ಕೆಎಸ್ಐಸಿಗೆ ವಂಚನೆ: ಶೋರೂಂ ನ 8 ಮಂದಿ ವಿರುದ್ದ ಎಫ್ಐಆರ್

Spread the love

ಮೈಸೂರು: ಮೈಸೂರಿನ ಕಾಳಿದಾಸ ರಸ್ತೆಯಲ್ಲಿರುವ ಕೆ ಎಸ್ ಐ ಸಿ ಸಂಸ್ಥೆಗೆ 18.75 ಲಕ್ಷ ದುರುಪಯೋಗ ಮಾಡಿದ ಆರೋಪದ ಮೇಲೆ ಉಸ್ತುವಾರಿ ಸೇರಿದಂತೆ 8 ಮಂದಿ ವಿರುದ್ದ ಪ್ರಕರಣ ದಾಖಲಾಗಿದೆ.

ನಗರದ ಜಯಲಕ್ಷ್ಮಿಪುರಂ ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿದೆ.

ಕೆ.ಎಸ್.ಐ.ಸಿ ಕಾರ್ಖಾನೆ ವ್ಯವಸ್ಥಾಪಕರಾದ ಸಿದ್ದಲಿಂಗ ಪ್ರಸಾದ್ ಅವರು ಶಾಖೆಯ ಉಸ್ತುವಾರಿ ಯಶವಂತ್ ಕುಮಾರ್,ಸೇಲ್ಸ್ ಮನ್ ಗಳಾದ ರೇವಂತ್ ಕುಮಾರ್,ಪ್ರತಿಮಾ,ಶೋಭಾ,ಅಮ್ಜದ್ ಅಹಮದ್,ಮಹಮದ್ ಅಮೀರ್ ಹಾಗೂ ಅನು ಎಂಬುವರ ವಿರುದ್ದ ಪ್ರಕರಣ ದಾಖಲಿಸಿದ್ದಾರೆ.

2-09-2024 ರಿಂದ 31-05-2025 ರ ಅವಧಿಯಲ್ಲಿ ಒಟ್ಟು 18,75,100 ರೂ ದುರುಪಯೋಗ ಮಾಡಿಕೊಂಡಿದ್ದಾರೆಂದು ಆರೋಪಿಸಿ ಸಿದ್ದಲಿಂಗಪ್ರಸಾದ್ ಪ್ರಕರಣ ದಾಖಲಿಸಿದ್ದಾರೆ.

ಸರ್ಕಾರಿ ನೌಕರ ಗ್ರಾಹಕರಿಗೆ ಸಾಲ ನೀಡಲಾಗಿದ್ದು ನಕಲಿ ರಸೀತಿ ಸೃಷ್ಟಿಸಿ ಸಂಸ್ಥೆಗೆ ವಂಚನೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.