುಮಾರ್, ಚಕ್ರಪಾಣಿ, ಕರಣ್ ಜೈನ್ ಕೆ ಜೆ,ಸುಧೀಂದ್ರ, ನವೀನ್, ವಿಶ್ವನಾಥ್ ಸೇರಿದಂತೆ ಅನೇಕ ಕ್ರಿಕೆಟ್ ಪ್ರೇಮಿಗಳು ಹಾಜರಿದ್ದರು.