ಜೀರೋದಿಂದ ಹೀರೋ ಆದ ರಾಜು

Spread the love

(ಲೇಖನ:ಆನಂದ ಚನ್ನೇನಹಳ್ಳಿ)

ಬೆಂಗಳೂರು: ಆತ ತನ್ನೊಡಲ ಹಸಿವನ್ನು ನೀಗಿಸಿಕೊಳ್ಳಲು ದೂರದ ಆಂಧ್ರದ ತಿರುಪತಿಯಿಂದ ರಾಜಧಾನಿ ಬೆಂಗಳೂರಿಗೆ ಬಂದು ಕೆಲಸಕ್ಕಾಗಿ ಅಲೆದಾಡುತ್ತಿದ್ದ.

ಹಾಗೂ ಹೀಗೂ ಒಂದು ಸಣ್ಣ ಕ್ಷೌರದ ಅಂಗಡಿಯಲ್ಲಿ ಕೆಲಸ ಗಿಟ್ಟಿಸಿಕೊಂಡು ಹೊಟ್ಟೆ ಹೊರೆದುಕೊಂಡು ದಿನದೊಡುತ್ತಿದ್ದ.

ಪ್ರತಿದಿನ ತನ್ನ ಮಾಲೀಕನ ಆಣತಿಯಂತೆ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದ, ಆಂಧ್ರದ ರಾಜು ತನ್ನದೇ ಆದ ಗುರಿ, ಕನಸು ಇಟ್ಟುಕೊಂಡಿದ್ದ. ತನ್ನಂತೆ ಇತರರು ಅನ್ನಕ್ಕಾಗಿ ಪರದಾಡಬಾರದು ಹೆಣಗಾಡಬಾರದು ಎಂದು ಕನಸು ಕಂಡಿದ್ದ.

ಅದೇ ರೀತಿ ಪ್ರತಿ ತಿಂಗಳು ದುಡಿದ ತಾನು ಕೂಡಿಟ್ಟುಕೊಂಡಿದ್ದ ಹಣದಿಂದ ಒಂದು ಸಣ್ಣ ಕ್ಷೌರದ ಸೆಲ್ಯೂನ್ ಅಂಗಡಿ ಆರಂಭಿಸಿದ ರಾಜು.ಆದರೆ ಅದರಿಂದ ಸ್ವಲ್ಪ ನಷ್ಟ ಉಂಟಾಯಿತು. ಆದರೂ ಛಲ ಬಿಡದ ವಿಕ್ರಮನಂತೆ ತನ್ನ ಹಟ ಗುರಿ ಕನಸು ಇಟ್ಟುಕೊಂಡು ಮತ್ತೆ ಸಲೂನ್ ಶಾಪ್ ತೆರೆದ. ನಂತರ ದಿನ ದಿನೇ ಆ ಸೆಲ್ಯೂನ್ ಅಂಗಡಿ ರಾಜವಿನ ಕನಸನ್ನು ನನಸಾಗುವಂತೆ ಮಾಡಿತು.

ಪ್ರಾಮಾಣಿಕತೆ ಶ್ರದ್ದೆ ನಿಷ್ಠೆ ಪ್ರೀತಿಯಿಂದ ಕೆಲಸ ಮಾಡುತ್ತಿದ್ದ ರಾಜು ಈಗ ನೂರಾರು ಜನರ ಬಾಳಿಗೆ ಬದುಕಿಗೆ ಬೆಳಕಾಗಿ ಅವರ ಪಾಲಿಗೆ ಅನ್ನದಾತನಾಗಿದ್ದಾರೆ.

ನೂರಾರು ಜನರ ಪಾಲಿನ ಉದ್ಯೋಗ ದಾತ
ಒಂದು ಸಣ್ಣ ಸೆಲ್ಯೂನ್ ಅಂಗಡಿಯಲ್ಲಿ ಉದ್ಯೋಗಿಯಾಗಿದ್ದ ರಾಜು ಈಗ ದೊಡ್ಡ ದೊಡ್ಡ ಯುನಿ ಸೆಕ್ಸ್ ಸಲೂನ್ ಶಾಪ್ ಗಳ ಉದ್ಯಮಿ.

ಬೆಂಗಳೂರಿನ ಬಸವೇಶ್ವರನಗರದಲ್ಲಿ ಈಗ ನಾಲ್ಕು ಹೈಟೆಕ್ ಯುನಿಸೆಕ್ಸ್ ಶಾಪ್ ಗಳ ಮಾಲೀಕ ರಾಜು ನೂರಾರು ಜನರಿಗೆ ಉದ್ಯೋಗ ನೀಡಿ ಹತ್ತಾರು ಕುಟುಂಬಗಳ ಬದುಕಿಗೆ ಆಸರೆಯಾಗಿದ್ದಾರೆ.

ಗುಡ್ ಲುಕ್ ಮುಸ್ಟಾಚ್ ಹೀಗೆ ಹಲವಾರು ಬ್ರಾಂಡ್ ಗಳ ಹೆಸರಿನಲ್ಲಿ ನಾಲ್ಕಾರು ಸಲೂನ್ ಶಾಪ್‌ಗಳನ್ನು ತೆರೆದು ಸದ್ದಿಲ್ಲದೆ ನಿಷ್ಟೆಯಿಂದ ಸೇವೆ ಸಲ್ಲಿಸುತ್ತಿದ್ದಾರೆ.

ರಾಜು ಮತ್ತು ತಂಡದ ಕೆಲಸಗಾರರ ಕೈ ಚಳಕದಿಂದ ನೂರಾರು ಜನರ ಹೇರ್ ಸ್ಟೈಲ್ ಅನಾವರಣಗೊಳ್ಳುತ್ತಿದೆ. ಇವರ ಸಲೂನ್ ಶಾಪ್ ಗಳಿಗೆ ಈಗ ಎಲ್ಲಿಲ್ಲದ ಬೇಡಿಕೆ ಜಾಸ್ತಿಯಾಗಿದೆ.

ಸಾಮಾನ್ಯ ಜನರಿಂದ ಹಿಡಿದು ಸೆಲೆಬ್ರಿಟಿಗಳು ಹೈ ಪ್ರೊಫೈಲ್ ಜನರು ಈ ಸಲೂನ್ಗಳಿಗೆ ಭೇಟಿ ನೀಡಿ ತಮ್ಮ ಸೌಂದರ್ಯವರ್ಧಕವನ್ನು ಹೆಚ್ಚಿಸಿಕೊಳ್ಳುತ್ತಿದ್ದಾರೆ.

ತುತ್ತು ಅನ್ನವನ್ನು ಅರಸಿ ಆಂಧ್ರದ ತಿರುಪತಿಯಿಂದ ಬೆಂಗಳೂರಿನ ಬಸವೇಶ್ವರನಗರದಲ್ಲಿ ನೂರಾರು ಜನರ ಬಾಳಿಗೆ ಬೆಳಕಾದ ರಾಜವಿನ ಸಾಧನೆಗೆ ಯುವ ಸಂಪರ್ಕ ಸಂಸ್ಥೆ ಸನ್ಮಾನಿಸಿ ಗೌರವಿಸಿದೆ.

ರಾಜುವಿನ ಯಶಸ್ಸು ಇನ್ನಷ್ಟು ಎತ್ತರಕೇರಿ ಸಾವಿರಾರು ಜನರ ಬಾಳಿಗೆ ಬದುಕಾಗಲಿ, ಲಕ್ಷಾಂತರ ಜನರ ಸೌಂದರ್ಯ ವರ್ಗ ಹೆಚ್ಚಿಸಲಿ ಎಂಬುದು ಎಲ್ಲರ ಆಶಯ.

ಪ್ರತಿ ಯಶಸ್ಸಿನ ಹಿಂದೆ ಒಬ್ಬ ಮಹಿಳೆ ಇರುತ್ತಾಳೆ ಎಂಬುದಕ್ಕೆ ರಾಜು ಉದಾಹರಣೆ ರಾಜವಿನ ಕನಸು ನನಸಾಗಲು ಅವರ ಪತ್ನಿ ಹಗಲಿರಳು ಶ್ರಮಿಸಿ ಅವರಿಗೆ ಬೆಂಬಲವಾಗಿ ನಿಂತು ಎಲೆಮರೆಕಾಯಿಯಂತೆ ರಾಜುಗೆ ಶಕ್ತಿ ನೀಡುತ್ತಿದ್ದಾರೆ.

ಅವರಿಗೂ ಒಳ್ಳೆಯದಾಗಲಿ ಇನ್ನಷ್ಟು ರಾಜುಗೆ ಅವರು ಬೆಂಬಲ ನೀಡಿ ಎತ್ತರಕ್ಕೆ ಏರಲು ಸಹಾಯ ಮಾಡಲಿ ಎಂಬುದೇ ಎಲ್ಲರ ಆಶಯ