ಫೆ.7ರಂದು ಭಗೀರಥ ಚಿತ್ರದ ಸ್ಟಾರ್ ಮೆರವಣಿಗೆ

Spread the love

ಮೈಸೂರು: ಡೇರಿಂಗ್ ಸ್ಟಾರ್ ಎಸ್ ಜಯಪ್ರಕಾಶ್ ( ಜೆ ಪಿ ) ನಟಿಸಿರುವ ಭಗೀರಥ ಚಲನಚಿತ್ರವು ರಾಜ್ಯಾದ್ಯಂತ ಬಿಡುಗಡೆ ಆಗುತ್ತಿರುವ ಪ್ರಯುಕ್ತ ಫೆ.7 ಶುಕ್ರವಾರ ಸ್ಟಾರ್ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ.

ಅಂದು ಬೆಳಗ್ಗೆ 10 ಗಂಟೆಗೆ ಶ್ರೀ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದಿಂದ, ಪ್ರಭಾ ಚಿತ್ರಮಂದಿರದ ವರೆಗೆ ಸ್ಟಾರ್ ಮೆರವಣಿಗೆಯನ್ನು ಏರ್ಪಡಿಸಿದ್ದೇವೆ,ಈ ಮೆರವಣಿಗೆಯಲ್ಲಿ ಜೆಪಿ ಅವರ ಅಭಿಮಾನಿಗಳು, ಸ್ನೇಹಿತರು ಬಂಧು ಮಿತ್ರರು ಪಾಲ್ಗೊಳ್ಳಬೇಕೆಂದು ಸುದ್ದಿಗೋಷ್ಠಿಯಲ್ಲಿ
ಕಾವೇರಿ ಕ್ರಿಯಾ ಸಮಿತಿಯ ತೇಜೇಶ್ ಲೋಕೇಶ್ ಗೌಡ ಮನವಿ ಮಾಡಿದರು.

ಈ ಭಗೀರಥ ಚಿತ್ರ ಪ್ರತಿಯೊಬ್ಬ ಮನುಷ್ಯನಲ್ಲಿ ಇರುವಂತಹ ಸಾಹಸಕತೆ, ಅಸಾಧ್ಯವಾದುದನ್ನು ಸಾಧ್ಯವಾಗಿಸುವ ಚಿತ್ರದ ಕಥೆ ಇದೆ ಎಂದು ಹೇಳಿದರು.

ಯುವಕರಿಗೆ ಕನ್ನಡದ ಕಣ್ಮಣಿ, ಕನ್ನಡಿಗರ ಆರಾಧ್ಯ ದೈವ ಡಾ. ರಾಜಕುಮಾರ್ ಅವರ ಸಿನಿಮಾಗಳಲ್ಲಿ ಹೇಗೆ ಸಾಮಾಜಿಕ ಸಂದೇಶಗಳು ಇರುತ್ತಿದ್ದವೋ, ಅದೇ ಮಾದರಿಯಲ್ಲಿ ಈ ಸಿನಿಮಾದಲ್ಲಿಯೂ ಜೀವನದಲ್ಲಿ ಸಾಧಿಸಬೇಕಾದನ್ನು ಗುರಿಯಾಗಿಟ್ಟುಕೊಂಡು ಸಾಧಿಸಬೇಕು ಎಂಬ ಸಂದೇಶವಿದೆ. ಆದುದರಿಂದ ಪ್ರತಿಯೊಬ್ಬ ಕನ್ನಡಿಗರು, ವಿಧ್ಯಾರ್ಥಿ ದೆಸೆಯಿಂದ ಹೋರಾಟಗಳನ್ನು ಮಾಡಿಕೊಂಡು ಬಂದಿರುವ ಹಿರಿಯ ಹೋರಾಟಗಾರರಾದ ಹಾಗೂ ಕಾವೇರಿ ಕ್ರಿಯಾ ಸಮಿತಿಯ ಅಧ್ಯಕ್ಷರಾದ ಎಸ್ ಜಯ ಪ್ರಕಾಶ್ ಅವರ ಈ ಭಗೀರಥ ಚಿತ್ರವನ್ನು ನೋಡಬೇಕು, ಕನ್ನಡ ಸಿನಿಮಾಗಳನ್ನು ನೋಡಿ ಕನ್ನಡ ಕಲಾವಿದರುಗಳನ್ನು ಬೆಳೆಸಬೇಕು ಎಂದು ಕೋರಿದರು.

ಸುದ್ದಿಗೋಷ್ಠಿಯಲ್ಲಿ ಸಿಂದುವಳ್ಳಿ ಶಿವಕುಮಾರ್, ಭಾಗ್ಯಮ್ಮ , ನಾಗರಾಜ್, ಬೋಗಾದಿ ಸಿದ್ದೇಗೌಡ ,ಲತಾ ಶಂಕರಿ, ಸುಧಾಮಣಿ, ಪುಷ್ಪಾವತಿ, ವಿನೋದ್ ಕುಮಾರ್, ಮಂಜುಳಾ , ಕೃಷ್ಣಪ್ಪ , ರವೀಶ್, ಮಹೇಶ್ ಒಂಟಿಕೊಪಲು, ಅಶೋಕ್ ಹನುಮಂತಯ್ಯ , ಪೈ ನಾಗರಾಜು, ಆಟೋ ಶಿವು ಭಗೀರಥ, ವಿಷ್ಣು ಮತ್ತಿತರರು ಉಪಸ್ಥಿತರಿದ್ದರು. ‌