(ಲೇಖನ: ಫಣೀಂದ್ರ, bellur mission karnataka regiment)
ಮೈಸೂರು, ನವೆಂಬರ್. ೧: ಈ ಬಾರಿ ಕನ್ನಡ ರಾಜ್ಯೋತ್ಸವ ಆಚರಿಸುವಾಗ ಭಾರತ ಸೇನೆಯಲ್ಲಿ ಕರ್ನಾಟಕ ರೆಜಿಮೆಂಟ್ ಇಲ್ಲದೇ ಇರುವ ವಿಷಯವನ್ನು ಚರ್ಚೆ ಮಾಡಬೇಕಿದೆ.
ಕರ್ನಾಟಕ ವೀರ ಭೂಮಿ,ಮದ್ದು ತಯಾರಿ ಮಾಡುವ ಮದ್ದೂರು , ಭಾರತದ ಅತಿ ಹೆಚ್ಚು ಕೋಟೆಗಳು , ಯುದ್ಧ ಕೌಶಲ್ಯ ಇರುವ ಜನಜಾಗೃತಿ,ಆನೆಯನ್ನು ಖೆಡ್ಡಾ ಮೂಲಕ ಪಳಗಿಸುತಿದ್ದ ರಾಜ್ಯ , ಕಂಬಳ ಕ್ರೀಡೆ ಇರುವ ರಾಜ್ಯ , ವಜ್ರ ಮುಷ್ಟಿ ಕುಸ್ತಿ ಇದ್ದ ರಾಜ್ಯ , ಶಿವಾಜಿ ಅವರ ಸೇನೆಯನ್ನು ಸೋಲಿಸಿದ ರಾಜ್ಯ , ಭಾರತದ ಮೊದಲನೇ ನವಮಿ ಸೇನಾ ಇದ್ದ ರಾಜ್ಯ , ಅರಬ್ ದೊರೆಗಳನ್ನು ಮೊದಲು ಸೋಲಿಸಿದ ರಾಜ್ಯ , ಇಮ್ಮಡಿ ಪುಲಕೇಶಿ – ರಣಧೀರ ಕಂಠೀರವ – ನೃಪತುಂಗ- ಕೆಂಪೇಗೌಡ – ಕೃಷ್ಣದೇವರಾಯ – ಸಂಗೊಳ್ಳಿ ರಾಯಣ್ಣ – ಕಿತ್ತೂರು ರಾಣಿ ಚೆನ್ನಮ್ಮ – ಬೆಳವಾಡಿ ಮಲ್ಲಮ್ಮ- ಮದಕರಿನಾಯಕ – ಚಿಕ್ಕ ದೇವರಾಜ ಒಡೆಯರ್ – ಇಂತ ವೀರರು ಇದ್ದ ಭೂಮಿ ಕರ್ನಾಟಕ.
ಇಂದಿನ ತಮಿಳುನಾಡು ಕೇರಳ ಆಂಧ್ರ ಮಹಾರಾಷ್ಟ್ರ ಗುಜರಾತ್ ಅನ್ನು ಆಳಿದವರು ನಾವು ಕನ್ನಡಿಗರು. ರಣಹದ್ದು ಗಂಡಭೇರುಂಡ ನಮ್ಮ ಚಿಹ್ನೆ , ಭಾರತದ ಯಾವುದೇ ರಾಜ್ಯದಲ್ಲಿಯೂ ಮೈಸೂರು ದಸರ ಮಾದರಿ ಆಚರಣೆ ಇಲ್ಲ. ಇದು ಕೇವಲ ಸಂಪ್ರದಾಯ ಪ್ರದರ್ಶನವಲ್ಲ ಬದಲಾಗಿ ಇದು ನಮ್ಮ ಯುದ್ದ ಕೌಶಲ್ಯ ಪ್ರದರ್ಶನ.
ಇಸ್ರೇಲ್ ದೇಶಕ್ಕೆ ಸಹಾಯ ಮಾಡಿದ್ದು ನಮ್ಮ ಮೈಸೂರು ಲಾನ್ಸರ್ಸ್.
ಇಂತಹ ಭೂಮಿಯ ಜನರ ಹಿಂದಿನ ಕೊಡುಗೆ ಮತ್ತು ಮುಂದಿನ ದಿನಗಳಲ್ಲಿ ಬರುವ ಸಮಸ್ಯೆಗಳನ್ನು ಎದುರುಸಲು ಕರ್ನಾಟಕ ರೆಜಿಮೆಂಟ್ ಅಗತ್ಯವಿದೆ.ಈ ಬಗ್ಗೆ ಗಹನವಾದ ಚಿಂತನೆ ನಡೆಯಲಿ.

