ಶ್ರೀ ವಿಶ್ವಾವಸು ನಾಮ ಸಂವತ್ಸರದ ಪಂಚಾಂಗ ವಿತರಣೆ

Spread the love

ಮೈಸೂರು: ನಗರದ ನಾರಾಯಣ ಶಾಸ್ತ್ರಿ ರಸ್ತೆಯಲ್ಲಿರುವ ಪುಸ್ತಕಂ ಶ್ರೀ ಸಂತಾನ ಗೋಪಾಲಸ್ವಾಮಿ ದೇವಸ್ಥಾನದಲ್ಲಿ ಯುಗಾದಿ ಹಬ್ಬದ ಅಂಗವಾಗಿ ಶ್ರೀ ವಿಶ್ವಾವಸು ನಾಮ ಸಂವತ್ಸರದ ಪಂಚಾಂಗ ವಿತರಿಸಲಾಯಿತು.

ಪಂಚಾಂಗವನ್ನು ವಿತರಿಸಿದ ಶಾಸಕ ಟಿ ಎಸ್ ಶ್ರೀವತ್ಸ ಅವರು ಮಾತನಾಡಿ, ಯುಗಾದಿ ವರ್ಷಾಚರಣೆ ಬೇವು ಬೆಲ್ಲ ಕಹಿಸಿಹಿಯ ಸಂಕೇತ ಎಂದು ಹೇಳಿದರು.

ಕಷ್ಟಸುಖಗಳ ಸಮಬಾಳಿನ ಜೀವನವನ್ನು ಸರಿಯಾದ ಸಂಧರ್ಭದಲ್ಲಿ ನಡೆಸಬೇಕಾದರೆ ಪಾಂಚಾಂಗದ ನಿರ್ಧಾರ ಮುಖ್ಯವಾಗುತ್ತದೆ, ಸಂವತ್ಸರ ಮಾಸ, ತಿಥಿ ನಕ್ಷತ್ರ ರಾಶಿಯ ಕಾಲದ ಘಳಿಗೆಯ ಮಾಹಿತಿ ಮೊದಲು ತಿಳಿದುಕೊಳ್ಳಬಹುದು, ಭಾರತದ ಇತಿಹಾಸದ ಕೆಲವು ವಿಷಯಗಳು ಪಂಚಾಂಗದಲ್ಲಿ ಮಾಹಿತಿ ನೀಡುತ್ತದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಸಂತಾನ ಗೋಪಾಲಸ್ವಾಮಿ ದೇವಸ್ಥಾನದ ಪ್ರಧಾನ ಆರಾಧಕರಾದ ರಾಮಾನುಜಂ, ಕಾಳಿದಾಸ ರಸ್ತೆಯ ಲಕ್ಷ್ಮೀ ನರಸಿಂಹಸ್ವಾಮಿ ದೇವಸ್ಥಾನದ ಸಿಇಒ ಯೋಗ ನರಸಿಂಹನ್ (ಮುರುಳಿ), ವೀರ ರಾಘವನ್,ನಗರ ಪಾಲಿಕೆ ಮಾಜಿ ಸದಸ್ಯರಾದ ಪ್ರಮೀಳಾ ಭರತ್, ಚಾಮರಾಜ ಕ್ಷೇತ್ರದ ಬಿಜೆಪಿ ಅಧ್ಯಕ್ಷ ದಿನೇಶ್ ಗೌಡ, ಮೂಡಾ ಮಾಜಿ ಸದಸ್ಯರಾದ ನವೀನ್ ಕುಮಾರ್, ಅಗಸ್ತ್ಯ ಸೊಸೈಟಿಯ ಕಲ್ಕೆರೆ ನಾಗರಾಜ್,ವಿಕ್ರಂ ಅಯ್ಯಂಗಾರ್ ,ಶ್ರೀ ರಾಮಾನುಜ ಸಹಕಾರ ಸಂಘದ ರಾಜಗೋಪಾಲ್, ಟಿ.ಎಸ್ ಅರುಣ್, ಚಕ್ರಪಾಣಿ, ಸುದರ್ಶನ್, ವಿಘ್ನೇಶ್ವರ ಭಟ್, ಚರಣ್, ಸತೀಶ್, ರಾಮು, ರಾಜೇಂದ್ರ, ರಾಮ್ ಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು.