(ವರದಿ:ಸಿದ್ದರಾಜು,ಕೊಳ್ಳೇಗಾಲ)
ಕೊಳ್ಳೇಗಾಲ: ಪಟ್ಟಣದ ಕಸಬಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಯ 12 ನಿರ್ದೇಶಕ ಸ್ಥಾನಗಳ ಪೈಕಿ 10 ಸ್ಥಾನಗಳಿಗೆ ಸೋಮವಾರ ಚುನಾವಣೆ ಯಶಸ್ವಿಯಾಗಿ ನಡೆದು 10 ಆಯ್ಕೆ ಯಾಗಿದ್ದಾರೆ.

ಸಾಲಗಾರರ ಕ್ಷೇತ್ರದಿಂದ ಸಾಮಾನ್ಯ ಸ್ಥಾನಕ್ಕೆ ಸ್ಪರ್ಧಿಸಿದ್ದ 33 ಅಭ್ಯರ್ಥಿಗಳ ಪೈಕಿ ಕೆಂಪನ ಪಾಳ್ಯದ ಮಹಾದೇವಸ್ವಾಮಿ ಪಿ.ಉರುಫ್ ಸುರೇಶ್, ಎಸ್. ರವಿಕುಮಾರ್, ಮುಳ್ಳೂರಿನ ಎಂ. ಶೇಖರ್, ಎಂ ಪಿ ಇಂದ್ರ, ಎಂ.ಕೆ. ಪುಟ್ಟಸ್ವಾಮಿ, ಬಿಸಿಎಂ(ಎ) ಸ್ಥಾನಕ್ಕೆ ಮದುವನ ಹಳ್ಳಿಯ ಎಸ್.ರಮೇಶ್ ಬಿ ಸಿ ಎಂ (ಬಿ) ಸ್ಥಾನಕ್ಕೆ ಪಟ್ಟಣದ ಸಿ.ಬಸವರಾಜು, ಪ. ಜಾತಿಯ ಸ್ಥಾನಕ್ಕೆ ಮುಳ್ಳೂರಿನ ಬಿ.ಮಂಜುನಾಥ್, ಪ.ಪಂಗಡದ ಸ್ಥಾನಕ್ಕೆ ಹೊಸ ಹಂಪಾಪುರದ ಲೋಕೇಶ್ ಆಯ್ಕೆಯಾಗಿದ್ದಾರೆ.
ಅಲ್ಲದೆ ಈಗಾಗಲೇ ಮಹಿಳೆಯರಿಗೆ ಮೀಸಲಿದ್ದ ಎರಡು ಸ್ಥಾನಗಳಿಗೆ ಎಂ ಎಸ್ ಅನ್ನಪೂರ್ಣ ಹಾಗೂ ಶೀಲಾ ಎಂ ಅವರು ಅವಿರೋಧವಾಗಿ ಆಯ್ಕೆಯಾಗಿದ್ದರು.
ಹಾಗೆಯೇ ಸಾಲಗಾರರಲ್ಲದ ಕ್ಷೇತ್ರಕ್ಕೆ ಮೀಸಲಾಗಿದ್ದ ಏಕೈಕ ಸ್ಥಾನಕ್ಕೆ ಪಟ್ಟಣದ ಭೀಮ ನಗರದ ಎಸ್.ರಾಜಶೇಖರ್ ಅವರು ಆಯ್ಕೆಯಾಗಿರುವುದಾಗಿ ಚಾಮರಾಜನಗರ ಜಿಲ್ಲಾ ಸಹಕಾರ ಸಂಘಗಳ ಸಹಾಯಕ ನಿರ್ದೇಶಕರ ಕಚೇರಿಯ ಅಧೀಕ್ಷಕರು ಹಾಗೂ ಚುನಾವಣಾ ಅಧಿಕಾರಿಗಳು ಆಗಿರುವ ಎಸ್. ನಾಗೇಶ್ ವಿಜೇತ ಅಭ್ಯರ್ಥಿಗಳ ಫಲಿತಾಂಶ ಘೋಷಿಸಿದರು.

ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ ನಿಯಮ ಹಾಗೂ ಸಂಘದ ಬೈಲದ ಪ್ರಕಾರ ಆಡಳಿತ ಮಂಡಳಿಯು13 ನಿರ್ದೇಶಕರ ಸ್ಥಾನಗಳನ್ನು ಹೊಂದಿರಬೇಕು, ಈ ಪೈಕಿ ಚುನಾಯಿಸಬೇಕಾದ ಸ್ಥಾನಗಳು ಒಟ್ಟು 12, ಸಾಲಗಾರರ ಕ್ಷೇತ್ರದಿಂದ 11 ಸ್ಥಾನಗಳು ಹಾಗೂ ಸಾಲಗಾರರಲ್ಲದ ಕ್ಷೇತ್ರದಿಂದ ಒಂದು ಸ್ಥಾನ.
ಈಗಾಗಲೇ ಸಾಲಗಾರರ ಕ್ಷೇತ್ರದ 2 ಮಹಿಳಾ ಸ್ಥಾನಗಳಿಗೆ ಅವಿರೋಧ ಆಯ್ಕೆಯಾಗಿತ್ತು. ಹಾಗಾಗಿ ಸಾಲಗಾರರ ಕ್ಷೇತ್ರದ 9 ನಿರ್ದೇಶಕರುಗಳ ಸ್ಥಾನಗಳಿಗೆ ಹಾಗೂ ಸಾಲಗಾರರಲ್ಲದ ಕ್ಷೇತ್ರದ ಒಂದು ನಿರ್ದೇಶಕ ಸ್ಥಾನ ಒಟ್ಟು 10 ಸ್ಥಾನಗಳಿಗೆ ನಿನ್ನೆ ಚುನಾವಣೆ ನಡೆಯಿತು.

ಸಾಲಗಾರರ ಕ್ಷೇತ್ರದಲ್ಲಿ ಒಟ್ಟು ಒಟ್ಟು 1605 ಮತದಾರರಿದ್ದಾರೆ, 1235 ಮತ ಚಲಾಯಿಸಿದ್ದು 98 ಮತಗಳು ತಿರಸ್ಕೃತಗೊಂಡಿದೆ.

ಈ ಕ್ಷೇತ್ರದ 5 ಸಾಮಾನ್ಯ ಸ್ಥಾನಗಳಿಗೆ ಸ್ಪರ್ಧಿಸಿದ್ದ 12 ಅಭ್ಯರ್ಥಿಗಳ ಪೈಕಿ ಏ ಇಬ್ರಾಹಿಂ ಬೇಗ್ 138, ಎಂ ಪಿ ಇಂದ್ರ,453, ಪಿ.ಜಗದೀಶ್ 97, ಎಂ.ಕೆ.ಪುಟ್ಟಸ್ವಾಮಿ 399, ಎಂ. ಈ.ಬಸವರಾಜು 174, ಬೋಳೇಗೌಡ 386,ಎನ್. ಮಹಾದೇವಸ್ವಾಮಿ 381, ಮಹಾದೇವಸ್ವಾಮಿ ಪಿ.ಉರುಫ್ ಸುರೇಶ್ 583, ಮಹೇಶ್ 361, ಎಸ್. ರವಿಕುಮಾರ್ 458, ಎಂ. ಶೇಖರ್ 469, ಸಿದ್ದಪ್ಪಸ್ವಾಮಿ 367 ಮತಗಳನ್ನು ಪಡೆದುಕೊಂಡಿದ್ದಾರೆ.
ಬಿಸಿಎಂ(ಎ) 1 ಸ್ಥಾನಕ್ಕೆ ಸ್ಪರ್ಧಿಸಿದ್ದ ಇಬ್ಬರು ಅಭ್ಯರ್ಥಿಗಳಾದ ಸಿ.ಬಸವರಾಜು 534 ಮಹೇಶ್ ಕೆ.ಎಸ್. 407 ಮತಗಳನ್ನು, ಬಿಸಿಎಂ(ಬಿ) 1 ಸ್ಥಾನಕ್ಕೆ ಸ್ಪರ್ಧಿಸಿದ್ದ ನಾಲ್ವರು ಅಭ್ಯರ್ಥಿಗಳಾದ. ಎಸ್. ಆಲ್ ಬರ್ಟ್ ಮನೋಹರ್ 122, ಮಹೇಶ್ ಎಂ 387, ಮಾದೇಶ್ 143, ಎಸ್.ರಮೇಶ್ 463 ಮತಗಳನ್ನು ಪಡೆದುಕೊಂಡಿದ್ದಾರೆ.
ಪ. ಜಾತಿಯ 1 ಸ್ಥಾನಕ್ಕೆ ಸ್ಪರ್ಧಿಸಿದ್ದ 6 ಅಭ್ಯರ್ಥಿಗಳ ಪೈಕಿ ಪಿ ಕೃಷ್ಣರಾಜು 91, ಬಸವರಾಜು ಎಂ. 320, ಬಿ.ಮಂಜುನಾಥ್ 422, ಎಂ ಶಿವಮೂರ್ತಿ 88, ಬಿ. ಶಿವರಾಜು 55, ಪಿ. ಸೋಮಶೇಖರ್ 258
ಮತಗಳನ್ನು, ಪ.ಪಂಗಡದ 1 ಸ್ಥಾನಕ್ಕೆ ಸ್ಪರ್ಧಿಸಿದ್ದ ಇಬ್ಬರು ಅಭ್ಯರ್ಥಿಗಳಾದ ಎಂ.ಮಹೇಶ್ 359 ಹಾಗೂ ಲೋಕೇಶ್ 395 ಮತಗಳನ್ನು ಪಡೆದುಕೊಂಡಿದ್ದಾರೆ.
ಸಾಲಗಾರರಲ್ಲದ ಕ್ಷೇತ್ರಕ್ಕೆ ಎಸ್.ರಾಜಶೇಖರ್ ಆಯ್ಕೆ :
ಹಾಗೆಯೇ ಸಾಲಗಾರರಲ್ಲದ ಕ್ಷೇತ್ರದಲ್ಲಿ 392 ಮತದಾರರಿದ್ದು ಈ ಕ್ಷೇತ್ರಕ್ಕೆ ಮೀಸಲಾಗಿದ್ದ ಏಕೈಕ ಸ್ಥಾನಕ್ಕೆ 7 ಅಭ್ಯರ್ಥಿಗಳು ಸ್ಪರ್ಧಿಸಿದ್ದರು.
ಅವರಲ್ಲಿ ನಟರಾಜು 61, ಎಸ್ ಸೋಮಶೇಖರ್ 55, ಬಸವರಾಜಪ್ಪ 47, ಸಿಬ್ಗತ್ ಉಲ್ಲಾ 18, ಸೈಯದ್ ಎಜಾಜ್ 05, ಕಾಂತರಾಜ್ 02 ಮತಗಳನ್ನು ಪಡೆದುಕೊಂಡರೆ ಪಟ್ಟಣದ ಭೀಮನಗರದ ಎಸ್.ರಾಜಶೇಖರ್ ರವರು 81 ಮತಗಳನ್ನು ಪಡೆದು ಆಯ್ಕೆಯಾಗಿದ್ದಾರೆ.

ನಂತರ ರಾಜಶೇಖರ್ ಅವರು ತಮ್ಮ ಬೆಂಬಲಿಗರೊಡನೆ ಅಂಬೇಡ್ಕರ್ ಪ್ರತಿಮೆ ಬಳಿಗೆ ತೆರಳಿ ಮಾಲಾರ್ಪಣೆ ಮಾಡಿ ಸಿಹಿ ಹಂಚಿ ಸಂಭ್ರಮಿಸಿದರು.

10 ನಿರ್ದೇಶಕರುಗಳ ಸ್ಥಾನಗಳಿಗೆ ನಿನ್ನೆ ಸೋಮವಾರ ಬೆಳಿಗ್ಗೆ 9 ರಿಂದ ಮಧ್ಯಾಹ್ನ 3 ರ ವರೆಗೆ ಪಟ್ಟಣದ ನ್ಯಾಷನಲ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಚುನಾವಣೆ ನಡೆಯಿತು.

ನಂತರ ಮತ ಎಣಿಕೆ ನಡೆದು ರಾತ್ರಿ 9 ಗಂಟೆಯಲ್ಲಿ ಚುನಾವಣಾಧಿಕಾರಿ ಎಸ್. ನಾಗೇಶ್ ಅವರು ವಿಜೇತ ಅಭ್ಯರ್ಥಿಗಳ ಫಲಿತಾಂಶ ಘೋಷಿಸಿದರು. ಬಳಿಕ ಎಲ್ಲಾ ನಿರ್ದೇಶಕರು ತಮ್ಮ ಬೆಂಬಲಿಗರು ಹಿತೈಷಿಗಳು ಹಾಗೂ ಸಂಬಂಧಿಕರೊಡನೆ ಸಿಹಿ ಹಂಚಿ ಸಂಭ್ರಮಿಸಿದರು