ಬೆಂಗಳೂರು: ಬೆಂಗಳೂರಿನಲ್ಲಿ ಹಮ್ಮಿಕೊಂಡಿದ್ದ 16ನೇ ಬುಡಕಟ್ಟು ಯುವ ವಿನಿಮಯ ಕಾರ್ಯಕ್ರಮದಲ್ಲಿ ಸುಮಾರು 15 ರಾಜ್ಯದ ತಂಡಗಳು ಭಾಗವಹಿಸಿದ್ದವು.
ಭಾರತ ಸರ್ಕಾರದ ಗೃಹ ಮಂತ್ರಾಲಯ ಹಾಗೂ ಯುವ ಹಾಗೂ ಕ್ರೀಡಾ ಮಂತ್ರಾಲಯ, ನೆಹರು ಯುವ ಕೇಂದ್ರ ಸಹಯೋಗದಲ್ಲಿ ಬೆಂಗಳೂರಿನ ಪದ್ಮನಾಭನಗರದ ಫ್ರಿಜಿನಲ್ ಇನ್ಸ್ಟಿಟ್ಯೂಟ್ ಆಫ್ ಕೋ ಆಪರೇಟಿವ್ ಮೂವ್ಮೆಂಟ್ ಸಭಾಂಗಣದಲ್ಲಿ ಈ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಭಾನುವಾರ ಅದರ ಸಮಾರೋಪ ಸಮಾರಂಭ ಯಶಸ್ವಿಯಾಗಿ ನೆರವೇರಿತು.
ಈ ವೇಳೆ ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟದ ರಾಜ್ಯಾಧ್ಯಕ್ಷ ಹಾಗೂ ಭಾರತ ಸರ್ಕಾರದ ಐಸಿಸಿಆರ್ ಸದಸ್ಯ ಡಾ ಜಾನಪದ ಎಸ್ ಬಾಲಾಜಿ ಅವರನ್ನು ಭಾರತ ಸರ್ಕಾರದ ನೆಹರು ಯುವ ಕೇಂದ್ರ ಕರ್ನಾಟಕ ನಿರ್ದೇಶಕ ಅಶೋಕ್ ಕುಮಾರ್ ಅಭಿನಂದಿಸಿ ಗೌರವಿಸಿದರು.

ಭಾರತ ಸರ್ಕಾರದ ಎನ್ಎಸ್ಎಸ್ ಪ್ರಾಂತೀಯ ಕಚೇರಿಯ ಪ್ರಾಂತ್ಯ ನಿರ್ದೇಶಕ ಕಾರ್ತಿಕೇಯನ್, ಬೆಂಗಳೂರು ನಗರ ಜಿಲ್ಲೆಯ ಅಧಿಕಾರಿ ನಾಗಲಕ್ಷ್ಮಿ, ರಾಜೇಶ್ ಹಾಗೂ ಇತರ ರಾಜ್ಯದ ಎಸ್ಕಾರ್ಟ್ ಹಾಗೂ 250 ಕಿಂತ ಹೆಚ್ಚು ಬುಡಕಟ್ಟು ಕಾರ್ಯಕ್ರಮದ ಶಿಬಿರಾರ್ಥಿಗಳು ಹಾಜರಿದ್ದರು.