ಮೈಸೂರು: ಸಾಮಾನ್ಯವಾಗಿ ಅಭಿಮಾನಿಗಳು ಸಿನಿಮಾ ನಟರ ಹಚ್ಚೆಯನ್ನು ಕೈ ಮೇಲೆ ಹಾಕಿಸಿಕೊಳ್ಳುವುದನ್ನು ನೋಡಿದ್ದೇವೆ,ಆದರೆ ಸ್ವಾಮೀಜಿಯವರ ಭಾವಚಿತ್ರ ಹಾಕಿಸಿಕೊಳ್ಳುವ ಮೂಲಕ ಯುವಕನೊಬ್ಬ ಅಭಿಮಾನ ಮೆರೆದಿದ್ದಾರೆ.
ಸುತ್ತೂರು ಜಗದ್ಗುರು ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿಯವರ ಭಾವಚಿತ್ರವನ್ನು ಯುವಕ ಹಾಕಿಸಿ ಕೊಂಡಿದ್ದಾರೆ.
ಶ್ರೀಗಳ ಜನ್ಮದಿನದ ಹಿನ್ನೆಲೆಯಲ್ಲಿ ಶ್ರೀಗಳ ಭಾವಚಿತ್ರದ ಹಚ್ಚೆಯನ್ನು ಮೈಸೂರಿನ ಮಹೇಂದ್ರ ಎಂಬವರು ತಮ್ಮ ಎದೆ ಮೇಲೆ ಹಾಕಿಸಿಕೊಳ್ಳುವ ಮೂಲಕ ಶ್ರೀಗಳ ಮೇಲಿನ ತಮ್ಮ ಅಭಿಮಾನ ತೋರಿದ್ದಾರೆ.