ಮೈಸೂರು: ಕಳೆದ ಒಂದು ವಾರದಿಂದ ಮೈಸೂರು ದಸರಾ ಮಾಹೋತ್ಸವದ ಯುವ ಸಂಭ್ರಮವು ಯುವ ಮನಸ್ಸುಗಳು ಮತ್ತು ಪ್ರೇಕ್ಷಕರಿಗೆ ಮನರಂಜನೆ ನೀಡಿ ಅದ್ಧೂರಿಯಾಗಿ ತೆರೆ ಕಂಡಿತು.
ನಗರದ ಮಾನಸ ಗಂಗೋತ್ರಿ ಬಯಲು ರಂಗಮಂದಿರದಲ್ಲಿ ಗುರುವಾರ ನಡೆದ 9ನೇ ಹಾಗೂ ಅಂತಿಮ ದಿನದ ಯುವ ಸಂಭ್ರಮ ಕಾರ್ಯಕ್ರಮದಲ್ಲಿ ಜನಸ್ತೋಮ ಕಿಕ್ಕಿರಿದು ತುಂಬಿತ್ತು.
ಕನ್ನಡ ನಾಡು ನುಡಿ, ರಾಷ್ಟ್ರೀಯ ಭಾವೈಕ್ಯತೆ, ದೇಶ ಭಕ್ತಿ, ಶಾಸ್ತ್ರೀಯ ಕಲೆಗಳು, ಐತಿಹಾಸಿಕ, ಪೌರಾಣಿಕ ಹಾಗೂ ಜಾನಪದ ಸಿನಮಾಧಾರಿತ ನೃತ್ಯ ರೂಪಕಗಳು ಯುವ ಸಮೂಹವನ್ನು ಕುಣಿವಂತೆ ಮಾಡಿತು.
ಶ್ರೀರಂಗಪಟ್ಟಣದ ಡಿ ಪಾಲ್ ಕಾಲೇಜು ವಿದ್ಯಾರ್ಥಿಗಳು ಹಲವು ಬಾರಿ ಚಿನ್ನದ ಅಂಬಾರಿ ಹೊತ್ತು ಕಾಡಾನೆ ಸೆರೆ ಕಾರ್ಯಾಚರಣೆಯಲ್ಲಿ ಹುತಾತ್ಮವಾದ ವೀರ ಅರ್ಜುನ ಆನೆ ಕುರಿತ ನೃತ್ಯ ರೂಪಕದ ಮೂಲಕ ಸ್ಮರಿಸಿದರು.
ಈ ವೇಳೆ ಜನರು ಎದ್ದು ನಿಂತು ಅರ್ಜುನನಿಗೆ ಗೌರವ ವಂದನೆ ಸಲ್ಲಿಸಿದರು.
ಕರ್ನಾಟಕ ರತ್ನ ಸಾಹಸ ಸಿಂಹ ಡಾ.ವಿಷ್ಣುವರ್ಧನ್ ಹುಟ್ಟುಹಬ್ಬದ ಪ್ರಯುಕ್ತ ಮೈಸೂರಿನ ಬನುಮಯ್ಯ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ವಿಷ್ಣುವರ್ಧನ್ ಅಭಿನಯದ ಹಾಡುಗಳಿಗೆ ಹೆಜ್ಜೆ ಹಾಕಿದಾಗ ಯುಬಜನರು ಕುಣಿದು ಕುಪ್ಪಳಿಸಿದರು.
ಗುಂಡ್ಲುಪೇಟೆಯ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ತಂಡ ಬ್ರಿಟಿಷರಿಗೆ ಸಿಂಹ ಸ್ವಪ್ನವಾಗಿದ್ದ ಕಿತ್ತೂರು ರಾಣಿ ಚೆನ್ನಮ್ಮ ಹಾಗೂ ವೀರ ಯೋಧ ಕಾಂತ್ರಿವೀರ ಸಂಗೊಳ್ಳಿ ರಾಯಣ್ಣ ಅವರ ಕುರಿತು ಅಮೋಘ ನೃತ್ಯ ಮಾಡಿ ಮೆಚ್ಚುಗೆ ಪಡೆದರು.
ಹೆಚ್.ಡಿ.ಕೋಟೆಯ ಎಂ.ಎಂ.ಕೆ ಇಂಡಿಪೆಂಡೆಂಟ್ ಪಿಯು ಕಾಲೇಜು ವಿದ್ಯಾರ್ಥಿಗಳು ಪೌರಾಣಿಕ ಬಾರಮ್ಮ ಕಾಳಿ ಬಾರಮ್ಮ ಎಂಬ ಕಾಳಿಕಾಂಭ ದೇವಿ ಹಾಡಿಗೆ ನೃತ್ಯ ಮಾಡಿದರು.
ವಿರಾಜಪೇಟೆಯ ಸೆಂಟ್ ಎನಿಸ್ ಪದವಿ ಕಾಲೇಜಿನ ವಿದ್ಯಾರ್ಥಿಗಳು ಮಾಡಿದ ಚಿತ್ರದುರ್ಗದ ಕಲ್ಲಿನ ಕೋಟೆಯ ಓಬವ್ವ ಶತ್ರುಗಳನ್ನು ಸಂಹಾರ ಮಾಡುವ ನೃತ್ಯ ಗಮನ ಸೆಳೆಯಿತು.
ಕೃಷ್ಣಮೂರ್ತಿಪುರಂನ ಶಾರದ ನೆಲೆ ಉಚಿತ ವಿದ್ಯಾರ್ಥಿ ನಿಲಯದ ಮಕ್ಕಳು ಜಮ್ಮು ಕಾಶ್ಮೀರದ ಪೆಹಲ್ಗಾಮ್ ಅಮಾಯಕರನ್ನು ಗುಂಡಿಟ್ಟು ಕೊಂದ ಭಯತ್ಪೋಧಾಕರನ್ನು ಭಾರತೀಯ ಸೇನೆ ಭಯೋತ್ಪಾಧಕರ ಹುಟ್ಟಡಿಗಿಸಿದ ನೃತ್ಯ ಮಾಡಿದರು.ಆಗ ಯುವ ಸಮೂಹ ಎದ್ದು ನಿಂತು ಸಲ್ಯೋಟ್ ಮಾಡಿದರು.
ಮೈಸೂರಿನ ಜೆಎಸ್ಎಸ್ ಸ್ಕೂಲ್ ಆಪ್ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿನಿಯರು ನಂದಾನಂದ ಮುಕುಂದ, ಕೈಯಲ್ಲಿ ಬಿಲ್ಲು ಹಿಡಿದೋನು ರಾಮ, ಗದೆಯನ್ನು ಹಿಡಿದಿರೋನು ರಾಮ, ಗೋವಿಂದ ಗುರು ಹರಿ ಗೋಪಾಲ ರಾಧರಮಣ ಗೋಪಾಲ ಎಂದು ಶ್ರೀ ಕೃಷ್ಣನನ್ನು ಸ್ಮರಿಸಿದರು.
ಅಗ್ನಿ ಸಾಕ್ಷಿ ಧಾರವಾಹಿಯ ಕಿರುತರೆ ನಟ ರಾಜೇಶ್ ದ್ರುವ ಅವರ ಪೀಟರ್ ಚಿತ್ರದ ಸುಂದರಿ ಸುಂದರಿ ಹಾಡನ್ನು ಪ್ರದರ್ಶಿಸಲಾಯಿತು.
ಪೀಟರ್ ಚಿತ್ರ ತಂಡಕ್ಕೆ ಶಾಸಕ ತನ್ವೀರ್ ಸೇಠ್ ಅವರು ಗೌರವ ಸಮರ್ಪಣೆ ಮಾಡಿದರು.