ರವಿ ಸಂತು ಬಳಗದಿಂದಬಂಡಿಪುರ ಅರಣ್ಯದ 5000 ಮರಗಳಿಗೆ ಗೊಬ್ಬರ, ಬೀಜ ನೆಟ್ಟು ಸಂಭ್ರಮ

Spread the love

ಮೈಸೂರು: ಮೈಸೂರಿನ ರವಿ ಸಂತು ಬಳಗದ ವತಿಯಿಂದ 50 ಸರ್ಕಾರಿ ಶಾಲೆಗಳ ಸೇವೆ ಸಲ್ಲಿಸಿದ ಸಂಭ್ರಮವನ್ನು ವಿಶೇಷವಾಗಿ ಆಚರಿಸಲಾಯಿತು.

ಈ ಸಂಭ್ರಮವನ್ನು ರವಿ ಸಂತು ಅವರ ಮಾತೃಶ್ರೀ ಮೀನಾಕ್ಷಿ ಅಮ್ಮನವರ ಸ್ಮರಣಾರ್ಥ ಹಾಗೂ ದಿವಂಗತ ಡಾ. ವಿಷ್ಣುವರ್ಧನ್ ಅವರ ಹೆಸರಿನಲ್ಲಿ ಪ್ರಕೃತಿ ಮಾತೆಗೆ ಕೃತಜ್ಞತೆ ಸಲ್ಲಿಸುವ ಮೂಲಕ ಆಚರಿಸಲಾಯಿತು.

ಬಂಡಿಪುರದ ಅರಣ್ಯ ಪ್ರದೇಶಕ್ಕೆ ಫಲ ಕೊಡುವ ಮತ್ತು ಹಸಿರು ಉಳಿಸುವ ನಿಟ್ಟಿನಲ್ಲಿ 5000 ಮರಗಳಿಗೆ ಗೊಬ್ಬರ, ಬೀಜ ನೆಡುವ ಕಾರ್ಯಕ್ರಮವನ್ನು ಹರ್ಷ ರಸ್ತೆಯಲ್ಲಿರುವ ಖಾಸಗಿ ಹೋಟೆಲ್ ನಲ್ಲಿ ಹಮ್ಮಿಕೊಳ್ಳಲಾಯಿತು.

ಈ ವೇಳೆ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಹಲವು ಮಹನೀಯರಿಗೆ ದಿಗ್ಗಜರ ಹೆಸರಿನಲ್ಲಿ ಪ್ರಶಸ್ತಿ ಪ್ರದಾನ ಹಾಗೂ ಸಂಗೀತ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಈ ವಿಶೇಷ ಕಾರ್ಯಕ್ರಮವನ್ನು ದೀಪ ಬೆಳಗಿಸಿ,ಗೊಬ್ಬರದ ಬೀಜ ನೆಡುವ ಮೂಲಕ ಕನ್ನಡ ಚಲನಚಿತ್ರ ಹಿರಿಯ ನಟಿ ಭವ್ಯ ಅವರು ಉದ್ಘಾಟಿಸಿ,ರವಿ ಸಂತು ಬಳಗದ ನಿಸ್ವಾರ್ಥ ಸೇವೆಯನ್ನು ಶ್ಲಾಘಿಸಿದರು.

ಈ ವೇಳೆ ಮಾತನಾಡಿದ ಬಳಗದ ಮುಖ್ಯಸ್ಥರಾದ ರವಿ ಸಂತು ಅವರು, ಪ್ರಕೃತಿ ಮಾತೆಗೆ ಕೃತಜ್ಞತೆ ಸಲ್ಲಿಸುವ ಸಲುವಾಗಿ ನಮ್ಮ ತಾಯಿಯವರಾದ ಮಾತೃಶ್ರೀ ಮೀನಾಕ್ಷಿ‌ ಅಮ್ಮನವರ ಸ್ಮರಣಾರ್ಥ ಹಾಗೂ ದಿವಂಗತ ಡಾ. ವಿಷ್ಣುವರ್ಧನ್ ಅವರ ಹೆಸರಿನಲ್ಲಿ ಆಚರಿಸುತ್ತಿರುವುದು ನನಗೆ ಸಂತೋಷ ತಂದಿದೆ ಮುಂದಿನ ಪೀಳಿಗೆಗಾಗಿ ಹಸಿರು ಉಳಿಸಬೇಕು, ಮರಗಿಡ ಬೆಳೆಸಬೇಕು ಎಂಬುದೇ ನಮ್ಮ ದೆಯೋದ್ದೇಶ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಸಮಾಜ ಸೇವಕರಾದ ರಘುರಾಮ್ ವಾಜಪೇಯಿ, ನಗರಪಾಲಿಕೆ ಮಾಜಿ ಸದಸ್ಯರಾದ ಎಂ ಡಿ ಪಾರ್ಥಸಾರಥಿ, ಪತ್ರಕರ್ತ ಅನಿಲ್ ಕುಮಾರ್, ಬಳಗದ ಮುಖ್ಯಸ್ಥರಾದ ಡಾ. ವಿಜಯ ಗುಜ್ಜಾರ್ ದುಬೈ, ರಾಮದಾಸ್, ಉಮ್ಮತ್ತೂರು ಚಂದ್ರು, ಸುರೇಶ ಗೌಡ, ಶ್ರೀಕಂಠ, ಹಂಸಲೇಖ ರವಿ, ಕಿರಣ್, ಸಿಂಚನ. ಭವ್ಯ. ಶ್ವೇತಾ ನಾಗಶ್ರೀಸುಚಿಂದ್ರ,ಲೋಕೇಶ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.