ಬೀದಿ ಪಾಲಾಗಿದ್ದ ಸಾಧುವಿನ ನೆರವು ನೀಡಿ ಮಾದರಿಯಾದ ಎಸ್ ಡಿ ಪಿ ಐ

Spread the love

ಮೈಸೂರು: ಬಾಡಿಗೆ ಕೊಟ್ಟಿಲ್ಲ ಎಂಬ ಕಾರಣಕ್ಕೆ ಸಂತರೊಬ್ಬರನ್ನು ಬೀದಿ ಪಾಲಾಗುವಂತೆ ಮಾಡಿರುವ ಅಮಾನವೀಯ ಪ್ರಸಂಗ ಮೈಸೂರಿನಲ್ಲಿ ನಡೆದಿದ್ದು,ಅವರ ನೆರವಿಗೆ ಎಸ್ ಡಿ ಪಿ ಐ ಧಾವಿಸಿದೆ.

ವಿಷಯ ತಿಳಿದ ಎಸ್ ಡಿ ಪಿಐ ಮುಖಂಡರು ಧಾವಿಸಿ ಆ ಸಂತರಿಗೆ ಆಶ್ರಯ ನೀಡಿ ಮಾನವೀಯತೆ ಪ್ರದರ್ಶಿಸಿ ಇತರರಿಗೆ ಮಾದರಿಯಾಗಿದ್ದಾರೆ.

ಎಸ್ ಡಿ ಪಿ ಐ ಸಂಘಟನೆಯ ಮುಖಂಡರಾದ ಅಮೀನ್ ಸೇಠ್ ಹಾಗೂ ಜಭಿ ಅವರು ಸಾಧುಸಂತನ ಪರಿಸ್ಥಿತಿಗೆ ಮರುಗಿ ನೆರವಿಗೆ ಧಾವಿಸಿದರು.

ಬೀದಿಬದಿ ಬಿದ್ದಿದ್ದ ವೃದ್ದ ಸಾಧುಸಂತನಿಗೆ ಮತ್ತೆ ಮನೆ ಮಾಲೀಕರ ಮನ ಒಲಿಸಿ ಆಶ್ರಯ ಕಲ್ಪಿಸಿಕೊಟ್ಟಿದ್ದಾರೆ.

ಮೈಸೂರಿನ ನೆಹರು ನಗರದಲ್ಲಿ ವಾಸು ಎಂಬ ವೃದ್ದ ಸಾಧು ಮಳೆ,ಚಳಿಯಲ್ಲಿ ನಡುಗುತ್ತಾ‌ ಬೀದಿಯಲ್ಲಿ ಮಲಗಿದ್ದರು.

ಶ್ರೀನಿವಾಸ್ ಎಂಬುವರ ಮನೆಯಲ್ಲಿ ವಾಸು ಅವರು ಬಾಡಿಗೆಗೆ ಇದ್ದರು.
ದೇವಾಲಯಗಳಲ್ಲಿ ಪೂಜೆ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಸವರು 6 ತಿಂಗಳ ಹಿಂದೆ ಪಾರ್ಶ್ವವಾಯು ಪೀಡಿತರಾದರು.

ಹಾಗಾಗಿ ಓಡಾಡಲು ಶಕ್ತಿ ಇಲ್ಲದೆ ಎಲ್ಲೂ ಹೋಗದ ಕಾರಣ ವರಮಾನ ಸ್ಥಗಿತವಾಗಿತ್ತು,ಆದ್ದರಿಂದ ಬಾಡಿಗೆ ನೀಡಲಾಗಿರಲಿಲ್ಲ.

ಇದರಿಂದಾಗಿ ಮನೆ ಮಾಲೀಕರು ವಾಸು ಅವರನ್ನ ಮನೆಯಿಂದ ಹೊರಹಾಕಿದ್ದರು, ವಾಸು ಬೀದಿಯಲ್ಲಿ ಅನಾಥವಾಗಿ ಹೀನಾಯ ಸ್ಥಿತಿಯಲ್ಲಿ ಕುಳಿತಿದ್ದರು.

ಈ ಮಾಹಿತಿ ಅರಿತ ಎಸ್ ಡಿ ಪಿ ಐ ಸಂಘಟನೆಯ ಮುಖಂಡರು ವಾಸು ಅವರ ನೆರವಿಗೆ ಧಾವಿಸಿದರು.ಅವರಿಂದ ಮಾಹಿತಿ ಪಡೆದು ನಂತರ ಮನೆ ಮಾಲೀಕ ಶ್ರೀನಿವಾಸ್ ರವರ ಮನ ಒಲಿಸಿ ಮತ್ತೆ ಮನೆಗೆ ಸೇರಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸಧ್ಯದಲ್ಲೇ ವಾಸು ಅವರನ್ನ ವೃದ್ದಾಶ್ರಮಕ್ಕೆ ಸೇರಿಸಲು ನಿರ್ಧರಿಸಿದ್ದಾರೆ,ಎಸ್ ಡಿ ಪಿ ಐ ಮುಖಂಡರು ಈ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ,ಮನುಷ್ಯರಾದ ನಾವೆಲ್ಲಾ ಒಂದೇ ಎಂಬ ಸಂದೇಶವನ್ನ ಮುಖಂಡರು ಎಲ್ಲರಿಗೂ ನೀಡಿದ್ದಾರೆ.