ರಸಪ್ರಶ್ನೆ ಸ್ಪರ್ಧೆ:ಪ್ರಥಮ ಬಹುಮಾನ ಪಡೆದ ಎ ಜಿ ಮಂಜುಳಾ ಸಿಂಹ, ಬಿ ಎಚ್‌ ಲೀಲಾವತಿ

Spread the love

ಮೈಸೂರು,ಮಾ.6: ಮೈಸೂರು ಓದುಗರ ಒಕ್ಕೂಟ ಮತ್ತು ವಾಣಿವಿಲಾಸ ಲೇಡೀಸ್‌ ಕ್ಲಬ್‌ ಸಂಯುಕ್ತಾಶ್ರಯದಲ್ಲಿ ಮಹಿಳೆಯರಿಗೆ ಏರ್ಪಡಿಸಿದ್ದ ರಸಪ್ರಶ್ನೆ ಸ್ಪರ್ಧೆಯಲ್ಲಿ ಮಹಿಳೆಯರು ಉತ್ಸಾಹದಿಂದ ಭಾಗವಹಿಸಿದರು.

೧೪ ವರ್ಷಗಳಿಂದ ಸತತವಾಗಿ ನಡೆದುಕೊಂಡು ಬರುತ್ತಿರುವ ಈ ರಸಪ್ರಶ್ನೆ ಸ್ಫರ್ಧೆಯಲ್ಲಿ ಈ ಬಾರಿ ೩೮ ತಂಡಗಳು ಭಾಗವಹಿಸಿದ್ದವು.

ನಂಜನಗೂಡು, ಪಿರಿಯಪಟ್ಟಣ, ಬೆಂಗಳೂರು, ಚಿಕ್ಕಮಗಳೂರಿನಿಂದ ಮಹಿಳೆಯರು ಬಂದು ಭಾಗವಹಿಸಿದ್ದು ಈ ಬಾರಿಯ ವಿಶೇಷ.

ರಸಪ್ರಶ್ನೆ ೪ ಸುತ್ತುಗಳಲ್ಲಿ ನಡೆಯಿತು. ಮೊದಲು ಲಿಖಿತ ಅರ್ಹತಾ ಸುತ್ತಿನೊಂದಿಗೆ ಪ್ರಾಂಭವಾಗಿ ೩ ಸುತ್ತುಗಳ ಮೌಖಿಕ ಸುತ್ತುಗಳಲ್ಲಿ ಸ್ಫರ್ಧೆ ನಡೆಯಿತು.

ಅಂತಿಮ ಸುತ್ತಿನಲ್ಲಿ ೬ ತಂಡಗಳ ನಡುವೆ ಹಣಾಹಣಿ ನಡೆಯಿತು. ಮೊದಲನೆಯ ಬಹುಮಾನ ಎ ಜಿ ಮಂಜುಳಾ ಸಿಂಹ ಮತ್ತು ಬಿ ಎಚ್‌ ಲೀಲಾವತಿ ಪಡೆದರೆ, ದ್ವಿತೀಯ ಬಹುಮಾನ ನಾಗರತ್ನ ಬಿ ಆರ್‌ ಮತ್ತು ಗಿರಿಜಾ ಸಿದ್ಧಪ್ಪಾಜಿ ಅವರ ತಂಡಕ್ಕೆ ಲಭಿಸಿತು.ಮೂರನೆಯ ಬಹುಮಾನ ಇಂದ್ರಾಣಿ ಮತ್ತು ಸುಚಿತ್ರಾ ಹೆಗಡೆ ಅವರ ತಂಡಕ್ಕೆ ದಕ್ಕಿತು.

ಸಮಾಧಾನಕರ ಬಹುಮಾನಗಳು
ಭಾರ್ಗವಿ ಮತ್ತು ಮನಸ್ವಿನಿ, ಗೀತಾ ಶ್ರೀಹರಿ ವಿಜಯಲಕ್ಷ್ಮಿ ಸಿ ಆರ್‌, ನಾಗರತ್ನ ಗೋಪಿನಾಥ್‌ ಮತ್ತು ನಿವೇದಿತಾ ವೇಣುಗೋಪಾಲ್.

ಪ್ರಸನ್ನ ಕುಮಾರಿ, ತುಳಸೀ ವಿಜಯ ಕುಮಾರಿ, ಕಲ್ಪನಾ ಚಂದ್ರಶೇಖರ್‌ ಮತ್ತು ನಿವೇದಿತಾ ಎಚ್‌ ಅವರು ರಸಪ್ರಶ್ನಾಕಾರರಾಗಿ ನಾಲ್ಕು ಸುತ್ತುಗಳನ್ನು ನಡೆಸಿಕೊಟ್ಟರು.

ಡಾ.ಪಾಮೆಲಾ ಸನತ್‌ ನಿಕ್ಕಂ ಮತ್ತು ಉದ್ಯಮಿ ಪಲ್ಲವಿ ಅರುಣ್‌ ಅವರು ತೀರ್ಪುಗಾರರಾಗಿದ್ದರು.

ಮೈಸೂರು ಬುಕ್ ಕ್ಲಬ್ಸ್-2015ರ ಸಂಸ್ಥಾಪಕಿ ಹಾಗು ಉದ್ಯಮಿ ಶುಭಾ ಸಂಜಯ್‌ ಅರಸ್‌ ಅವರು ರಸ ಪ್ರಶ್ನೆ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ವಿವಿಎಲ್ ಸಿ ಕಾರ್ಯಕಾರಿ ಸಮಿತಿಯ ಪ್ರೇಮಾ ಡಿ ಸಿಲ್ವಾ,ಖಜಾಂಚಿ ವಿನಯ ಪ್ರಭಾವತಿ, ವಾಣಿವಿಲಾಸ ಲೇಡೀಸ್‌ ಕ್ಲಬ್‌ ನ ಶರ್ಲಿ ಮುದ್ದಪ್ಪ, ವಸಂತಮ್ಮ, ಮಾಲಿನಿ, ಶೈಲಾ ಶಂಕರ್ ವಿಜೇತರಿಗೆ ಬಹುಮಾನ ವಿತರಿಸಿದರು.