ಯುವ ಪೀಳಿಗೆಗೆ ಇತಿಹಾಸ, ಭಾಷೆ ಬಗ್ಗೆ ಅರಿವು ಮೂಡಿಸಿ- ಹರೀಶ್ ಗೌಡ

Spread the love

ಮೈಸೂರು: ಯುವ ಪೀಳಿಗೆಗೆ ಕನ್ನಡ ನಾಡಿನ ಇತಿಹಾಸ, ಸಂಸ್ಕೃತಿ, ಕಲೆ, ಭಾಷೆ ಬಗ್ಗೆ ಅರಿವು ಮೂಡಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದು ಶಾಸಕ ಹರೀಶ್ ಗೌಡ ತಿಳಿಸಿದರು.

ನಗರದ ದಿವಾನ್ಸ್ ರಸ್ತೆಯಲ್ಲಿರುವ ಲೋಕಾಯುಕ್ತ ಕಚೇರಿ ಮುಂಭಾಗ ಮೈಸೂರು ಯುವ ಬಳಗದ ವತಿಯಿಂದ ಹಮ್ಮಿಕೊಂಡಿದ್ದ 69ನೇ ಕನ್ನಡ ರಾಜ್ಯೋತ್ಸವದಲ್ಲಿ ಪಾಲ್ಗೊಂಡು
ಹಿರಿಯ ಆಟೋ ಚಾಲಕರಾದ ಜಗದೀಶ್, ಬಸವರಾಜ್, ಪುರುಷೋತ್ತಮ್, ಜಗ್ಗಪ್ಪ ಅವರನ್ನು ಸನ್ಮಾನಿಸಿ ಅವರು ಮಾತನಾಡಿದರು.

ಕನ್ನಡ ಭಾಷೆ ಕೇವಲ ಸಂವಹನ ಮಾಧ್ಯಮ ಮಾತ್ರವಲ್ಲ. ಅದು ನಮ್ಮ ನೆಲ ಹಾಗೂ ಅನೇಕ ತಲೆಮಾರುಗಳ ಸಂಸ್ಕೃತಿಯನ್ನು ಕಾಪಿಟ್ಟುಕೊಂಡು ಬಂದ ಮಾಧ್ಯಮ. ಆದ್ದರಿಂದಲೇ ಭಾಷೆಗೂ ನೆಲದ ಸಂಸ್ಕೃತಿಗೂ ಅವಿನಾಭಾವ ಸಂಬಂಧವಿದೆ. ಸ್ವಾಭಿಮಾನ ಹಾಗೂ ಸಹಬಾಳ್ವೆಯ ಸಂಕೇತವೇ ರಾಜ್ಯೋತ್ಸವ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕರ್ನಾಟಕ ಹಿತರಕ್ಷಣ ವೇದಿಕೆ ಅಧ್ಯಕ್ಷ ವಿನಯ್ ಕುಮಾರ್, ಗುರುರಾಜ್ ಶೆಟ್ಟಿ, ನವೀನ್, ಉತ್ತನಹಳ್ಳಿ ಶಿವಣ್ಣ ,ರವಿ ಚಂದ್ರ ,ಮಂಜುಳಾ ಶಾಂತ ,ಮಂಗಳ, ತೊಣಚಿ ಕೊಪ್ಪಲ್ ರಾಜು, ಪವನ್, ಹರೀಶ್ ಗೌಡ, ನಂಜುಂಡಸ್ವಾಮಿ,ಮಂಜುನಾಥ್, ನಿತಿನ್, ಶರವಣ,ಪ್ರಜ್ವಲ್ ರೈನಾ, ಮಹಾನ್ ಶ್ರೇಯಸ್ ಮತ್ತಿತರರು ಉಪಸ್ಥಿತರಿದ್ದರು.